ಮತ್ತೆ ಯೆಡಿಯೂರಪ್ಪಗೆ ಸಂತೋಷ್, ಈಶ್ವರಪ್ಪ ಅಡ್ಡಗಾಲು: ಜೆಡಿಎಸ್ ಜೊತೆ ಮೊತ್ತೊಮ್ಮೆ ಕೈಜೋಡಿಸಲು ಪ್ರಸ್ತಾಪ
ಮೈಸೂರು

ಮತ್ತೆ ಯೆಡಿಯೂರಪ್ಪಗೆ ಸಂತೋಷ್, ಈಶ್ವರಪ್ಪ ಅಡ್ಡಗಾಲು: ಜೆಡಿಎಸ್ ಜೊತೆ ಮೊತ್ತೊಮ್ಮೆ ಕೈಜೋಡಿಸಲು ಪ್ರಸ್ತಾಪ

July 13, 2019

ಚುನಾವಣೆಗೆ ಹೋಗಲು ಸಂಘ ಪರಿವಾರ ಸೂಚನೆ

ಬೆಂಗಳೂರು: ಮುಖ್ಯಮಂತಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರವನ್ನು ಕೆಳಗಿಸಿ, ಅಧಿಕಾರ ಹಿಡಿಯುವ ವಿಷಯದಲ್ಲಿ ರಾಜ್ಯ ಬಿಜೆಪಿ ಯಲ್ಲೇ ಗೊಂದಲ ನಿರ್ಮಾಣವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸರ್ಕಾರ ರಚನೆಗೆ ಮುಂದಾಗಿದ್ದರೆ, ಮತ್ತೊಂದೆಡೆ ಸಂಘಟನಾ ಕಾರ್ಯದರ್ಶಿ ಸಂತೋಷ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ ಕ್ಯಾತೆ ತೆಗೆದಿದ್ದಾರೆ.

ಸಂಘ ಪರಿವಾರಕ್ಕಂತೂ ವಲಸಿಗರನ್ನು ಕಟ್ಟಿಕೊಂಡು ಸರ್ಕಾರ ಮಾಡುವ ಬದಲು ಮಧ್ಯಂತರ ಚುನಾವಣೆಗೆ ತೆರಳಿ, ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಕಿವಿಮಾತು ಹೇಳಿದ್ದಾರೆ. ಹಠಾತ್ ಬೆಳವಣಿಗೆಯಲ್ಲಿ ಸಂತೋಷ್ ಅಣತಿಯಂತೆ ಈಶ್ವರಪ್ಪ ರಾಜ್ಯ ಉಸ್ತುವಾರಿ ಹೊಣೆ ಹೊತ್ತ ಮರುಳೀಧರ್ ರಾವ್ ಅವರನ್ನು ಮುಂದಿಟ್ಟುಕೊಂಡು ಅತೃಪ್ತರನ್ನು ಸೇರಿಸಿಕೊಂಡು ಸರ್ಕಾರ ರಚಿಸುವ ಬದಲು ಜೆಡಿಎಸ್ ಜೊತೆ ಕೈ ಜೋಡಿಸಿ, ಸರ್ಕಾರ ರಚನೆ ಮಾಡೋಣ ಎಂಬ ವಾದ ಮಂಡನೆ ಮಾಡುತ್ತಿದ್ದಾರೆ.

ಇದರ ಅಂಗವಾಗಿಯೇ ನಿನ್ನೆ ರಾತಿ ಮುಖ್ಯಮಂತಿ ಅವರ ಆಪ್ತ ಸಚಿವ ಸಾ.ರಾ. ಮಹೇಶ್ ಅವರೊಟ್ಟಿಗೆ ಕುಮಾರ ಕೃಪಾ ಅತಿಥಿ ಗೃಹದಲ್ಲೇ ಗೌಪ್ಯ ಮಾತುಕತೆ ನಡೆದಿದೆ. ಈ ಮಾತುಕತೆಯನ್ನು ಯಡಿಯೂರಪ್ಪ ಸೇರಿದಂತೆ ಜೆಡಿಎಸ್ ಮತ್ತು ಕಾಂಗೆಸ್ ನಾಯಕರು ನಿರಾಕರಿಸಿದ್ದರು. ಒಳಗಿಂದೊಳಗೆ ಚಟುವಟಿಕೆ ಮುಂದುವರಿದಿದೆ. ಜೆಡಿಎಸ್ ಜೊತೆ ಸೇರಿ ಸರ್ಕಾರ ರಚನೆ ಮಾಡಲು ಯಡಿಯೂರಪ್ಪ ಸುತಾರಾಂ ಒಪ್ಪುತ್ತಿಲ್ಲ. ಮಿತ ಪಕ್ಷಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಶಾಸಕರು ಹೊರ ಬಂದಿದ್ದಾರೆ. ಇವರ ಬೆಂಬಲವೇ ಸಾಕು. ಅವರ ಸಹವಾಸ ಮಾಡಿ ಸಾಕಾಗಿದೆ. ಮತ್ತೆ ಅದರ ಬಗ್ಗೆ ಯೋಚನೆ ಮಾಡಬೇಡಿ ಎಂದಿದ್ದಾರೆ. ಆದರೆ ಸಂತೋಷ್ ಮಾತ ಪರ್ಯಾಯ ರಾಜಕೀಯವನ್ನೇ ಮಾಡುತ್ತಿದ್ದಾರೆ. ಇದರಲ್ಲಿ ಎಷ್ಟು ಯಶಸ್ವಿ ಕಾಣುತ್ತಾರೆ ಎಂದು ಕಾದು ನೋಡಬೇಕು. ಈಗಿನ ಮಾತುಕತೆ ಪಕಾರ ಕುಮಾರಸ್ವಾಮಿ ಕುಟುಂಬವನ್ನು ಹೊರತುಪಡಿಸಿ, ಉಳಿದ ಶಾಸಕರು ಒಂದೆಡೆ ಸೇರಿ, ಬಿಜೆಪಿಗೆ ಬೆಂಬಲಿಸುವುದು. 2006ರಲ್ಲಿ ಯಾವ ರೀತಿ ಜೆಡಿಎಸ್‍ನ ಒಂದು ಗುಂಪು ಹೊರ ಹೋಗಿ, ಬಿಜೆಪಿ ಜೊತೆ ಕೈಜೋಡಿಸಿತ್ತೋ ಅದನ್ನೇ ಪುನರಾವರ್ತನೆ ಮಾಡುವ ತಂತಗಾರಿಕೆ. ನಂತರದ ದಿನಗಳಲ್ಲಿ ಕುಮಾರಸ್ವಾಮಿ ಸೇರಿಕೊಳ್ಳುವುದು. ಇದಕ್ಕೆ ಯಡಿಯೂರಪ್ಪ ಅವರ ವಿರೋಧಿ ಬಣ ಬೆಂಬಲವಿದೆ. ಕಾಂಗೆಸ್ ಹಾಗೂ ಜೆಡಿಎಸ್ ಪಕ್ಷವನ್ನು ತೊರೆದು ಬಂದಿರುವವರನ್ನು ಜತೆಗಿಟ್ಟುಕೊಂಡು ಸರ್ಕಾರ ರಚಿಸಿದರೆ ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರಕ್ಕೂ ಇದೇ ಗತಿ ಬರುತ್ತದೆ. ಹಾಗಾಗದಂತೆ ನೋಡಿಕೊಳ್ಳಬೇಕು ಎಂದರೆ ಜೆಡಿಎಸ್‍ನ ಒಂದು ಬಣದ ಜತೆ ಕೈಗೂಡಿಸಿ ಸರ್ಕಾರ ರಚಿಸಬೇಕು ಎಂಬುದು ಇವರ ವಾದ. ನಮಗೆ ದೇಶವನ್ನು ಕಾಂಗೆಸ್ ಮುಕ್ತಗೊಳಿಸುವುದು ಮುಖ್ಯವೇ ಹೊರತು ಬೇರೇನಲ್ಲ. ಹೀಗಾಗಿ ಜೆಡಿಎಸ್‍ನ ಭಿನ್ನರ ಜತೆ ಕೈಜೋಡಿಸಿದರೆ ಮುಂದಿನ ದಿನಗಳಲ್ಲಿ ನಮಗೆ ಬೇಕಾದ ಪರಿಸ್ಥಿತಿಯ ನಿರ್ಮಾಣವೂ ಆಗುತ್ತದೆ. ಕಾಂಗೆಸ್ ಪಕ್ಷವನ್ನು ದುರ್ಬಲಗೊಳಿಸಿ ದಂತೆಯೂ ಆಗುತ್ತದೆ ಎಂದು ಈ ನಾಯಕರು ವರಿಷ್ಠರಿಗೆ ವಿವರಿಸಿದ್ದಾರೆ ಎನ್ನಲಾಗಿದೆ.

Translate »