ಬೆಳೆ ಪರಿಹಾರಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ
ಮಂಡ್ಯ

ಬೆಳೆ ಪರಿಹಾರಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ

November 29, 2018

ಮದ್ದೂರು:  ಬೆಳೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಪಟ್ಟಣದಲ್ಲಿ ಬುಧವಾರ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ಪ್ರತಿಭಟನೆ ನಡೆಯಿತು.ತಾಲೂಕು ಕಚೇರಿಯ ಮುಂಭಾಗ ಸಮಾವೇಶಗೊಂಡ ವೇದಿಕೆಯ ಕಾರ್ಯ ಕರ್ತರು, ರೈತರು ಬೆಳೆ ಪರಿಹಾರ ನೀಡುವಂತೆ ಘೋಷಣೆ ಕೂಗಿದರು.

ತಾಲೂಕಿನ ಕೊಪ್ಪದ ಎನ್‍ಎಸ್‍ಎಲ್ ಕಾರ್ಖಾನೆಯ ಕಲುಷಿತ ನೀರು ನದಿಗೆ ಸೇರಿ ನೀರು ಕಲುಷಿತಗೊಂಡಿರುವುದ ರಿಂದ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಹಾಗೂ ಪರಿಸರ ಮಾಲಿನ್ಯ ಅಧಿಕಾರಿಗಳು ನದಿಯ ನೀರನ್ನು ಮುಂದಿನ ಆದೇಶವ ರೆಗೆ ಬಳಸದಂತೆ ರೈತರಿಗೆ ಸೂಚಿಸಿದ್ದಾರೆ. ಇದ್ದರಿಂದ ಶಿಂಷಾನದಿಯ ಎಡ ಮತ್ತು ಬಲದಂಡೆಗಳ ರೈತರ ಬೆಳೆಗಳಿಗೆ ನೀರು ಹರಿಸಲು ಸಾಧ್ಯವಾಗದೆ ಬೆಳೆ ಒಣಗುತ್ತಿದ್ದು, ಈ ಭಾಗÀದ ರೈತರಿಗೂ ಬೆಳೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಬಳಿಕ ತಹಶೀಲ್ದಾರ್ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ಉಮಾಶಂಕರ್, ಜಿಲ್ಲಾ ಉಪಾಧ್ಯಕ್ಷ ಮಹಲಿಂಗು, ತಾಲೂಕು ಅಧ್ಯಕ್ಷ ತಿಪ್ಪೂರು ರಾಜೇಶ್, ಮುಖಂಡರಾದ ಸಂಪತ್, ನಿಂಗರಾಜು, ಹೊಂಬಾಳಯ್ಯ, ಕೃಷ್ಣ, ಸತೀಶ್, ಮಾದಮ್ಮ, ಕೆಂಪಮ್ಮ, ಯಾಕುಬ್, ನಿಂಗಮ್ಮ, ಯೋಗೇಶ್ ಪಾಲ್ಗೊಂಡಿದ್ದರು.

Translate »