ಕಬಿನಿ ಕುಡಿಯುವ ನೀರು ಪೂರೈಕೆ ಪರಿಶೀಲಿಸಿದ ಶಾಸಕ ರಾಮದಾಸ್
ಮೈಸೂರು

ಕಬಿನಿ ಕುಡಿಯುವ ನೀರು ಪೂರೈಕೆ ಪರಿಶೀಲಿಸಿದ ಶಾಸಕ ರಾಮದಾಸ್

June 21, 2020

ಮೈಸೂರು, ಜೂ.20(ಆರ್‍ಕೆಬಿ)- ಮೈಸೂರು ಪಾಲಿಕೆಯ 60, 61 ಮತ್ತು 62ನೇ ವಾರ್ಡ್‍ನ ಮನೆಗಳಿಗೆ ಶನಿವಾರ ಭೇಟಿ ನೀಡಿದ ಕೃಷ್ಣರಾಜ ಕ್ಷೇತ್ರ ಶಾಸಕ ಎಸ್.ಎ.ರಾಮದಾಸ್, ಕಬಿನಿ ಯೋಜನೆ ಯಡಿ ಕುಡಿಯುವ ನೀರು ಸರಬರಾಜಾ ಗುತ್ತಿರುವುದನ್ನು ಪರಿಶೀಲಿಸಿದರು.

ಮೈಸೂರು ನಗರಕ್ಕೆ ವಾರದ ಏಳೂ ದಿನ, 24 ಗಂಟೆ ನಿರಂತರ ಕುಡಿಯುವ ನೀರು ಒದಗಿಸುವ ಕಾರ್ಯಕ್ಕೆ 2010-11ನೇ ಸಾಲಿನಲ್ಲೇ ಚಾಲನೆ ನೀಡಲಾಗಿತ್ತು. ಗುತ್ತಿಗೆ ಪಡೆದಿದ್ದ ಜೆಸ್ಕೊ ಕಂಪನಿ ಕಾಮ ಗಾರಿಯನ್ನು ಅರ್ಧಕ್ಕೆ ನಿಲ್ಲಿಸಿತ್ತು. ಕೊಳವೆ ಸಂಪರ್ಕ ಕಲ್ಪಿಸಿದ್ದರೂ ನೀರು ಸರಬರಾಜಾ ಗದ ಸ್ಥಿತಿ ನಿರ್ಮಾಣವಾಗಿತ್ತು. 2016ರಲ್ಲಿ ಮತ್ತೊಮ್ಮೆ ಚಾಲನೆ ಕೊಡಲಾಯಿತು. ವಾಸ್ತವÀವಾಗಿ 3 ವರ್ಷಗಳಲ್ಲಿ ಕೆಲಸ ಪೂರ್ಣಗೊಳಿಸಿ ನೀರು ಸರಬರಾಜು ಮಾಡಬೇಕೆಂಬ ಷರತ್ತು ವಿಧಿಸಲಾಗಿತ್ತು. ಆದರೆ 2019ರ ಸೆಪ್ಟೆಂಬರ್‍ಗೆ ಟೆಂಡರ್ ಅವಧಿ ಮುಗಿದರೂ ಕಾಮಗಾರಿ ಅಪೂರ್ಣ ವಾಗಿತ್ತು. ಬಳಿಕ ನಿರಂತರ ಸಭೆಗಳನ್ನು ನಡೆಸಿ, ಇಂದು ಪ್ರಾಯೋಗಿಕವಾಗಿ ನೀರು ಸರಬರಾಜು ಮಾಡುವ ಕಾರ್ಯ ಆರಂ ಭಿಸಲಾಗಿದೆ ಎಂದು ರಾಮದಾಸ್ ಈ ಸಂದರ್ಭದಲ್ಲಿ ತಿಳಿಸಿದರು.

ಮನೆಗಳ 1 ಮತ್ತು 2ನೇ ಮಹಡಿಗಳಿಗೆ ನೀರು ಸರಬರಾಜು ಆಗುತ್ತಿದೆಯೇ? ಎತ್ತರ ಪ್ರದೇಶದ ಮನೆಗಳಿಗೆ ನೀರು ತಲುಪುತ್ತಿ ದೆಯೇ? ಎಂಬುದನ್ನು ಪರಿಶೀಲಿಸಲಾಯಿತು.

ಮುಂದಿನ 100 ದಿನಗಳಲ್ಲಿ ಕಬಿನಿ ಯಿಂದ ಹೆಚ್ಚುವರಿ ನೀರು ಸರಬರಾಜಾಗ ಲಿದ್ದು, ನಮ್ಮ ಕ್ಷೇತ್ರಕ್ಕೆ ಮೇಳಾಪುರದಿಂದ ಹೊಸ ಸಂಪರ್ಕ ಕಲ್ಪಿಸುವ ಕಾರ್ಯವೂ ನಡೆಯುತ್ತಿದೆ. ಮುಂದಿನ ಹತ್ತು ವರ್ಷ ನೀರಿನ ಸಮಸ್ಯೆಯೇ ಇರುವುದಿಲ್ಲ ಎಂದು ಶಾಸಕರು ಭರವಸೆ ನೀಡಿದರು. ಪ್ರಾಯೋ ಗಿಕವಾದ ನೀರು ಸರಬರಾಜಿನ ವ್ಯವಸ್ಥೆ ಇನ್ನೂ 3 ತಿಂಗಳ ಕಾಲ ನಡೆಯಲಿದ್ದು, ಎಲ್ಲವೂ ತಾಂತ್ರಿಕವಾಗಿ ಸರಿಇದ್ದಲ್ಲಿ, ಕಬಿನಿ ಮತ್ತು ಮೇಳಾಪುರದಿಂದ ನೀರು ಸರಬ ರಾಜು ಆಗುತ್ತಿದ್ದಂತೆಯೇ 24 ಗಂಟೆಯೂ ನೀರು ಸರಬರಾಜಾಗಲಿದೆ. ಹೀಗಾಗಿ ಮೈಸೂ ರಿನಲ್ಲಿ 24ಘಿ7 ಕಾಲ ನೀರು ಒದಗಿಸಿ ದಂತಾಗುತ್ತದೆ ಎಂದರು.

ಈ ಸಂದರ್ಭ ಪಾಲಿಕೆ ಸದಸ್ಯರಾದ ಶಾಂತಾ ವಡಿವೇಲು, ಶೋಭಾ, ಬಿಜೆಪಿ ಕೃಷ್ಣರಾಜ ಕ್ಷೇತ್ರ ಅಧ್ಯಕ್ಷ ಎಂ.ವಡಿವೇಲು, ಪ್ರಧಾನ ಕಾರ್ಯದರ್ಶಿ ನಾಗೇಂದ್ರ, ಪಾಲಿಕೆ ಮಾಜಿ ಸದಸ್ಯೆ ವಿದ್ಯಾ ಅರಸ್, ಮುರಳಿ, ಉಮಾ ಇನ್ನಿತರರಿದ್ದರು.

Translate »