ಹಿರಿಯ ಜೀವಗಳ ಅಳಲು ಆಲಿಸಿದ ಶಾಸಕ ರಾಮದಾಸ್
ಮೈಸೂರು

ಹಿರಿಯ ಜೀವಗಳ ಅಳಲು ಆಲಿಸಿದ ಶಾಸಕ ರಾಮದಾಸ್

April 18, 2020

ಮೈಸೂರು, ಏ.17(ಆರ್‍ಕೆಬಿ)- ಮೈಸೂರಿನ ಜೆ.ಪಿ.ನಗರದಲ್ಲಿ ಹಿರಿಯ ನಾಗರಿಕರ ವಿಶ್ರಾಂತಿಧಾಮ ಪೇಜಾವರ ಶ್ರೀಧಾಮ (ಪೇಜಾವರ ಶ್ರೀಗಳ ಟ್ರಸ್ಟ್) ಕಳೆದ 10 ವರ್ಷಗಳಿಂದ ನಡೆಯುತ್ತಾ ಬಂದಿದೆ. ಈಗ 40 ಜನ ಮಹಿಳಾ ಮತ್ತು ಪುರುಷ ಹಿರಿಯ ನಾಗರಿಕರು ಇಲ್ಲಿ ಆಶ್ರಯ ಪಡೆದಿದ್ದಾರೆ. 65 ವರ್ಷ ಮೇಲ್ಪಟ್ಟವರಿಗೆ ಇಲ್ಲಿ ಆಶ್ರಯ ನೀಡಲಾಗುತ್ತದೆ. ಈಗ 16 ಮಂದಿ ಪುರುಷರು 24 ಮಂದಿ ಮಹಿಳೆ ಯರು ಆಶ್ರಯ ಪಡೆದಿದ್ದಾರೆ. ಮೈಸೂರು, ಬೆಂಗಳೂರು, ಚೆನ್ನೈ ಇನ್ನಿತರ ಕಡೆಗಳ ಹಿರಿಯ ನಾಗರಿಕರಿಗೆ ಇಲ್ಲಿ ಆಶ್ರಯ ನೀಡ ಲಾಗಿದೆ. ಆಶ್ರಮ ವಾಸಿಗಳಿಗೆ ಪ್ರತಿದಿನ ವಸತಿ, ಊಟದ ಜೊತೆಗೆ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮ, ಆಧ್ಯಾತ್ಮಿಕ ಪ್ರವಚನ, ಸಹಸ್ರನಾಮ, ಭಜನೆ, ಸಂಜೆ ವೇಳೆ ಧ್ಯಾನ ಸಹ ಇರುತ್ತದೆ. ತುರ್ತು ಸಂದರ್ಭದ ಚಿಕಿತ್ಸೆ ನೀಡಲು ಚಿಕಿತ್ಸಾ ವಾರ್ಡ್ ಸಹ ಮಾಡಲಾಗಿದೆ. ಡಾ.ನಾಗೇಂದ್ರಪ್ರಸಾದ್, ಡಾ.ರಮಾ ನಾಗೇಂದ್ರಪ್ರಸಾದ್ ಅಗತ್ಯ ಸಂದರ್ಭದಲ್ಲಿ ಇಲ್ಲಿ ಚಿಕಿತ್ಸೆ ನೀಡುತ್ತಾರೆ.

ಆಶ್ರಮದಲ್ಲಿ 65 ವರ್ಷಕ್ಕಿಂತ ಮೇಲ್ಪ ಟ್ಟವರೇ ಇರುವುದರಿಂದ ಇಲ್ಲಿ ಕೋವಿಡ್- 19 ಕೊರೊನಾ ವೈರಸ್ ನುಸುಳದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈ ಗೊಳ್ಳಲಾಗಿದೆ. ಆಶ್ರಮದೊಳಗೆ ಯಾರನ್ನೂ ಅನಗತ್ಯವಾಗಿ ಬಿಡುವುದಿಲ್ಲ. ಯಾರೇ ಬಂದರೂ ಅವರಿಗೆ ಸ್ಕ್ರೀನಿಂಗ್ ಮಾಡಿದ ನಂತರವೇ ಒಳ ಬಿಡಲಾಗುತ್ತದೆ ಎಂದು ಆಡಳಿತಾಧಿಕಾರಿ ಗುರುನಾಥ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು. ಶ್ರೀಧಾಮಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ವಾಸುದೇವ ಭಟ್, ಗುರುನಾಥ್ ಟ್ರಸ್ಟಿಗಳಾ ಗಿದ್ದಾರೆ. ಶಾಸಕ ಎಸ್.ಎ.ರಾಮ ದಾಸ್ ಉಪಾಧ್ಯಕ್ಷರಾಗಿದ್ದಾರೆ. ಶಾಸಕ ಎಸ್.ಎ. ರಾಮದಾಸ್ ಇಂದು ಪೇಜಾವರ ಶ್ರೀಧಾಮಕ್ಕೆ ಭೇಟಿ ನೀಡಿ, ಇಲ್ಲಿ ಆಶ್ರಯ ಪಡೆದಿರುವ ವೃದ್ಧರಿಗೆ ಅಗತ್ಯವಿರುವ ಆಹಾರ ಪದಾರ್ಥಗಳ ಕೊಡುಗೆ ನೀಡಿದರು. ಈ ಸಂದರ್ಭದಲ್ಲಿ ಆರು ಮಂದಿ ಆಶ್ರಮ ವಾಸಿಗಳು ಮುಖ್ಯಮಂತ್ರಿ ಪರಿಹಾರ ನಿಧಿಗೆ ವೈಯಕ್ತಿವಾಗಿ 27,000 ರೂ. ಹಣದ ಚೆಕ್ ಅನ್ನು ಶಾಸಕ ರಾಮದಾಸ್ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಆಶ್ರಮ ವಾಸಿಗಳ ಉದ್ದೇಶಿಸಿ ಮಾತನಾಡಿದ ಶಾಸಕ ರಾಮದಾಸ್, ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್‍ನಿಂದಾಗಿ ನಿರಾಶ್ರಿತರಾಗಿರುವ 3500 ಜನರಿಗೆ ಪ್ರತಿದಿನ ಆಹಾರ ಒದಗಿಸ ಲಾಗುತ್ತಿದೆ. ಹಾಗೆಯೇ, ಶ್ರೀಧಾಮದ ಹಿರಿಯ ನಾಗರಿಕರ ಯೋಗಕ್ಷೇಮ ವಿಚಾರಿ ಸಲು ತಾವು ಬಂದಿದ್ದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಜಿಎಸ್‍ಎಸ್ ಫೌಂಡೇ ಶನ್‍ನ ಶ್ರೀಹರಿ, ಆಡಳಿತಾಧಿಕಾರಿ ಗುರು ನಾಥ್ ಇನ್ನಿತರರು ಉಪಸ್ಥಿತರಿದ್ದರು.

Translate »