ಮೈಸೂರು, ಜೂ. 20(ಪಿಎಂ)- ಮೈಸೂರಿನ ಗಾಂಧಿಚೌಕದ ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ಬ್ಯಾಂಕಿನ ಷೇರುದಾರರಿಗೆ ಉಳಿತಾಯ ಖಾತೆ ತೆರೆಯಲು ಶನಿವಾರ ಅರಿವು ಮೂಡಿಸಲಾಯಿತು. ಬ್ಯಾಂಕಿನ ಅಧ್ಯಕ್ಷ ಕೆ.ಉಮಾಶಂಕರ್ ಹಾಗೂ ಉಪಾಧ್ಯಕ್ಷ ಪಡುವಾರಹಳ್ಳಿ ಎಂ.ರಾಮಕೃಷ್ಣ ನೇತೃತ್ವದಲ್ಲಿ ಮಂಡಿ ಮೊಹಲ್ಲಾ ವ್ಯಾಪ್ತಿಯ ಕಾಮಾಟಗೇರಿ, ದೊಡ್ಡೊಕ್ಕಲಗೇರಿ, ಸೊಪ್ಪಿನಕೇರಿ, ಉಪ್ಪಿನ ಕೇರಿಯಲ್ಲಿ ಬ್ಯಾಂಕಿನ ಷೇರುದಾರರ ಮನೆ ಮನೆಗೆ ತೆರಳಿ ಉಳಿತಾಯ ಖಾತೆ ತೆರೆಯುವಂತೆ ಮನವಿ ಮಾಡಲಾಯಿತು. ಸಹಕಾರ ಸಂಘಗಳ ಕಾಯ್ದೆ ಪ್ರಕಾರ ಬ್ಯಾಂಕಿನ ಸದಸ್ಯರು ಮತದಾನದ ಹಕ್ಕು, ಮರಣನಿಧಿ, ಡಿವಿಡೆಂಡ್…