ಎಸ್‍ಟಿಗೆ ಮೇಯರ್ ಮೀಸಲಾತಿಗೆ ಆಗ್ರಹಿಸಿ ನಗರ ಪಾಲಿಕೆ ಮುಂದೆ ಅಂಚೆ ಪತ್ರ ಚಳುವಳಿ
ಮೈಸೂರು

ಎಸ್‍ಟಿಗೆ ಮೇಯರ್ ಮೀಸಲಾತಿಗೆ ಆಗ್ರಹಿಸಿ ನಗರ ಪಾಲಿಕೆ ಮುಂದೆ ಅಂಚೆ ಪತ್ರ ಚಳುವಳಿ

January 10, 2021

ಮೈಸೂರು, ಜ.9(ಆರ್‍ಕೆ)- ಈ ಬಾರಿ ಮೈಸೂರು ಮೇಯರ್ ಸ್ಥಾನವನ್ನು ಪರಿ ಶಿಷ್ಟ ಪಂಗಡದವರಿಗೆ (ಎಸ್‍ಟಿ) ಮೀಸಲು ಕಲ್ಪಿಸಬೇಕೆಂದು ಆಗ್ರಹಿಸಿ ನಾಯಕ ಸಮು ದಾಯದ ಮುಖಂಡರು ಶನಿವಾರ ನಗರ ಪಾಲಿಕೆ ಕಚೇರಿ ಮುಂದೆ ಅಂಚೆ ಪತ್ರ ಚಳವಳಿ ನಡೆಸಿದರು.

ಎಸ್‍ಟಿಗೆ ಮೇಯರ್ ಸ್ಥಾನ ನೀಡ ಬೇಕು ಎಂದು ಮುಖ್ಯಮಂತ್ರಿಗಳಿಗೆ ಬರೆ ದಿರುವ ಅಂಚೆ ಕಾರ್ಡ್‍ಗಳನ್ನು ಡಬ್ಬಕ್ಕೆ ಹಾಕುವ ಮೂಲಕ ಆಗ್ರಹಿಸಿದ ಮುಖಂ ಡರು, ನಗರ ಪಾಲಿಕೆ ಅಸ್ತಿತ್ವಕ್ಕೆ ಬಂದ ನಂತರ ಈವರೆಗೆ ನಾಯಕ ಸಮು ದಾಯಕ್ಕೆ ಅವಕಾಶ ಸಿಕ್ಕಿಲ್ಲದಿರುವುದನ್ನು ಪರಿಗಣಿಸಬೇಕೆಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಪಡುವಾರಹಳ್ಳಿ ಎಂ. ರಾಮಕೃಷ್ಣ, ದೇವಪ್ಪ ನಾಯಕ, ಶ್ರೀಧರ್, ರಾಜು, ಆರ್.ಮಂಜುನಾಥ್, ರಘು, ರವಿ, ಜಯಸಿಂಹ, ಶಿವಣ್ಣ ಸೇರಿದಂತೆ ಹಲವರು ಅಂಚೆ ಪತ್ರ ಚಳುವಳಿಯಲ್ಲಿ ಭಾಗವಹಿಸಿದ್ದರು.

Translate »