ಉಳಿತಾಯ ಖಾತೆ ತೆರೆಯಲು ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ಷೇರುದಾರರಿಗೆ ಅರಿವು
ಮೈಸೂರು

ಉಳಿತಾಯ ಖಾತೆ ತೆರೆಯಲು ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ಷೇರುದಾರರಿಗೆ ಅರಿವು

June 21, 2020

ಮೈಸೂರು, ಜೂ. 20(ಪಿಎಂ)- ಮೈಸೂರಿನ ಗಾಂಧಿಚೌಕದ ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ಬ್ಯಾಂಕಿನ ಷೇರುದಾರರಿಗೆ ಉಳಿತಾಯ ಖಾತೆ ತೆರೆಯಲು ಶನಿವಾರ ಅರಿವು ಮೂಡಿಸಲಾಯಿತು.

ಬ್ಯಾಂಕಿನ ಅಧ್ಯಕ್ಷ ಕೆ.ಉಮಾಶಂಕರ್ ಹಾಗೂ ಉಪಾಧ್ಯಕ್ಷ ಪಡುವಾರಹಳ್ಳಿ ಎಂ.ರಾಮಕೃಷ್ಣ ನೇತೃತ್ವದಲ್ಲಿ ಮಂಡಿ ಮೊಹಲ್ಲಾ ವ್ಯಾಪ್ತಿಯ ಕಾಮಾಟಗೇರಿ, ದೊಡ್ಡೊಕ್ಕಲಗೇರಿ, ಸೊಪ್ಪಿನಕೇರಿ, ಉಪ್ಪಿನ ಕೇರಿಯಲ್ಲಿ ಬ್ಯಾಂಕಿನ ಷೇರುದಾರರ ಮನೆ ಮನೆಗೆ ತೆರಳಿ ಉಳಿತಾಯ ಖಾತೆ ತೆರೆಯುವಂತೆ ಮನವಿ ಮಾಡಲಾಯಿತು.

ಸಹಕಾರ ಸಂಘಗಳ ಕಾಯ್ದೆ ಪ್ರಕಾರ ಬ್ಯಾಂಕಿನ ಸದಸ್ಯರು ಮತದಾನದ ಹಕ್ಕು, ಮರಣನಿಧಿ, ಡಿವಿಡೆಂಡ್ ಪಡೆಯಲು ತಮ್ಮ ಉಳಿತಾಯ ಖಾತೆ ತೆರೆಯಬೇಕು. ಜೊತೆಗೆ ಕನಿಷ್ಠ ವ್ಯವಹಾರ ನಡೆಸುವುದು ಕಡ್ಡಾಯ ಎಂದು ಮನವರಿಕೆ ಮಾಡಿ ಕೊಟ್ಟರಲ್ಲದೆ, ಮಾಹಿತಿ ಒಳಗೊಂಡಿರುವ ಕೈಪಿಡಿ ಹಂಚಲಾಯಿತು.

ಅಲ್ಲದೆ, ಪ್ರತಿ ವರ್ಷದ ವಾರ್ಷಿಕ ಮಹಾ ಸಭೆಗೆ ಕಡ್ಡಾಯವಾಗಿ ಹಾಜರಾಗಿ ಹಾಜ ರಾತಿ ಪುಸ್ತಕದಲ್ಲಿ ಸಹಿ ಹಾಕಲೇಬೇಕು. ಇಲ್ಲದಿದ್ದರೆ, ತಮಗೆ ಮತದಾನದ ಹಕ್ಕು, ಮರಣನಿಧಿ ಸೇರಿದಂತೆ ಬ್ಯಾಂಕಿನಿಂದ ದೊರೆಯುವ ಎಲ್ಲಾ ಸೌಲಭ್ಯದಿಂದ ವಂಚಿತ ರಾಗಬೇಕಾಗುತ್ತದೆ ಎಂದು ಮಾಹಿತಿ ಒದಗಿಸಲಾಯಿತು. ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರಾದ ಜೆ. ಯೋಗೇಶ್, ಸಿ.ರೇವಣ್ಣ, ಹೆಚ್.ಹರೀಶ್ ಕುಮಾರ್, ಎಸ್.ಅರವಿಂದ, ಪಿ.ಸವಿತಾ, ಆರ್.ರವಿಕುಮಾರ್, ಕಾರ್ಯದರ್ಶಿ ಕೆ.ಹರ್ಷಿತ್‍ಗೌಡ ಹಾಜರಿದ್ದರು.

Translate »