ಮೈಮುಲ್ ನೇಮಕಾತಿ ಪ್ರಕ್ರಿಯೆಗೆ ಹೈಕೋರ್ಟ್ 3 ವಾರ ನಿರ್ಬಂಧ
ಮೈಸೂರು

ಮೈಮುಲ್ ನೇಮಕಾತಿ ಪ್ರಕ್ರಿಯೆಗೆ ಹೈಕೋರ್ಟ್ 3 ವಾರ ನಿರ್ಬಂಧ

June 21, 2020

ಮೈಸೂರು,ಜೂ.20(ಆರ್‍ಕೆಬಿ)- ಮೈಮುಲ್‍ನ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹೈಕೋರ್ಟ್ 3 ವಾರ ನಿರ್ಬಂಧ ವಿಧಿಸಿದೆ ಎಂದು ಶಾಸಕ ಸಾ.ರಾ.ಮಹೇಶ್ ತಿಳಿಸಿದ್ದಾರೆ.

ಮೈಸೂ ರಿನ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಮುಲ್ ನೇಮಕಾತಿ ವಿಚಾರವಾಗಿ ಹೈಕೋರ್ಟ್ 3 ವಾರಗಳ ವರೆಗೂ ನೇಮಕಾತಿ ಪ್ರಕ್ರಿಯೆಗೆ ನಿರ್ಬಂಧ ವಿಧಿಸಿದೆ. ಇದರಿಂದಾಗಿ ಮೈಮುಲ್ ನೇಮಕಾತಿ ಎಲ್ಲಾ ಪ್ರಕ್ರಿಯೆಗೆ ತಡೆ ಬಿದ್ದಿದೆ. ಕೊನೆಗೂ ನಮ್ಮ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ ಎಂದರು.

3 ವಾರಗಳಲ್ಲಿ ಹೈಕೋರ್ಟ್ ಎಲ್ಲಾ ಹಂತದಲ್ಲೂ ಮಾಹಿತಿ ಸಂಗ್ರಹಿಸಲಿದ್ದು, ಮೈಮುಲ್ ಅಕ್ರಮ ಮತ್ತಷ್ಟು ಸಾಬೀತಾಗಲಿದೆ. ಪರೀಕ್ಷೆ ಬರೆದವರಿಗೆ ಓಎಂಆರ್ ಶೀಟ್ ನೀಡಿಲ್ಲ, ಕೀ ಉತ್ತರ ಬಿಟ್ಟಿಲ್ಲ. ಯಾವ ಪ್ರಕ್ರಿಯೆಯೂ ಇಲ್ಲದೇ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನೂ ಬಿಡುಗಡೆ ಮಾಡದೇ ಇವರಿಗೆ ಬೇಕಾದವರಿಗೆ ಸಂದರ್ಶನ ಮಾಡಲು ಮುಂದಾಗಿದ್ದರು. ಈಗ ಎಲ್ಲಾ ವಿಚಾರವೂ ಕೋರ್ಟ್‍ಗೆ ತಲುಪಲಿದ್ದು, ಈ ನೇಮಕಾತಿ ಪ್ರಕ್ರಿಯೆ ರದ್ದಾಗಲಿದೆ ಎಂದರು. ಗೋಷ್ಠಿಯಲ್ಲಿ ಶಾಸಕ ಅಶ್ವಿನ್‍ಕುಮಾರ್, ಜಿಪಂ ನಾಗರಾಜ್ ಇನ್ನಿತರರಿದ್ದರು.

Translate »