ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಪ್ರಸ್ತಾಪ ಖಂಡಿಸಿ ದಸಂಸ ಪ್ರತಿಭಟನೆ
ಮೈಸೂರು

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಪ್ರಸ್ತಾಪ ಖಂಡಿಸಿ ದಸಂಸ ಪ್ರತಿಭಟನೆ

June 21, 2020

ಮೈಸೂರು,ಜೂ.20(ಪಿಎಂ)- ಕರ್ನಾಟಕ ಭೂ ಸುಧಾರಣಾ ಕಾಯ್ದೆಯ 79ಎ, ಬಿ ಮತ್ತು ಸಿ ಹಾಗೂ 80ನೇ ಕಲಂಗೆ ಪೂರ್ವಾನ್ವಯವಾಗುವಂತೆ ತಿದ್ದುಪಡಿಗೆ ರಾಜ್ಯ ಸರ್ಕಾರ ಮುಂದಾಗಿರುವುದನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ (ದಸಂಸ) ವತಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾ ಯಿಸಿದ ಪ್ರತಿಭಟನಾಕಾರರು, ರಾಜ್ಯ ಸರ್ಕಾರದ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಪ್ರಸ್ತಾಪ ಖಂಡನೀಯ. ತಿದ್ದುಪಡಿಯಾದರೆ ಉಳುವವನೇ ಹೊಲದೊಡೆಯ ಎಂಬುದಕ್ಕೆ ಬದಲಾಗಿ ಉಳ್ಳವನೇ ಭೂ ಮಾಲೀಕ ಎನ್ನುವಂತೆ ಆಗಲಿದೆ. ಕೂಡಲೇ ಸರ್ಕಾರ ಈ ಪ್ರಸ್ತಾಪ ದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.
ತಿದ್ದುಪಡಿಯಾದರೆ ಕೃಷಿಭೂಮಿಯು ಬಂಡವಾಳ ಶಾಹಿ, ಕಾರ್ಪೊರೇಟ್ ಸಂಸ್ಥೆ, ಉದ್ಯಮಿಗಳ ಪಾಲಾಗಿ ಕೃಷಿಗೆ ಬದಲಾಗಿ ಅನ್ಯ ಉದ್ದೇಶಗಳಿಗೆ ಬಳಕೆಯಾಗು ವುದೇ ಹೆಚ್ಚು. ಇದರಿಂದ ಕೃಷಿ ಭೂಮಿ ಕಡಿಮೆ ಯಾಗಿ ಆಹಾರ ಧಾನ್ಯ ಉತ್ಪಾದನೆ ಮೇಲೂ ದುಷ್ಪರಿ ಣಾಮವಾಗಲಿದೆ. ರೈತರು ಬೀದಿಪಾಲಾಗಲಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಡಿ.ದೇವರಾಜ ಅರಸು ಮುಖ್ಯಮಂತ್ರಿಯಾಗಿ, ಬಿ.ಬಸವಲಿಂಗಪ್ಪ ಕಂದಾಯ ಸಚಿವರಾಗಿದ್ದಾಗ ಭೂ ಸುಧಾರಣಾ ಕಾಯ್ದೆಗೆ ಮತ್ತಷ್ಟು ಶಕ್ತಿ ನೀಡುವಂತೆ ತಿದ್ದುಪಡಿ ತರಲಾಯಿತು. ಆ ಮೂಲಕ ಉಳುವವನೇ ಭೂಮಿ ಒಡೆಯ ಎಂಬುದಕ್ಕೆ ಅವರು ಕಾರಣಕರ್ತ ರಾದರು. ಭೂಮಿತಿ ಕಾನೂನು, ಭೂರಹಿತರಿಗೆ ಭೂಮಿ ಹಂಚಿಕೆ ಕಾನೂನು ಸೇರಿದಂತೆ ಪ್ರಗತಿಪರವಾದ ಕಾನೂನುಗಳನ್ನು ಜಾರಿಗೆ ತಂದು ಎಲ್ಲಾ ಜಾತಿಯ ಸಣ್ಣ ಹಿಡುವಳಿದಾರರಿಗೆ ಹಾಗೂ ಭೂರಹಿತರಿಗೆ ಭೂಮಿ ಹಂಚಿಕೆ ಮಾಡಲಾಯಿತು. ಆದರೆ ಈಗಿನ ರಾಜ್ಯ ಸರ್ಕಾರ ಜನವಿರೋಧಿ ತಿದ್ದುಪಡಿ ತರಲು ತುದಿಗಾಲಲ್ಲಿ ನಿಂತಿದೆ ಎಂದು ಕಿಡಿಕಾರಿದರು.

ಒಗ್ಗೂಡಿ ಹೋರಾಟ ಅಗತ್ಯ: ಎಲ್ಲಾ ಬಡರೈತರು, ರೈತ ಪರ ಕಾಳಜಿಯುಳ್ಳವರು, ಪ್ರಗತಿಪರ ಸಂಘಟನೆ ಗಳು ಈ ಕಾಯ್ದೆ ತಿದ್ದುಪಡಿ ವಿರೋಧಿಸಿ ಬೀದಿಗಿಳಿ ಯದಿದ್ದರೆ ರೈತ ಸಂಕುಲ ಮತ್ತೊಮ್ಮೆ ವಸಾಹತು ಶಾಹಿ ಬಂಡವಾಳಿಗರ ಗುಲಾಮಗಿರಿಗೆ ತುತ್ತಾಗುವು ದರಲ್ಲಿ ಅನುಮಾನವಿಲ್ಲ. ಈಗಲೇ ರೈತರ ಆತ್ಮಹತ್ಯೆ ಹೆಚ್ಚಿದೆ. ಕಾಯ್ದೆ ತಿದ್ದುಪಡಿಯಾದರೆ ರೈತರು ಸಾಮೂ ಹಿಕ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಬರಲಿದೆ. ಅನ್ನದ ಹಾಹಾಕಾರ ದುಡಿಯುವ ವರ್ಗವನ್ನು ಕಾಡುವುದ ರಲ್ಲಿ ಸಂಶಯವಿಲ್ಲ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು. ಸಂಘಟನೆಯ ರಾಜ್ಯ ಸಂಚಾ ಲಕ ಹರಿಹರ ಆನಂದಸ್ವಾಮಿ, ಜಿಲ್ಲಾ ಸಂಚಾಲಕ ಚಂದ್ರಶೇಖರ್ ಆಲಗೂಡು, ನಗರ ಸಂಚಾಲಕ ಪೈ.ಕೃಷ್ಣ, ಜಿಲ್ಲಾ ಸಂಘಟನಾ ಸಂಚಾಲಕ ಆರ್ಟಿಸ್ಟ್ ಎಸ್.ನಾಗ ರಾಜ್, ಮುಖಂಡರಾದ ಡಿ.ಎನ್.ಬಾಬು, ಚಕ್ರಪಾಣಿ, ಮಹದೇವು ಮೈಸೂರು, ಕೆಂಪಯ್ಯನಹುಂಡಿ ಆರ್. ರಾಜು, ಅಶೋಕಪುರಂ ಎನ್.ಪಿ.ಗುರುಮೂರ್ತಿ, ನಂಜಪ್ಪ ಬಸವನಗುಡಿ ಮತ್ತಿತರರಿದ್ದರು.

Translate »