ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಖಂಡಿಸಿ ರೈತ ಸಂಘದಿಂದ ಹೆದ್ದಾರಿ ತಡೆ
ಮೈಸೂರು

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಖಂಡಿಸಿ ರೈತ ಸಂಘದಿಂದ ಹೆದ್ದಾರಿ ತಡೆ

June 21, 2020

ಮೈಸೂರು, ಜೂ.20(ಪಿಎಂ)- ಕರ್ನಾಟಕ ಭೂ ಸುಧಾರಣಾ ಕಾಯ್ದೆಯ 79ಎ, ಬಿ ಮತ್ತು ಸಿ ಹಾಗೂ 80ನೇ ಕಲಂ ತಿದ್ದು ಪಡಿಗೆ ರಾಜ್ಯ ಸರ್ಕಾರ ಮುಂದಾಗಿರು ವುದನ್ನು ಖಂಡಿಸಿ `ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ’ ವತಿ ಯಿಂದ ಸಾಮೂಹಿಕ ನಾಯಕತ್ವದಲ್ಲಿ ಮೈಸೂರು ಎಪಿಎಂಸಿ ಎದುರು ನಂಜನ ಗೂಡು ರಸ್ತೆ ರಾಜ್ಯ ಹೆದ್ದಾರಿ ತಡೆದು ಶನಿವಾರ ಪ್ರತಿಭಟನೆ ನಡೆಸಲಾಯಿತು.

ರೈತ ಸಮುದಾಯಕ್ಕೆ ಮಾರಕವಾಗುವ ರೀತಿ ಭೂ ಸುಧಾರಣಾ ಕಾಯ್ದೆಗೆ ತಿದ್ದು ಪಡಿ ತರಲು ಸರ್ಕಾರ ಮುಂದಾಗಿದೆ. ವಿಧಾನಸಭೆಯಲ್ಲಿ ಯಾವುದೇ ಚರ್ಚೆಗೂ ಅವಕಾಶವಿಲ್ಲದಂತೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರಲಾಗುತ್ತಿದೆ. ಕೊರೊನಾ ಪರಿ ಸ್ಥಿತಿಯ ದುರ್ಬಳಕೆ ಮಾಡಿಕೊಂಡು ಕಾಯ್ದೆಗೆ ತಿದ್ದುಪಡಿ ತರುತ್ತಿರುವುದು ಖಂಡ ನೀಯ ಎಂದ ಪ್ರತಿಭಟನಾಕಾರರು, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಇಂದಿನ ರಸ್ತೆ ತಡೆ ಚಳವಳಿ ಕೇವಲ ಆರಂಭ ವಷ್ಟೇ. ಸರ್ಕಾರ ಇದೇ ರೀತಿ ರೈತ ವಿರೋಧಿ ನಿಲುವು ತಾಳಿದರೆ ತೀವ್ರತರದ ಹೋರಾಟ ಮಾಡಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಕಾರ್ಪೊರೇಟ್ ಕಂಪನಿ, ರಿಯಲ್ ಎಸ್ಟೇಟ್ ಉದ್ಯಮ ಹಾಗೂ ಬೃಹತ್ ಕೈಗಾ ರಿಕೆಗಳ ಏಜೆಂಟರಂತೆ ರಾಜ್ಯ ಸರ್ಕಾರ ವರ್ತಿಸುತ್ತಿದೆ. ಸರ್ಕಾರದ ಇಂತಹ ನಡೆಯ ವಿರುದ್ಧ ಪ್ರಬಲವಾಗಿ ವಿರೋಧ ವ್ಯಕ್ತಪಡಿಸ ಬೇಕಾದ ವಿರೋಧ ಪಕ್ಷಗಳು ಕೇವಲ ಕಾಟಾಚಾರಕ್ಕೆ ಪತ್ರಿಕೆ ಹೇಳಿಕೆ ನೀಡುತ್ತಿರು ವುದು ಬಿಟ್ಟರೆ ಯಾವುದೇ ಪರಿಣಾಮ ಕಾರಿ ಹೋರಾಟ ರೂಪಿಸುತ್ತಿಲ್ಲ. ಕೊರೊನಾ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಆಹಾರದ ಕೊರತೆ ಉಂಟಾಗಬಾರದು ಎಂದು ಕೃಷಿ ಯನ್ನು ಅತಿ ಅವಶ್ಯಕ ಸೇವೆ ಎಂದು ಪರಿ ಗಣಿಸಿದ ಸರ್ಕಾರಕ್ಕೆ ರೈತ ಸಮುದಾಯದ ಮಹತ್ವ ಅರ್ಥವಾಗುವುದಿಲ್ಲವೇ? ಕಾಯ್ದೆ ತಿದ್ದುಪಡಿ ಪ್ರಸ್ತಾವದಿಂದ ಸರ್ಕಾರ ಹಿಂದೆ ಸರಿಯುವವರೆಗೂ ಹೋರಾಟ ನಿಲ್ಲದು ಎಂದು ಎಚ್ಚರಿಕೆ ನೀಡಿದರು.

ರೈತ ಸಂಘದ ರಾಜ್ಯ ಸಂಚಾಲಕ ನಂಜೇಗೌಡ, ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಟಿ.ರಾಮೇಗೌಡ, ಪ್ರ.ಕಾರ್ಯದರ್ಶಿ ರಘು ಹಿಮ್ಮಾವು, ಸಂಘದ ಮುಖಂಡರಾದ ಮಂಜುಕಿರಣ್, ಸತೀಶ್‍ರಾವ್, ಶಿರಮಳ್ಳಿ ಮಂಜುನಾಥ್, ಮಲ್ಲಹಳ್ಳಿ ನಾರಾಯಣ, ಕೆ.ಜಿ.ಶಿವಪ್ರಸಾದ್ ಮತ್ತಿತರರಿದÀ್ದರು.

Translate »