ಜೆಡಿಎಸ್‍ನಿಂದ ಮೇಯರ್, ಸ್ಥಾಯಿ ಸಮಿತಿ ಅಧ್ಯಕ್ಷೆಯರಿಗೆ ಸನ್ಮಾನ
ಮೈಸೂರು

ಜೆಡಿಎಸ್‍ನಿಂದ ಮೇಯರ್, ಸ್ಥಾಯಿ ಸಮಿತಿ ಅಧ್ಯಕ್ಷೆಯರಿಗೆ ಸನ್ಮಾನ

June 21, 2020

ಮೈಸೂರು, ಜೂ.20(ವೈಡಿಎಸ್)- ಮೈಸೂರು ಮಹಾನಗರ ಪಾಲಿಕೆ ಮೇಯರ್ ತಸ್ನೀಂ, ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ನಿರ್ಮಲಾ ಹರೀಶ್, ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷೆ ಪಲ್ಲವಿ ಬೇಗಂ ಅವರನ್ನು ಮೈಸೂರಿನ ಶೇಷಾದ್ರಿ ಅಯ್ಯರ್ ರಸ್ತೆಯಲ್ಲಿರುವ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಶನಿವಾರ ಸನ್ಮಾನಿಸಲಾಯಿತು. ಜೆಡಿಎಸ್ ಮೈಸೂರು ನಗರ ಘಟಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಸಾ.ರಾ.ಮಹೇಶ್ ಸನ್ಮಾನಿಸಿದರು.

ನಂತರ ಮಾತನಾಡಿದ ಶಾಸಕರು, ಕಾರ್ಯ ಕರ್ತರಿಗೆ ಪಕ್ಷನಿಷ್ಠೆ ಇರಬೇಕು. ಆದರೆ, ಅಧಿಕಾರ ಅನುಭವಿಸಿ, ಪಕ್ಷನಿಷ್ಠೆ, ಪ್ರಾಮಾ ಣಿಕತೆ ಇಲ್ಲದೇ ಕೇವಲ ಸ್ವಾರ್ಥವಿದ್ದು, ಆಮಿಷಗಳಿಗೆ ಬಲಿಯಾದರೆ ಏನಾಗುತ್ತದೆ ಎಂಬುದಕ್ಕೆ 50 ವರ್ಷಗಳ ಕಾಲ ಸುದೀರ್ಘ ರಾಜಕಾರಣ ಮಾಡಿದ ವ್ಯಕ್ತಿ ಇಂದು ಜಿಲ್ಲೆಯಲ್ಲಿ ಒಬ್ಬ `ದುರಂತ ನಾಯಕ’ ಆಗಿ ರುವುದು ಉದಾಹರಣೆಯಾಗಿದೆ. ರಾಜೀ ನಾಮೆ ನೀಡಿದ 17 ಶಾಸಕರಲ್ಲಿ 16 ಮಂದಿ ದಡ ಸೇರಿದರೆ, ಒಬ್ಬರು ಹಾಗೆಯೇ ಉಳಿ ದಿದ್ದಾರೆ. ಇನ್ನು ಅವರ ರಾಜಕೀಯ ಅಧ್ಯಾಯ ಮುಗಿಯಿತು. ಮತ್ತೇನಾದರೂ ಚುನಾವಣೆಯಲ್ಲಿ ಸ್ಪರ್ಧಿಸುವುದಾದರೆ ಜಿಪಂ, ಗ್ರಾಪಂ ಚುನಾವಣೆಗೆ ನಿಲ್ಲಬೇಕು ಅಷ್ಟೆ ಎಂದು ಹೆಚ್.ವಿಶ್ವನಾಥ್ ಅವರ ಹೆಸರು ಹೇಳದೆ ಅಣಕಿಸಿದರು.

ಶಿಸ್ತು, ನಿಷ್ಠೆ ಇರಬೇಕು: ಈ ಹಿಂದೆ ಆಶಾ ಕಾರ್ಯಕರ್ತೆಯರ ಮಾತನ್ನು ಯಾರೂ ಕೇಳುತ್ತಿರಲಿಲ್ಲ. ಕೊರೊನಾ ಬಂದ ನಂತರ ಎಲ್ಲರೂ ಅವರ ಮಾತನ್ನು ಕೇಳುತ್ತಾರೆ. ಹಾಗೆಯೇ ಕಾರ್ಯಕರ್ತರು, ಮುಖಂ ಡರು ಹೆಚ್ಚಿನ ಕಾಲ ಪಕ್ಷದಲ್ಲಿದ್ದಾಗ ಅವರಿಗೆ ಬೆಲೆ ಇದ್ದೇ ಇರುತ್ತದೆ ಎಂದರು.

ಪಕ್ಷದಲ್ಲಿ ಶಿಸ್ತು, ನಿಷ್ಠೆ ಇದ್ದರೆ ಮುಂದಿನ ದಿನಗಳಲ್ಲಿ ಒಳ್ಳೆಯ ಅವಕಾಶಗಳು ಲಭಿಸು ತ್ತವೆ. ಹಿಂದಿನ ವರ್ಷ ಜೆಡಿಎಸ್ ಅಧಿ ಕಾರದಲ್ಲಿತ್ತು. ಇಂದು ಬಿಜೆಪಿ ಇದೆ. ಮುಂದೆ ಏನಾಗುವುದೋ ನೋಡೋಣ. ಭವಿಷ್ಯ ದಲ್ಲಿ ಅರ್ಹರಿಗೆ ಅವಕಾಶಗಳು ಸಿಗುತ್ತವೆ. ಅಲ್ಲಿಯವರೆಗೆ ಕಾಯಿರಿ ಎಂದು ಕಾರ್ಯ ಕರ್ತರಲ್ಲಿ ಮನವಿ ಮಾಡಿದರು. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮತ್ತು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಕಾರ್ಯಕರ್ತರನ್ನು ಸಂಘಟಿಸಿ ದುಡಿದಿದ್ದರಿಂದ ನಾನು 3 ಬಾರಿ ಶಾಸಕ ನಾಗಿ ಆಯ್ಕೆಯಾಗಿ, ಒಮ್ಮೆ ಸಚಿವ ನಾಗಲು ಸಾಧ್ಯವಾಯಿತು ಎಂದರು.

ವಿಧಾನಪರಿಷತ್ ಸದಸ್ಯ ಮರಿತಿಬ್ಬೇ ಗೌಡ, ಜೆಡಿಎಸ್ ನಗರಾಧ್ಯಕ್ಷ ಕೆ.ಟಿ.ಚಲುವೇ ಗೌಡ, ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ, ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಬ್ದುಲ್ ಅಜೀಜ್, ಮಾಜಿ ಮೇಯರ್ ರವಿ ಕುಮಾರ್, ಪಾಲಿಕೆ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್, ಜೆಡಿಎಸ್ ಎನ್.ಆರ್.ಕ್ಷೇತ್ರ ಅಧ್ಯಕ್ಷ ರಾಮು, ಕೆ.ಅರ್.ಕ್ಷೇತ್ರ ಅಧ್ಯಕ್ಷ ಸಂತೋಷ್, ಚಾಮರಾಜ ಕ್ಷೇತ್ರ ಅಧ್ಯಕ್ಷ ಮಂಜುನಾಥ್ ಮತ್ತು ಮುಖಂಡರು ಉಪಸ್ಥಿತರಿದ್ದರು.

Translate »