ತಹಸೀಲ್ದಾರ್ ಡಿ.ನಾಗೇಶ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಗುಂಜಾನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಯಶಸ್ಸಿಗೆ ನಿರ್ಧಾರ
ಮೈಸೂರು

ತಹಸೀಲ್ದಾರ್ ಡಿ.ನಾಗೇಶ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಗುಂಜಾನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಯಶಸ್ಸಿಗೆ ನಿರ್ಧಾರ

March 18, 2021

ತಿ.ನರಸೀಪುರ, ಮಾ.17(ಎಸ್‍ಕೆ)-ಪಟ್ಟಣದಲ್ಲಿ ಮಾ.29ರಂದು ಜರುಗಲಿರುವ ಇತಿಹಾಸ ಪ್ರಸಿದ್ಧ ಶ್ರೀ ಗುಂಜಾನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಹಿನ್ನೆಲೆಯಲ್ಲಿ ತಹಸೀಲ್ದಾರ್ ಡಿ.ನಾಗೇಶ್ ಅಧ್ಯಕ್ಷತೆ ಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅಗತ್ಯ ಸಿದ್ಧತೆಗಳ ಕುರಿತು ಚರ್ಚಿಸಲಾಯಿತು.
ಪಟ್ಟಣದ ಶ್ರೀಗುಂಜಾನರಸಿಂಹಸ್ವಾಮಿ ದೇಗುಲ ಆವರಣದಲ್ಲ್ಲಿ ಕರೆದಿದ್ದ ಸಭೆಯಲ್ಲಿ ರಥೋತ್ಸವದ ಅಂಗವಾಗಿ ಮಾ.22ರಿಂದ ಏ.2ರವರೆಗೆ ನಡೆಯ ಲಿರುವ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಹಾಜರಿದ್ದ ವಿವಿಧ ಗ್ರಾಮಗಳ ಯಜಮಾನರು, ಗ್ರಾಮಸ್ಥರಿಂದ ಸಲಹೆ-ಅಭಿಪ್ರಾಯ ಪಡೆಯಲಾಯಿತು. ಶ್ರೀ ಗುಂಜಾ ನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಯಶಸ್ವಿ ಯಾಗಿ ಜರುಗಲು ಅಗತ್ಯ ಕಾಮಗಾರಿ ಹಾಗೂ ಮೂಲ ಸೌಕರ್ಯ ಕಲ್ಪಿಸಲು ತೀರ್ಮಾನಿಸಲಾಯಿತು.

ತಹಸೀಲ್ದಾರ್ ಡಿ.ನಾಗೇಶ್ ಮಾತನಾಡಿ, ರಥೋತ್ಸವದ ಹಿನ್ನೆಲೆಯಲ್ಲಿ ದೇವಾಲಯದ ಬಳಿ ಕುಡಿಯುವ ನೀರಿನ ವ್ಯವಸ್ಥೆಗಾಗಿ ನಲ್ಲಿಗಳನ್ನು ಅಳವಡಿಸಿ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸಿಕೊಡು ವಂತೆ ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು.

ದೇವಾಲಯದ ಸುತ್ತಲು ಸ್ವಚ್ಛತೆಗೆÀ ಕಸದ ಬುಟ್ಟಿ ಅಳವಡಿಸುವುದು, ಆರೋಗ್ಯ ಇಲಾಖೆ ಸಹಕಾರ ದೊಂದಿಗೆ ಅಗತ್ಯವಿರುವೆಡೆ ಫಾಗಿಂಗ್ ಮಾಡುವುದು. ರಾಷ್ಟ್ರೀಯ ಹೆದ್ದಾರಿ ಇಲಾಖೆ ವತಿಯಿಂದ ನಿರ್ಮಾಣ ಗೊಂಡ ಶೌಚಾಲಯವನ್ನು ತಾತ್ಕಾಲಿಕವಾಗಿ ರಥೋ ತ್ಸವದ ಅವಧಿಯಿಂದ ಯುಗಾದಿವರೆಗೂ ನಿರ್ವಹಿ ಸುವಂತೆ ತಹಸೀಲ್ದಾರ್ ಸೂಚಿಸಿದರು.

ರಥ ಎಳೆಯಲು ಯೋಗ್ಯ ವಾಗಿದೆಯೇ ಎಂಬ ಬಗ್ಗೆ ತಾಂತ್ರಿಕ ವರದಿ ನೀಡುವಂತೆ ತಹಸೀಲ್ದಾರ್, ಲೋಕೋಪಯೋಗಿ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದ ರಲ್ಲದೆ, ರಥೋತ್ಸವದಂದು ಸಮ ರ್ಪಕ ವಿದ್ಯುತ್ ಸರಬರಾಜು, ರಥ ಸಾಗುವ ದಾರಿಯಲ್ಲಿ ವಿದ್ಯುತ್ ತಂತಿ ಗಳ ತಾತ್ಕಾಲಿಕ ತೆರವುಗೊಳಿಸು ವಂತೆ ಸೆಸ್ಕ್ ಉಪವಿಭಾಗದ ಸಹಾ ಯಕ ಕಾರ್ಯಪಾಲಕ ಅಭಿ ಯಂತರರಿಗೆ ನಿರ್ದೇಶಿಸಿದರು.

ಪೊಲೀಸ್ ವೃತ್ತನಿರೀಕ್ಷಕ ಕೃಷ್ಣಪ್ಪ ಮಾತನಾಡಿ, ರಥೋತ್ಸವದಂದು ರಥದ ಚಕ್ರದ ಬಳಿ ಹೆಚ್ಚಿನ ಸಂಖ್ಯೆ ಜನ ಸೇರುವಂತಿಲ್ಲ. ಉತ್ಸವದಲ್ಲಿ ಭಕ್ತಾದಿಗಳ ಮೇಲೆ ಬಣ್ಣ ಮತ್ತು ನೀರನ್ನು ಎರಚುವುದನ್ನು ನಿಷೇಧಿ ಸಲಾಗಿದ್ದು, ನಿಯಮ ಉಲ್ಲಂಘಿಸಿ ದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ರಥ ಸಿದ್ಧಪಡಿಸಲು ಹಸಿರು ಬಿದ ರಿನ ಅವಶ್ಯಕತೆ ಇರುವುದರಿಂದ ಬಿದಿರು ಹಾಗೂ ಬೊಂಬಿನ ವ್ಯವಸ್ಥೆ ಮಾಡುವಂತೆ ವಲಯ ಅರಣ್ಯಾಧಿಕಾರಿ ನಾಗಾರ್ಜುನ ಅವರಿಗೆ ತಹಸೀಲ್ದಾರ್ ನಾಗೇಶ್ ಸೂಚನೆ ನೀಡಿದರು.

ಚಿನ್ನಾಭರಣದ ಲೆಕ್ಕ ಕೊಡಿ: ಸಭೆಯಲ್ಲಿ ಮಾತ ನಾಡಿದ ಕೆಬ್ಬೆ ಗ್ರಾಮದ ಯಜಮಾನ ರಾಮಚಂದ್ರ, ಪ್ರತಿ ವರ್ಷ ದೇವಸ್ಥಾನಕ್ಕೆ ಭಕ್ತಾದಿಗಳಿಂದ ಸಂದಾಯವಾಗುತ್ತಿರುವ ಕಾಣಿಕೆ ಹಣ ಹಾಗೂ ಚಿನ್ನ, ಬೆಳ್ಳಿಯ ಲೆಕ್ಕವನ್ನು ಇಲಾಖೆ ಸಾರ್ವಜನಿಕರಿಗೆ ನೀಡುತ್ತಿಲ್ಲ. ಈ ಬಗ್ಗೆ ಮಾಹಿತಿ ತಿಳಿಯದಾಗಿದೆ ಎಂದು ಹೇಳಿದರು.

ತಹಸೀಲ್ದಾರ್ ಡಿ.ನಾಗೇಶ್, ಬ್ರಹ್ಮ ರಥೋತ್ಸವ ಮುಗಿಯುತ್ತಿದ್ದಂತೆ ಗ್ರಾಮಸ್ಥರ ಸಭೆ ಕರೆದು ಮಾಹಿತಿ ನೀಡುವಂತೆ ಮುಜರಾಯಿ ಇಲಾಖೆಯ ಕಿರಣ್‍ಗೆ ತಿಳಿಸಿದರು.

ಸಭೆಯಲ್ಲಿ ಪುರಸಭಾಧ್ಯಕ್ಷ ಎನ್.ಸೋಮಣ್ಣ, ಆರೋಗ್ಯಾಧಿಕಾರಿ ಚೇತನ್‍ಕುಮಾರ್, ಪಾರುಪತ್ತೆ ದಾರ್ ದೀಪು, ವೀರಶೈವ ಸಂಘದ ಅಧ್ಯಕ್ಷ ಶಾಂತ ರಾಜು, ತಾಲೂಕು ಪಂಚಾಯಿತಿ ಸದಸ್ಯ ರಂಗಪ್ಪ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಬಸವಣ್ಣ, ಬಸವರಾಜು, ಮಹದೇವಸ್ವಾಮಿ, ಪುಳ್ಳಾರಿಗೌಡ, ಆಲಗೂಡು ಸಿದ್ದಪ್ಪ, ಬಾಗಳಿ ಯೋಗೇಶ್, ಸಂದೇಶ್, ಮಣಿ, ಹಗಿರಿ, ಹರೀಶ್, ವರದರಾಜು, ಸಿದ್ದಪ್ಪ, ಅರ್ಚಕರಾದ ವೆಂಕಟೇಶ್, ಜಜ್ಜಪ್ಪ, ಸೇರಿ ದಂತೆ ಆಲಗೂಡು, ಗೋಪಾಲಪುರ, ಕೆಬ್ಬೆ-ವ್ಯಾಸ ರಾಜಪುರ ಹಾಗೂ ತಿ.ನರಸೀಪುರ ಪಟ್ಟಣದ ಯಜ ಮಾನರು ಹಾಜರಿದ್ದರು.

Translate »