ಸಂಚಾರಕ್ಕೆ ಅಡ್ಡಿ: ಬಿಡಾಡಿ ಕುದುರೆಗಳು ದೊಡ್ಡಿಗೆ
ಮೈಸೂರು

ಸಂಚಾರಕ್ಕೆ ಅಡ್ಡಿ: ಬಿಡಾಡಿ ಕುದುರೆಗಳು ದೊಡ್ಡಿಗೆ

June 21, 2020

ಮೈಸೂರು, ಜೂ. 20(ಆರ್‍ಕೆ)- ಮೈಸೂರಿನ ಡಿಸಿ ಕಚೇರಿ ಸುತ್ತಮುತ್ತ ಸಂಚಾರಕ್ಕೆ ಅಡೆತಡೆಯಾಗಿದ್ದ 6 ಕುದುರೆ ಗಳನ್ನು ನಗರಪಾಲಿಕೆ ಸಿಬ್ಬಂದಿ ಹಿಡಿದು, ದೊಡ್ಡಿಗೆ ದೂಡಿದ್ದಾರೆ.

ರಸ್ತೆಯಲ್ಲಿ ಅಡ್ಡಾದಿಡ್ಡಿ ಓಡಾಡುತ್ತಿದ್ದ ಈ ಬಿಡಾಡಿ ಕುದುರೆಗಳು ವಾಹನ ಹಾಗೂ ಪಾದಚಾರಿಗಳ ಸಂಚಾರಕ್ಕೆ ಅಡೆತಡೆ ಜೊತೆಗೆ ಆತಂಕ ತಂದೊಡ್ಡಿದ್ದವು. ಸಾರ್ವಜನಿ ಕರು ನೀಡಿದ ದೂರಿನನ್ವಯ ಶನಿವಾರ ಬೆಳಗ್ಗೆ ಕಾರ್ಯಾ ಚರಣೆ ನಡೆಸಿದ ಮೈಸೂರು ಮಹಾನಗರ ಪಾಲಿಕೆ ಪಶುವೈದ್ಯಾಧಿಕಾರಿ ಡಾ. ತಿರುಮಲಗೌಡ ನೇತೃತ್ವದ ಸಿಬ್ಬಂದಿ 6 ಕುದುರೆಗಳನ್ನು ಹಿಡಿದು ಸರ್ಕಾರಿ ಸಂಸ್ಕøತ ಪಾಠ ಶಾಲಾ ಸರ್ಕಲ್ ಸಮೀಪ ಸಯ್ಯಾಜಿರಾವ್ ರಸ್ತೆಯಲ್ಲಿರುವ ದೊಡ್ಡಿಗೆ ಅಟ್ಟಿದ್ದಾರೆ.

6 ದಿನಗಳವರೆಗೆ ದೊಡ್ಡಿಯಲ್ಲಿಟ್ಟು, ಮಾಲೀಕರು ಬಂದಲ್ಲಿ ದಿನಕ್ಕೆ ಒಂದು ಕುದುರೆಗೆ 500 ರೂ. ದಂಡ ವಿಧಿಸಿ ಬಿಟ್ಟುಬಿಡಲಾಗುವುದು. ಯಾರೂ ಬಾರದಿದ್ದಲ್ಲಿ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಪಿಂಜರಾಪೋಲ್ ಸೊಸೈಟಿ ವಶಕ್ಕೆ ಒಪ್ಪಿಸಲಾಗುವುದು ಎಂದು ಡಾ.ತಿರುಮಲಗೌಡ ತಿಳಿಸಿದ್ದಾರೆ. ಕುದುರೆಯೂ ಸೇರಿದಂತೆ ಇನ್ನಿತರೆ ಜಾನುವಾರುಗಳನ್ನು ರಸ್ತೆಗೆ ಬಿಟ್ಟರೆ ಸಂಚಾರಕ್ಕೆ ಅಡ್ಡಿಯಾಗುವುದಲ್ಲದೆ, ಅಪಘಾತಗಳೂ ಸಂಭವಿಸುವುದರಿಂದ ಸಾರ್ವಜನಿಕರು ಪಾಲಿಕೆಯೊಂದಿಗೆ ಸಹಕರಿಸಬೇಕೆಂದು ತಿಳಿಸಿದ್ದಾರೆ. ಇಂದಿನ ಕಾರ್ಯಾ ಚರಣೆಯಲ್ಲಿ ಪಾಲಿಕೆಯ ಕೌಸ್ಕ್ವಾಡನ್ ಶ್ಯಾಂಸುಂದರ್ ಸೇರಿದಂತೆ ಇನ್ನಿತರ ಸಿಬ್ಬಂದಿ ಪಾಲ್ಗೊಂಡಿದ್ದರು. ಯಾದವಗಿರಿ, ಒಂಟಿಕೊಪ್ಪಲು, ಗೋಕುಲಂ, ದೇವರಾಜ ಮೊಹಲ್ಲಾ ಇನ್ನಿತರೆ ಕಡೆಯೂ ಜಾನುವಾರುಗಳು ರಾಜಾರೋಷವಾಗಿ ರಸ್ತೆಯಲ್ಲಿ ನಿಂತಿರುವುದು, ಅಲೆಯುತ್ತಿರುವುದು, ಆ ಮೂಲಕ ವಾಹನ ಹಾಗೂ ಜನ ಸಂಚಾರಕ್ಕೆ ಅಡ್ಡಿಪಡಿಸುವುದನ್ನು ಪ್ರತಿನಿತ್ಯ ಕಾಣಬಹುದಾಗಿದೆ. ಅದರಲ್ಲೂ ಕೆಲವೆಡೆ ಅವುಗಳ ಪಾಲಕರೇ ರಸ್ತೆಯಲ್ಲಿ ಮೆರವಣಿಗೆ ರೀತಿ ಕರೆದೊಯ್ಯುವುದು, ಪ್ರಶ್ನಿಸಿದರೆ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಧಮಕಿ ಹಾಕು ವಂತಹ ದೂರುಗಳು ಸಾರ್ವಜನಿಕರಿಂದ ಸಾಕಷ್ಟು ‘ಮೈಸೂರು ಮಿತ್ರ’ನಿಗೆ ನೀಡಲಾಗಿದೆ.

Translate »