ದಿನಸಿ ಪದಾರ್ಥಗಳಿಗೆ ಬೆಲೆ ನಿಗದಿಪಡಿಸಲು ಅಶ್ವಿನ್‍ಕುಮಾರ್ ಸೂಚನೆ
ಮೈಸೂರು ಗ್ರಾಮಾಂತರ

ದಿನಸಿ ಪದಾರ್ಥಗಳಿಗೆ ಬೆಲೆ ನಿಗದಿಪಡಿಸಲು ಅಶ್ವಿನ್‍ಕುಮಾರ್ ಸೂಚನೆ

April 18, 2020

ತಿ.ನರಸೀಪುರ, ಏ.17(ಎಸ್‍ಕೆ)-ಕೋವಿಡ್-19 ಹಿನ್ನೆಲೆಯಲ್ಲಿ ಪಟ್ಟಣದ ದಿನಸಿ ವರ್ತಕರು ಪಡಿತರ ಪದಾರ್ಥ ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡು ತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದು, ಹೋಲ್‍ಸೇಲ್ ವ್ಯಾಪಾರಿ ಗಳಿಂದ ಮಾಹಿತಿ ಪಡೆದು ನಿಖರ ಬೆಲೆ ನಿಗದಿ ಪಡಿಸುವಂತೆ ಶಾಸಕ ಎಂ.ಅಶ್ವಿನ್ ಕುಮಾರ್ ತಹಸೀಲ್ದಾರ್‍ಗೆ ಸೂಚನೆ ನೀಡಿದರು.

ತಾಲೂಕು ನ್ಯಾಯ ಬೆಲೆ ಅಂಗಡಿಗಳ ವಿತರಕರ ವತಿಯಿಂದ ನೀಡುತ್ತಿರುವ ಆಹಾರದ ಕಿಟ್‍ಗಳನ್ನು ತಹಸೀಲ್ದಾರ್ ಮೂಲಕ ಬಡವರಿಗೆ ತಲುಪಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಲಾಕ್‍ಡೌನ್ ಹಿನ್ನೆಲೆಯಲ್ಲಿ ಪಟ್ಟಣದ ವರ್ತಕರು ದಿನಸಿ ಪದಾರ್ಥಗಳಿಗೆ ಹೆಚ್ಚು ದರ ನಿಗದಿ ಮಾಡುತ್ತಿದ್ದಾರೆಂಬ ಆರೋಪ ಇದೆ. ಜನ ಸಂಕಷ್ಟದಲ್ಲಿರುವ ವೇಳೆ ವರ್ತಕರು ಮಾನವೀಯತೆ ಪ್ರದರ್ಶಿಸಬೇಕು. ಹೆಚ್ಚು ದರ ನಿಗದಿ ಮಾಡಿ ಜನರನ್ನು ಇನ್ನು ಕಷ್ಟಕ್ಕೆ ದೂಡುವ ಕೆಲಸ ಮಾಡಬಾರದು. ಇದನ್ನರಿತು ತಾಲೂಕು ಆಡಳಿತದ ಅಧಿಕಾರಿಗಳು ಹೋಲ್‍ಸೇಲ್ ವ್ಯಾಪಾರದಾರರನ್ನು ಭೇಟಿ ಮಾಡಿ ದರಗಳ ಸತ್ಯಾಸತ್ಯತೆ ಪರಿ ಶೀಲಿಸ ಬೇಕು. ಬಡಜನರಿಗೆ ಕೈಗೆಟುಕುವ ದರದಲ್ಲಿ ಆಹಾರ ಪದಾರ್ಥಗಳನ್ನು ದೊರಕಿ ಸುವಂತೆ ಸೂಚಿಸಿ ಅಂಗಡಿಗಳ ಮುಂದೆ ದರ ಪಟ್ಟಿ ಕಡ್ಡಾಯಗೊಳಿಸಲು ಸೂಚಿಸಿದರು.

ಮಾಂಸ ಮಾರಾಟ ಬೇಡ: ಪಟ್ಟಣದಲ್ಲಿ ಮಾಂಸ ಮಾರಾಟ ಕುರಿತಂತೆ ಮಾತ ನಾಡಿದ ಶಾಸಕರು, ಅಧಿಕಾರಿಗಳು ಹಾಗೂ ಮಾಂಸ ಮಾರಾಟಗಾರರೊಂದಿಗೆ ಚರ್ಚಿಸಿ ಸದ್ಯದ ಪರಿಸ್ಥಿತಿಯಲ್ಲಿ ಮುಕ್ತ ಮಾರು ಕಟ್ಟೆಯಲ್ಲಿ ಮಾಂಸ ಮಾರಾಟ ಮಾಡುವ ಅವಶ್ಯಕತೆ ಇಲ್ಲ. ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಳ್ಳುವುದು ಬೇಡ ಎಂದು ಅಭಿಪ್ರಾಯಪಟ್ಟರು.

ಕೋವಿಡ್-19 ತಾಲೂಕಿನಲ್ಲಿ ಇಲ್ಲದ್ದರಿಂದ ಎಲ್ಲಾ ನೆಮ್ಮದಿಯಿಂದಿದ್ದೇವೆ. ಸುಖಾ ಸುಮ್ಮನೆ ಸಮಸ್ಯೆ ತಂದಿಟ್ಟುಕೊಳ್ಳು ವುದು ಸರಿಯಲ್ಲ. ಮಾಂಸ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟರೆ ಜನಸಂದಣಿ ಉಂಟಾ ಗುತ್ತದೆ. ಅಲ್ಲದೆ ತಾಲೂಕು ಆಡಳಿತ ನಿಗದಿ ಪಡಿಸಿದ ದರಕ್ಕೆ ಮಾಂಸ ಮಾರಲು ಸಾಧ್ಯ ವಿಲ್ಲದ ಕಾರಣ ಯಥಾಸ್ಥಿತಿ ಕಾಪಾಡಿ ಕೊಳ್ಳುವುದು ಉತ್ತಮ ಎಂದು ಹೇಳಿದರು.

ಅರ್ಹರಿಗೆ ಪಡಿತರ ತಲುಪಲಿ: ತಾಲೂಕಿನ ನ್ಯಾಯಬೆಲೆ ಅಂಗಡಿ ವಿತರಕರು ಮಾನವೀಯತೆಯಿಂದ ತಾಲೂಕು ಆಡಳಿತಕ್ಕೆ ನೀಡಿರುವ ಆಹಾರ ಪದಾರ್ಥಗಳ ಕಿಟ್‍ಗಳನ್ನು ತಾಲೂಕು ಆಡಳಿತ ಸರ್ವೇ ಮಾಡಿ ತಾಲೂಕಿನ ಬಡತನ ರೇಖೆಗಿಂತ ಕೆಳಗಿರುವ ಅರ್ಹರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಕೋರಿದರು.

ತಾಲೂಕು ನ್ಯಾಯ ಬೆಲೆ ಅಂಗಡಿ ವಿತರಕರ ಸಂಘದ ಅಧ್ಯಕ್ಷ ನಾಗೇಂದ್ರ, ಕಾರ್ಯ ದರ್ಶಿ ಎಸ್. ಉದಯಶಂಕರ್, ಖಜಾಂಚಿ ರಾಜೇಶ್, ಜಿಪಂ ಮಾಜಿ ಸದಸ್ಯ ಎಂ.ಆರ್. ಸೋಮಣ್ಣ, ಮೂಗೂರು ಸಿದ್ದರಾಜು, ಎಂ.ಶಿವಪ್ರಸಾದ್, ಬಿ.ಆರ್. ರಾಘವೇಂದ್ರ ಸ್ವಾಮಿ, ಕೆಂಪರಾಜು, ಶಿರಸ್ತೇದಾರ್ ಜೆ.ಕೆ. ಪ್ರಭುರಾಜ್, ಆಹಾರ ಇಲಾಖೆಯ ಸಣ್ಣ ಸ್ವಾಮಿ, ಆರ್.ಐ.ಮಹದೇವ ನಾಯಕ್, ಶಂಭು ದೇವನ ಪುರ ರಮೇಶ್, ವಕೀಲ ಮಹ ದೇವಸ್ವಾಮಿ, ಕೆ.ಎನ್.ಪ್ರಭು ಸ್ವಾಮಿ ಇದ್ದರು.

Translate »