ಪರಭಾಷಿಕರಿಗೂ ಕನ್ನಡ ಕಲಿಕೆಯ ವಾತಾವರಣ ಸೃಷ್ಟಿಸಿ
ಮಂಡ್ಯ

ಪರಭಾಷಿಕರಿಗೂ ಕನ್ನಡ ಕಲಿಕೆಯ ವಾತಾವರಣ ಸೃಷ್ಟಿಸಿ

November 29, 2018

ಕೆ.ಆರ್.ಪೇಟೆ: ಕರ್ನಾಟಕ ರಾಜ್ಯಕ್ಕೆ ಬರುವ ಪರಭಾಷಿಕರಿಗೆ ಕನ್ನಡ ಕಲಿಯದೇ ಇದ್ದರೆ, ಇಲ್ಲಿ ಉಳಿಗಾಲವಿಲ್ಲ ಎಂಬ ವಾತಾವರಣವನ್ನು ಸೃಷ್ಟಿಸಬೇಕಾದ ಅಗತ್ಯವಿದೆ. ಇಲ್ಲದಿದ್ದರೆ ರಾಜಧಾನಿ ಬೆಂಗಳೂರು ಕನ್ನಡಿಗರ ಕೈ ತಪ್ಪುವ ಅಪಾಯವಿದೆ ಎಂದು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಹೇಳಿದರು.

ಪಟ್ಟಣದ ಸಾಹುಕಾರ್ ಚನ್ನೇಗೌಡ ಕಾಂಪ್ಲೆಕ್ಸ್ ಆವರಣದಲ್ಲಿ ತಾಲೂಕು ಕುವೆಂಪು ಕನ್ನಡ ಗೆಳೆಯರ ಬಳಗ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಟ್ರಸ್ಟ್ ಉದ್ಘಾಟನೆಯ ಅಂಗವಾಗಿ ಬಡವರಿಗೆ ಉಚಿತ ಗ್ಯಾಸ್ ವಿತರಣೆ ಮಾಡಿ ಅವರು ಮಾತನಾಡಿದರು.

ರಾಜಧಾನಿ ಬೆಂಗಳೂರಿನಲ್ಲಿ ವಿಶ್ವದ ನೂರಾರು ಭಾಷೆ ಮಾತ ನಾಡುವ ಜನರು ಬಂದು ಆಶ್ರಯ ಪಡೆದುಕೊಂಡಿದ್ದಾರೆ. ಇವರೆಲ್ಲರೂ ಅವರ ಭಾಷೆಯಲ್ಲಿಯೇ ಮಾತನಾಡುವ ಮೂಲಕ ಕನ್ನಡ ಭಾಷೆಯನ್ನು ಅಸಡ್ಡೆಯಿಂದ ನೋಡುತ್ತಿದ್ದಾರೆ. ಇದರಿಂದ ಕನ್ನಡಿಗರು ಅಲ್ಪ ಸಂಖ್ಯಾತರಾಗಿ ಜೀವನ ನಡೆಸುವಂತಾಗಿದೆ. ಕನ್ನಡಪರ ಸಂಘಟನೆಗಳ ಹೋರಾಟದ ಫಲವಾಗಿ ಕನ್ನಡಿಗರು ಸ್ವಲ್ಪ ಉಸಿರಾಡು ವಂತಾಗಿದೆ. ಹಾಗಾಗಿ, ಬೆಂಗಳೂರಿನಲ್ಲಿ ವಾಸಿಸುವ ಪ್ರತಿಯೊಬ್ಬರೂ ಕನ್ನಡ ಮಾತನಾಡುವಂತಾಗಬೇಕು. ಕನ್ನಡ ಕಲಿಯದೇ ಇದ್ದರೆ ಕರ್ನಾಟದಲ್ಲಿ ನಮಗೆ ಉಳಿಗಾಲವಿಲ್ಲ ಎಂಬ ವಾತಾವರಣವನ್ನು ಸರ್ಕಾರವು ಸೃಷ್ಟಿ ಮಾಡಬೇಕು ಎಂದು ತಿಳಿಸಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇದುವರೆ ವಿಗೂ ರಾಜ್ಯದ ಯಾವುದೇ ರೈತರ ಒಂದೇ ಒಂದು ರೂಪಾಯಿ ಸಾಲ ಮನ್ನಾ ಮಾಡಿಲ್ಲ. ಆದರೂ ಸಹ ಹೋದಲ್ಲಿ ಬಂದಲ್ಲಿ 40ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದೇನೆ. ಹಾಗೆ ಹೀಗೆ ಎಂದು ಸುಮಾರು 6 ತಿಂಗಳಿನಿಂದ ಸುಳ್ಳು ಹೇಳುತ್ತಿದ್ದಾರೆ. ಇನ್ನಾ ದರೂ ರೈತರ ಸಾಲವನ್ನು ಮಾಡಲಿ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಲಿ ಎಂದು ಒತ್ತಾಯ ಮಾಡಿದರು. ಈ ವೇಳೆ 6 ಮಂದಿ ಬಡ ಕುಟುಂಬಗಳಿಗೆ ಉಚಿತವಾಗಿ ಗ್ಯಾಸ್ ಅನ್ನು ಕೆ.ಬಿ. ಚಂದ್ರ ಶೇಖರ್ ವಿತರಣೆ ಮಾಡಿದರು. ಕೆ.ಸಿ.ರಾಮಚಂದ್ರೇಗೌಡ ಅವರಿಗೆ ಕುವೆಂಪು ಟ್ರಸ್ಟ್ ವತಿಯಿಂದ ದ್ವಿಚಕ್ರ ವಾಹನ ನೀಡಲಾಯಿತು.
ಸಾಧಕರಿಗೆ ಸನ್ಮಾನ: ತಾಲೂಕಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಪಟ್ಟಣದ ಬಸವೇಶ್ವರ ದೇವಾಲಯದ ಶ್ರೀಗಳಾದ ಡಾ.ವಿರೂಪಾಕ್ಷಿ ರಾಜಯೋಗಿ ಸ್ವಾಮೀಜಿ, ರಾಜ್ಯ ನಾಟಕ ಅಕಾಡೆಮೆ ಪ್ರಶಸ್ತಿ ವಿಜೇತರಾದ ಕೆ.ಎನ್. ತಮ್ಮಯ್ಯ, ದಲಿತ ಹೋರಾಟಗಾರ ಡಾ.ಬಸ್ತಿ ರಂಗಪ್ಪ, ಶಿಕ್ಷಕ ಡಾ.ಕೆ.ಎಸ್. ಚಂದ್ರು, ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ಊಟ ನೀಡುತ್ತಿರುವ ಕ್ಯಾಂಟೀನ್ ದಿನೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮೀ ಸ್ವಾಮಿನಾಯಕ್, ಕುವೆಂಪು ಗೆಳೆಯರ ಬಳಗದ ಅಧ್ಯಕ್ಷ ಮಿಲ್ ಮಂಜು, ಮನ್‍ಮುಲ್ ನಿರ್ದೇಶಕ ರವಿ, ಪುರಸಭೆಯ ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷೆ ರೂಪಾ, ಪುರಸಭಾ ಸದಸ್ಯರಾದ ಹೆಚ್.ಕೆ.ಅಶೋಕ್, ಕೆ.ಗೌಸ್‍ಖಾನ್, ಡಿ.ಪ್ರೇಮ ಕುಮಾರ್, ಕೆ.ಟಿ.ಚಕ್ರಪಾಣಿ, ಕೆ.ಬಿ.ನಂದೀಶ್, ನಂಜುಂಡಯ್ಯ, ನವೀದ್, ಟಿಎಪಿಸಿಎಂಎಸ್ ಅಧ್ಯಕ್ಷ ಎ.ಎಸ್.ಶ್ರೀಧರ್, ಉಪಾಧ್ಯಕ್ಷ ಬಿ.ಎ.ಸುರೇಶ್, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ರಾಮಕೃಷ್ಣ, ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಕೆ.ಎಸ್.ಕುಮಾರ್, ಉಪಾಧ್ಯಕ್ಷ ರಾದ ಎಸ್.ರವಿ, ನಟರಾಜ್, ಮಹಿಳಾ ಘಟಕದ ಅಧ್ಯಕ್ಷೆ ಮಂಗಳಾ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚೇತನಾಮಹೇಶ್, ಕುವೆಂಪು ಸೇವಾ ಟ್ರಸ್ಟ್ ಉಪಾಧ್ಯಕ್ಷ ಬಾವಾಜಿ ಚಂದ್ರು, ಕಾರ್ಯದರ್ಶಿ ಸೈಯದ್ ರೋಷನ್, ಖಜಾಂಚಿ ನಾಗೇಶ್, ಮಾಧ್ಯಮ ಕಾರ್ಯದರ್ಶಿ ವಿ.ಲೋಕೇಶ್, ಮುಖಂಡರಾದ ಅಂಬರೀಶ್, ಕೆ.ಆರ್.ರವೀಂದ್ರಬಾಬು ಇತರರು ಇದ್ದರು.

Translate »