ಮರ್ಸಿಲೆಸ್ಸಾಗಿ ಶೂಟೌಟ್ ಮಾಡಿ…: ಎಚ್.ಡಿ.ಕೆ
ಮೈಸೂರು

ಮರ್ಸಿಲೆಸ್ಸಾಗಿ ಶೂಟೌಟ್ ಮಾಡಿ…: ಎಚ್.ಡಿ.ಕೆ

December 25, 2018

ಜೆಡಿಎಸ್ ಮುಖಂಡ ಪಕಾಶ್ ಹತ್ಯೆ ಹಂತಕರನ್ನು ಮರ್ಸಿಲೆಸ್ಸಾಗಿ ಶೂಟೌಟ್ ಮಾಡಿ, ತೊಂದರೆ ಇಲ್ಲ ಎಂದು ಮುಖ್ಯಮಂತಿ ಹೆಚ್.ಡಿ. ಕುಮಾರಸ್ವಾಮಿ ಮಂಡ್ಯ ಜಿಲ್ಲಾ ವರಿಷ್ಠಾಧಿಕಾರಿ ಶಿವ ಪ್ರಕಾಶ್ ದೇವರಾಜ್ ಅವರಿಗೆ ಸೂಚನೆ ನೀಡಿದ್ದಾರೆ.

ಪಕರಣ ಸಂಬಂಧ ಮೊಬೈಲ್‍ನಲ್ಲಿ ಎಸ್ಪಿ ಅವರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಜೆಡಿಎಸ್ ಮುಖಂಡ ಪಕಾಶ್ ತುಂಬಾ ಒಳ್ಳೆಯ ವ್ಯಕ್ತಿ. ಆತನನ್ನು ಹಾಡಹಗಲೇ ನಡುರಸ್ತೆಯಲ್ಲಿ ಕೊಲೆ ಮಾಡಿದ್ದಾರೆ. ಇದರಿಂದ ನನಗೆ ತುಂಬಾ ನೋವಾಗಿದೆ. ಹೀಗಾಗಿ ನೀವು ಯಾವ ರೀತಿ ಹ್ಯಾಂಡಲ್ ಮಾಡುತ್ತೀರೋ ಗೊತ್ತಿಲ್ಲ. ಇಂತಹ ವ್ಯಕ್ತಿಗಳನ್ನು ಕೊಲೆ ಮಾಡುವವರನ್ನು ಮರ್ಸಿಲೆಸ್ ಆಗಿ ಶೂಟೌಟ್ ಮಾಡಿ ಎಂದು ಸೂಚನೆ ನೀಡಿದ್ದಾರೆ.

ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮದ್ದೂರಿನಲ್ಲಿ ಪಕಾಶ್ಅಂ ತಹ ಒಳ್ಳೇ ವ್ಯಕ್ತಿಯನ್ನು ಹಾಡಹಗಲಲ್ಲೇ ಕೊಲೆ ಮಾಡಿದ್ದಾರೆ ಅನ್ನುವ ಮಾಹಿತಿ ಕೇಳಿದಾಗ ಮಾನವ ಸಹಜವಾದ ಉದ್ವೇಗದಿಂದ ಶೂಟ್ ಮಾಡಿ ಎಂದು ಹೇಳಿದ್ದೇನೆ ಹೊರತು ಮುಖ್ಯಮಂತ್ರಿಯಾಗಿ ಆದೇಶ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪಕಾಶ್ ಒಳ್ಳೆಯ ವ್ಯಕ್ತಿ. ಜನಗಳಿಗೆ ಉತ್ತಮವಾಗಿ ಕೆಲಸ ಮಾಡಿಕೊಂಡು ಹೆಸರು ಗಳಿಸಿದ್ದ. ಈ ಹಿಂದೆ ಜೋಡಿ ಕೊಲೆ ಮಾಡಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದ ಎರಡೇ ದಿನದಲ್ಲಿ ಅವರುಗಳು ಈತನನ್ನು ಕೊಲೆ ಮಾಡಿದ್ದಾರೆ ಎಂದು ತಿಳಿದ ತಕ್ಷಣ ಸಹಜವಾಗಿಯೇ ನಾನು ಉದ್ವೇಗಗೊಂಡು ಮಾತನಾಡಿದ್ದೇನೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ನನ್ನ ಈ ಮಾತನ್ನೇ ಕೆಲವರು ಮಾನವ ಹಕ್ಕು ಉಲ್ಲಂಘನೆ ಎನ್ನುವ ರೀತಿ ವಿಶ್ಲೇಷಣೆ ಮಾಡುತ್ತಾರೆ. ಕೊಲೆ ಮಾಡಿ ಜೈಲಿಗೆ ಹೋದವರು ಜಾಮೀನಿನ ಮೇಲೆ ಬಂದು ಇನ್ನೊಂದು ಕೊಲೆ ಮಾಡಿದರೆ ಅದಕ್ಕೆ ಏನನ್ನಬೇಕು ಎಂದು ಸಿಎಂ ಕುಮಾರಸ್ವಾಮಿ ಪಶ್ನಿಸಿದರು.

Translate »