ಇಂದಿನಿಂದ ಉಚಿತ ಮಾನಸಿಕ ಆರೋಗ್ಯ ತಪಾಸಣೆ, ಸಮಾಲೋಚನಾ ಶಿಬಿರ
ಮೈಸೂರು

ಇಂದಿನಿಂದ ಉಚಿತ ಮಾನಸಿಕ ಆರೋಗ್ಯ ತಪಾಸಣೆ, ಸಮಾಲೋಚನಾ ಶಿಬಿರ

March 17, 2021

ಮೈಸೂರು, ಮಾ.16-ಮೈಸೂರಿನ ನಜರ್‍ಬಾದ್‍ನಲ್ಲಿರುವ ಗೋಪಾಲಗೌಡ ಶಾಂತವೇರಿ ಸ್ಮಾರಕ ಆಸ್ಪತ್ರೆಯಲ್ಲಿ ಮಾ.17 ರಿಂದ 24ರವರೆಗೆ ಉಚಿತ ಮಾನಸಿಕ ಆರೋಗ್ಯ ತಪಾಸಣೆ ಮತ್ತು ಸಮಾ ಲೋಚನಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಆಸ್ಪತ್ರೆ ಆಡಳಿತಾಧಿಕಾರಿ ತಿಳಿಸಿದ್ದಾರೆ.

ಈ ಸಂಬಂಧ ಹೇಳಿಕೆ ನೀಡಿರುವ ಅವರು, ಮಾನಸಿಕ ಸಮಸ್ಯೆಗಳಾದ ಆತಂಕ (ಗಾಬರಿ), ಭಯ, ನಿದ್ರಾಹೀನತೆ ಹೊಂದಾಣಿಕೆ ಸಮಸ್ಯೆಗಳು, ಖಿನ್ನತೆ, ವ್ಯಕ್ತಿಗತ ಸಮಸ್ಯೆಗಳು, ಟಿವಿ, ಮೊಬೈಲ್ ವ್ಯಸನ, ಮೊಬೈಲ್ ಆಟದ ಗೀಳು, ವ್ಯಕ್ತಿತ್ವ ಸಮಸ್ಯೆ, ಮಾನಸಿಕ ಒತ್ತಡ, ಶೈಕ್ಷಣಿಕ ಅಭಿವೃದ್ಧಿಯಲ್ಲಿ ಕುಂಠಿತ, ಆಕ್ರಮಣಕಾರಿ ಮನಸ್ಥಿತಿ, ಉದ್ವೇಗ, ಮದ್ಯಪಾನ ಮತ್ತು ಧೂಮಪಾನ ವ್ಯಸನ ಇತ್ಯಾದಿ ಸಮಸ್ಯೆಗಳಿಗೆ ಕೇಂದ್ರೀಯ ಸಂಸ್ಥೆಯಲ್ಲಿ ತರಬೇತಿ ಪಡೆದಿರುವ ಖ್ಯಾತ ಮಾನಸಿಕ ತಜ್ಞ ಡಾ.ಅಹೇಲಿ ಡೇ ಮತ್ತು ಕ್ಲಿನಿಕಲ್ ಮನೋವೈದ್ಯ ಕು. ಕೀರ್ತನಕುಮಾರಿ ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ. ಶಿಬಿರವು ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಮತ್ತು ಸಂಜೆ 5ರಿಂದ 7ರವರೆಗೆ ನಡೆಯಲಿದೆ. ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳಲು ಕೋರಲಾಗಿದೆ. ಮಾಹಿತಿ ಗಾಗಿ ಸಂಪರ್ಕಿಸಿ 0821-4001600, 83102 37259 (ರಾಜೇಶ್ ಸ್ಕಂದ)

Translate »