ಜೆಡಿಎಸ್‍ನ ಇನ್ನೂ 20 ಶಾಸಕರು ರಾಜೀನಾಮೆಗೆ ಸಜ್ಜಾಗಿದ್ದಾರೆ
ಮೈಸೂರು

ಜೆಡಿಎಸ್‍ನ ಇನ್ನೂ 20 ಶಾಸಕರು ರಾಜೀನಾಮೆಗೆ ಸಜ್ಜಾಗಿದ್ದಾರೆ

September 15, 2019

ಕೆ.ಆರ್.ಪೇಟೆ,ಸೆ.14-ಮಾಜಿ ಪ್ರಧಾನಿ ಹೆಚ್.ಡಿ.ದೇವೇ ಗೌಡ ಮತ್ತು ಅವರ ಮಕ್ಕಳ ಕಿರುಕುಳದಿಂದ ಬೇಸತ್ತಿರುವ ಜೆಡಿಎಸ್‍ನ ಇನ್ನೂ 20 ಶಾಸಕರು ನನ್ನಂತೆಯೇ ರಾಜೀನಾಮೆ ನೀಡಿ ಹೊರ ಬರಲು ಸಜ್ಜಾಗಿದ್ದಾರೆ ಎಂದು ಅನರ್ಹ ಶಾಸಕ ಕೆ.ಸಿ.ನಾರಾಯಣ ಗೌಡ ಹೊಸ ಬಾಂಬ್ ಸಿಡಿಸಿದರು.

ಕೆ.ಆರ್.ಪೇಟೆಯಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಜೆಡಿಎಸ್‍ನಲ್ಲಿ ಎಲ್ಲವೂ ಸರಿ ಇಲ್ಲ. ಸದ್ಯದಲ್ಲಿಯೇ ಜೆಡಿಎಸ್‍ನ ಕೆಲವು ಶಾಸಕರು ರಾಜೀನಾಮೆ ನೀಡಿ ಬಿಜೆಪಿಗೆ ಸೇರಲು ಸಜ್ಜಾಗಿದ್ದಾರೆ ಎಂದು ಹೇಳಿದರು.

ಜೆಡಿಎಸ್‍ನಲ್ಲಿ ಇಷ್ಟೆಲ್ಲಾ ಬೆಳವಣಿಗೆಗೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರೇ ಕಾರಣ. ಈ ಸಂದರ್ಭದಲ್ಲಿ ಜೆಡಿಎಸ್‍ಗೆ ರಾಜೀನಾಮೆ ನೀಡಲು ಮುಂದಾಗಿರುವ ಶಾಸ ಕರ ಹೆಸರು ಬಹಿರಂಗಪಡಿಸಲು ಸಾಧ್ಯವಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ ಎಂಬುದು ಇದರಿಂದಲೇ ಗೊತ್ತಾಗು ತ್ತದೆ. ನನ್ನಂತೆಯೇ ಮಾನಸಿಕವಾಗಿ ನೊಂದಿರುವ ಇನ್ನೂ 20 ಶಾಸಕರು ವಿಧಿ ಇಲ್ಲದೇ ಪರ್ಯಾಯ ಮಾರ್ಗ ಕಂಡು ಕೊಳ್ಳುವ ಸಮಯ ಕಾಯುತ್ತಿದ್ದಾರೆ ಎಂದರು. ನಾನು ಶಾಸಕನಾಗಿದ್ದಾಗ ರೇವಣ್ಣರಿಂದ ಒಂದು ಕೆಲಸ ಮಾಡಿಸಿ ಕೊಳ್ಳಲು ಹೋಗಿದ್ದೆ. ಆಗ ನನಗೆ ದನಕ್ಕೆ ಬೈಯ್ಯುವ ಹಾಗೆ ಬೈದಿದ್ದಾರೆ. ಅಭಿವೃದ್ಧಿ ಕೆಲಸ ಮಾಡಿಸಿಕೊಳ್ಳಲು ಹೋದರೆ ಪಶು ತರ ನಡೆಸಿಕೊಂಡರು. ಅಲ್ಲದೇ ವಿಧಾನ ಸೌಧದಲ್ಲೂ ನನ್ನನ್ನ ಬೈದು ಹೊರಕಳುಹಿಸಿ, ಅವರ ಕೊಠಡಿ ಬಾಗಿಲು ಹಾಕಿಕೊಂಡರು. ಇದರಿಂದ ನನಗೆ ಭಾರಿ ನೋವಾಗಿತ್ತು. ಇನ್ಯಾವತ್ತೂ ನಿಮ್ಮ ಬಳಿ ಏನನ್ನು ಕೇಳಿ ಕೊಂಡು ಬರಲ್ಲ ಎಂದು ಅಂದು ಹೇಳಿ ಬಂದಿದ್ದೆ. ಮೈತ್ರಿ ಸರ್ಕಾರ ಬೀಳಲು ಮೂಲ ಕಾರಣ ರೇವಣ್ಣ ಎಂದರು.

ಕಣ್ಣೀರು ಹಾಕಿದ ನಾರಾಯಣಗೌಡರು: ಸುದ್ದಿಗೋಷ್ಠಿ ಯಲ್ಲಿ ಮಾತನಾಡುವಾಗ ಭಾವುಕರಾಗಿ ಕಣ್ಣೀರು ಹಾಕಿದ ನಾರಾಯಣಗೌಡ, ಜಿ.ಟಿ.ದೇವೇಗೌಡರು ಬಹಳ ನೊಂದಿದ್ದಾರೆ. ಇನ್ನೂ 20 ಶಾಸಕರು ಮನಸಲ್ಲೇ ಅಸಮಾ ಧಾನ ಹೊಂದಿದ್ದಾರೆ. ನನ್ನ ಬಗ್ಗೆ ಹೀನಾಮಾನವಾಗಿ ಗೌಡರು, ಹೆಚ್.ಡಿ.ರೇವಣ್ಣ ಮೊನ್ನೆ ಮಾತನಾಡಿದ್ದಾರೆ. ಆದರೆ ನನಗೆ ಕಳೆದ 5 ವರ್ಷಗಳಿಂದ ಭಾರೀ ನೋವು ಕೊಟ್ಟಿದ್ದಾರೆ. ಕಳೆದ ಚುನಾವಣೆಯಲ್ಲಿಯೂ ಬಿ ಫಾರಂ ನೀಡಲು ಸಾಕಷ್ಟು ಸತಾಯಿಸಿ ನೋವು ಕೊಟ್ಟಿದ್ದರು. ದೇವೇಗೌಡ, ಕುಮಾರಸ್ವಾಮಿ

ಹಾಗೂ ರೇವಣ್ಣ ಸೇರಿದಂತೆ ಅವರ ಕುಟುಂಬದ ಹೆಣ್ಣು ಮಕ್ಕಳು ಸಹ ನನಗೆ ಭಾರೀ ನೋವು ಕೊಟ್ಟಿದ್ದಾರೆ. ಈ ಎಲ್ಲಾ ನೋವು ನುಂಗಿಕೊಂಡು ಅವರೊಂದಿಗೆ ಇಷ್ಟು ದಿನ ಇದ್ದೆ ಎಂದರು. ಯಡಿಯೂರಪ್ಪ ಅವರು ಹೇಳಿದ ಮಾತಿಗೆ ತಕ್ಕಂತೆ ನಡೆದುಕೊಳ್ಳುತ್ತಾರೆ. ಹೇಳಿದ ಕೆಲಸ ಮಾಡುತ್ತಾರೆ. ಇದ್ದಕ್ಕಾಗಿ ನಾನು ಯಡಿಯೂರಪ್ಪ ಅವರ ಮನೆಗೆ ಹೋಗುತ್ತಿದ್ದೇನೆ ಅಷ್ಟೇ. ಆದರೆ, ನೀವು (ದೇವೇಗೌಡರ ಕುಟುಂಬ) ಎಷ್ಟೇ ನೋವು ಕೊಟ್ಟರು ನಾನು ಕೆ.ಆರ್.ಪೇಟೆ ತಾಲೂಕು ಬಿಟ್ಟು ಹೋಗಲ್ಲ. ಇದು ನನ್ನೂರು ಇನ್ನೊಬ್ಬ ಮಗಳ ಮದುವೆ ಬಾಕಿ ಇದ್ದು, ಆ ಕಾರ್ಯವನ್ನು ಮಾಡಿ ಇಲ್ಲೇ ಪ್ರಾಣ ಬಿಡುತ್ತೇನೆ ಎಂದು ಭಾವುಕರಾದರು.

ನಾರಾಯಣಗೌಡ ವಾರ್ನಿಂಗ್!: ದೇವೇಗೌಡರೇ ನನ್ನನ್ನು ಕೆಣಕಬೇಡಿ. ನೀವು ನಮ್ಮನ್ನು ತುಳಿದರೆ ಭಗವಂತ ನಿಮ್ಮನ್ನು ತುಳಿತಾನೆ. ದೇವೇಗೌಡರು ಸದಾ ಮಕ್ಕಳಿಗೆ, ಮೊಮ್ಮಕ್ಕಳಿಗೆ ಅಧಿಕಾರ ನೀಡಲು ಹವಣಿಸುತ್ತಿದ್ದಾರೆ. ಜೆಡಿಎಸ್ ಕಾರ್ಯಕರ್ತರು ಬೆಳೆಯೋದು ಬೇಡವೇ? ಸುಮ್ಮನೆ ಇದ್ದು ಬಿಡಿ ಎಂದು ವಾರ್ನಿಂಗ್ ಕೊಡುವ ಮೂಲಕ ಅವರು ಜೆಡಿಎಸ್ ವರಿಷ್ಠ ದೇವೇಗೌಡರ ಮೇಲೆ ಹರಿಹಾಯ್ದರು.

ದೇವೇಗೌಡರು ನಾನು ಒಕ್ಕಲಿಗನ ಹೊಟ್ಟೆಯಲ್ಲಿ ಹುಟ್ಟಿದ್ದೆ ತಪ್ಪಾಯಿತು. ನಾನು ಮುಸ್ಲಿಮರ ಹೊಟ್ಟೆಯಲ್ಲಿ ಹುಟ್ಟಬೇಕಿತ್ತು ಎನ್ನುತ್ತಾರೆ. ಆದರೆ ಒಂದು ಮರಿಯಬೇಡಿ, ನಿಮ್ಮನ್ನು ದೆಹಲಿಯಲ್ಲಿ ಗದ್ದುಗೆ ಮೇಲೆ ಕೂರಿಸಿದ್ದೇ ಒಕ್ಕಲಿಗರು. ಇದನ್ನು ನೀವು ಎಂದೆಂದಿಗೂ ಮರೆಯಬಾರದು. ನೀವು ಈ ಹೇಳಿಕೆ ನೀಡಿದ ಪ್ರತಿ ಬಾರಿಯೂ ನಮ್ಮ ಹೊಟ್ಟೆಯಲ್ಲಿ ಬೆಂಕಿ ಬಿದ್ದ ರೀತಿ ಆಗುತ್ತದೆ ಎಂದರು.

ಸರ್ಕಾರ ಬೀಳಲು ರೇವಣ್ಣ ಕಾರಣ: ಸುಪ್ರೀಂ ಕೋರ್ಟ್ ನಮ್ಮನ್ನು ಹಾಕೊಂಡು ರುಬ್ಬುತ್ತಿದೆ. ನಮ್ಮ ದುಡ್ಡನ್ನು ಸುಪ್ರೀಂಕೋರ್ಟ್‍ನಲ್ಲಿ ಕೇಸ್‍ಗೆ ಖರ್ಚು ಮಾಡ್ತಿದ್ದೀವಿ. ಬಿಜೆಪಿಯವರು ಖರ್ಚಿಗೆ ಹಣ ಕೊಟ್ಟಿಲ್ಲ. ದೋಸ್ತಿ ಸರ್ಕಾರದಲ್ಲಿ ರೇವಣ್ಣ, ಎಲ್ಲಾ ಶಾಸಕರಿಗೆ ಕಿರುಕುಳ ಕೊಡು ತ್ತಿದ್ದರು. ರೇವಣ್ಣರೇನೂ ಸತ್ಯಹರಿಶ್ಚಂದ್ರನಲ್ಲ. ದೋಸ್ತಿ ಸರ್ಕಾರ ಬೀಳಲು ರೇವಣ್ಣನೇ ಕಾರಣ ಎಂದು ದೂರಿದರು. ನಾನು ಬಿಜೆಪಿ ಜೊತೆ ಹೋಗೋದಕ್ಕೆ ಹಣ ತೆಗೆದುಕೊಂಡಿದ್ದೇನೆ ಎಂದು ಆರೋಪಿಸುತ್ತಾರೆ. ಆದರೆ ಈ ಹಿಂದೆ ಅವರು ಬಿಜೆಪಿ ಜೊತೆ ಸರ್ಕಾರ ಮಾಡಿದಾಗ ಹಣ ತೆಗೆದುಕೊಂಡಿದ್ದಾರೆಯೇ ಎಂಬುದರ ಬಗ್ಗೆ ಉತ್ತರಿಸಬೇಕು. ಅವರು ಆಗ ಹಣ ಪಡೆದಿದ್ದರೆ. ಈಗ ನಾನು ತಗೊಂಡ ರೀತಿಯಾಗುತ್ತದೆ. ನನಗೆ ಮಾತ್ರವಲ್ಲದೇ ಪುಟ್ಟರಾಜಣ್ಣ ನಿಗೂ ನೋವು ಉಂಟು ಮಾಡಿದ್ದಾರೆ. ನಾನು ಹೇಳಿಕೊಳ್ಳುತ್ತಿದ್ದೇನೆ. ಅವರು ಹೇಳಿಕೊಳ್ಳುತ್ತಿಲ್ಲ. ಅವರು ಎಲ್ಲಾ ನೋವನ್ನು ನುಂಗಿಕೊಂಡು ಓಡಾಡುತ್ತಿದ್ದಾರೆ ಅಷ್ಟೇ ಎಂದರು. ಮಾಜಿ ಸಚಿವ ಪುಟ್ಟರಾಜು ಒಬ್ಬ ಸುಳ್ಳುಗಾರ. ಅವರು ಸಂಸದರಾಗಿದ್ದಾಗ ಕೆ.ಆರ್.ಪೇಟೆಗೆ ಏನು ಕೊಟ್ರು? ನಾವು ಓಟು ಹಾಕಿಲ್ವಾ. ಮಂತ್ರಿ ಮಾಡಿದ್ವಲ್ಲಾ ನಿಮ್ಮನ್ನ, ಎಷ್ಟು ಅನುದಾನ ಕೊಟ್ರಿ. ನೀವು ದೇವೇಗೌಡರ ಕುಟುಂಬದ ಭಕ್ತ. ಬನ್ನಿ ಧರ್ಮಸ್ಥಳಕ್ಕೆ ಎಷ್ಟು ಅನುದಾನ ಕೊಟ್ರಿ ಆಣೆ ಮಾಡಿ. ಜೆಡಿಎಸ್ ಪಕ್ಷದಲ್ಲಿ ದೇವೇಗೌಡರ ಕುಟುಂಬ ಇದುವರೆಗೂ ಯಾರನ್ನು ಬೆಳೆಯಲು ಬಿಟ್ಟಿಲ್ಲ, ಮುಂದೆಯೂ ಬಿಡಲ್ಲ ಎಂದರು.

Translate »