Tag: S.A. Ramadas

ಶಾಸಕ ಎಸ್.ಎ.ರಾಮದಾಸ್ ಅವರಿಂದ ಗುಂಡೂರಾವ್‍ನಗರದಲ್ಲಿ ಸ್ವಚ್ಛತಾ ಕಾರ್ಯಕ್ರಮ
ಮೈಸೂರು

ಶಾಸಕ ಎಸ್.ಎ.ರಾಮದಾಸ್ ಅವರಿಂದ ಗುಂಡೂರಾವ್‍ನಗರದಲ್ಲಿ ಸ್ವಚ್ಛತಾ ಕಾರ್ಯಕ್ರಮ

ಮೈಸೂರು: ಕೃಷ್ಣ ರಾಜ ಕ್ಷೇತ್ರಾದ್ಯಂತ ಸ್ವಚ್ಛತಾ ಅಭಿಯಾನ ಕೈಗೊಂಡಿರುವ ಶಾಸಕ ಎಸ್.ಎ.ರಾಮ ದಾಸ್ ಭಾನುವಾರ ತಮ್ಮ ತಂಡದೊಂ ದಿಗೆ ಗುಂಡೂರಾವ್‍ನಗರದ ಗವಿಮಠದ ಎದುರಿನ ಭಾಗದಲ್ಲಿ ಸ್ವಚ್ಛತಾ ಕಾರ್ಯ ಕ್ರಮ ಕೈಗೊಂಡರು. 55ನೇ ವಾರ್ಡ್ ವ್ಯಾಪ್ತಿಯ ಮೇದರ ಕೇರಿ ಭಾಗದಲ್ಲಿ ಸದ್ಭಾವನಾ ದಿನದ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಈ ವ್ಯಾಪ್ತಿ ಯಲ್ಲಿ ಕಾರ್ಯ ನಿರ್ವಹಿಸಬೇಕಾದ 39 ಮಂದಿ ಪೌರ ಕಾರ್ಮಿಕರ ಪೈಕಿ 9 ಮಂದಿ ಪೌರ ಕಾರ್ಮಿಕರು ಮಾತ್ರ ಹಾಜರಿದ್ದು ಕೆಲಸ ನಿರ್ವಹಿಸುತ್ತಿದ್ದದ್ದು ಹಾಜರಾತಿ ಪುಸ್ತಕ…

ಶಾಸಕ ರಾಮದಾಸ್‍ರ ಮುಂದುವರಿದ ಪಾದಯಾತ್ರೆ: ಜನರ ಸಮಸ್ಯೆ ಆಲಿಕೆ, ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ
ಮೈಸೂರು

ಶಾಸಕ ರಾಮದಾಸ್‍ರ ಮುಂದುವರಿದ ಪಾದಯಾತ್ರೆ: ಜನರ ಸಮಸ್ಯೆ ಆಲಿಕೆ, ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ

ಮೈಸೂರು:  ಶಾಸಕ ಎಸ್.ಎ.ರಾಮದಾಸ್ ಅವರು ಭಾನುವಾರ ತಮ್ಮ ಕ್ಷೇತ್ರ ವ್ಯಾಪ್ತಿಯ 31ನೇ ವಾರ್ಡ್ (ಹಳೇ ವಾರ್ಡ್ ಸಂಖ್ಯೆ 9) ನೆಲ್ಲೂರು ಶೆಡ್ಡು ಕಾಲೋನಿ, ಅಂಬೇಡ್ಕರ್ ಕಾಲೋನಿಗಳಲ್ಲಿ ಪಾದಯಾತ್ರೆ ಕೈಗೊಂಡು ಜನರಿಂದ ಅಹವಾಲು ಆಲಿಸಿದರು. ನೆಲ್ಲೂರು ಶೆಡ್ಡು ಕಾಲೋನಿಯಿಂದ ಪಾದಯಾತ್ರೆ ಆರಂಭಿಸಿದ ವೇಳೆ ಅಲ್ಲಿ ಮನೆಗಳನ್ನು ಕಟ್ಟಿಸಿಕೊಡುವುದಾಗಿ ಇದ್ದ ಮನೆಗಳನ್ನು ಒಡೆದು ಹಾಕಿದ್ದು, ಇದುವರೆಗೂ ಮನೆಗಳನ್ನು ನಿರ್ಮಿಸಿಕೊಡದಿರುವ ಬಗ್ಗೆ ದೂರು ಆಲಿಸಿದ ಶಾಸಕರು ಈ ಸಂಬಂಧ ಸ್ಮಂ ಬೋರ್ಡ್ ವಿರುದ್ಧ ಎಸಿಬಿಗೆ ದೂರು ನೀಡಲು ನಿರ್ಧರಿಸಿದರು. ತಾವು ಸಚಿವರಾಗಿದ್ದ…

ತ್ಯಾಜ್ಯದಿಂದ ಶೀಘ್ರದಲ್ಲೇ ವಿದ್ಯುತ್ ತಯಾರಿಕಾ ಘಟಕ ಸ್ಥಾಪನೆ: ಶಾಸಕ ಎಸ್.ಎ.ರಾಮದಾಸ್
ಮೈಸೂರು

ತ್ಯಾಜ್ಯದಿಂದ ಶೀಘ್ರದಲ್ಲೇ ವಿದ್ಯುತ್ ತಯಾರಿಕಾ ಘಟಕ ಸ್ಥಾಪನೆ: ಶಾಸಕ ಎಸ್.ಎ.ರಾಮದಾಸ್

ಮೈಸೂರು:  ಮೈಸೂರಿನ ವಿದ್ಯಾರಣ್ಯಪುರಂ ಮತ್ತು ಸುತ್ತಮುತ್ತಲಿನ ನಾಗರಿಕರ ಭಾರೀ ವಿರೋಧಕ್ಕೆ ಕಾರಣವಾಗಿದ್ದ ಸುಯೆಜ್‍ಫಾರಂ ತ್ಯಾಜ್ಯ ಘಟಕದಿಂದ ಹೊರಸೂಸುವ ದುರ್ವಾಸನೆಯನ್ನು ತಡೆಗಟ್ಟಲು ಶಾಸಕ ಎಸ್.ಎ.ರಾಮದಾಸ್ ಅವರು ಮುಂದಾಗಿದ್ದು, ಸುಯೆಜ್ ಫಾರಂ ಆವರಣದಲ್ಲಿಯೇ ಹಳೇ ಕಸದಿಂದ ವಿದ್ಯುತ್ ಉತ್ಪಾದಿಸುವ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಘನ ತ್ಯಾಜ್ಯವನ್ನು ಸಂಸ್ಕರಿಸುವ ಹೊಸ ಕಾರ್ಯಕ್ಕೆ ಶಾಸಕ ಎಸ್.ಎ.ರಾಮದಾಸ್ ಭಾನುವಾರ ಬೆಳಿಗ್ಗೆ ಮೈಸೂರಿನ ಸಿವೇಜ್ ಫಾರಂ ಆವರಣದಲ್ಲಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಿವೇಜ್ ಫಾರಂನಲ್ಲಿ ಸಂಗ್ರಹವಾಗುವ ಘನ…

ದ್ವಿಚಕ್ರ ವಾಹನ ಸವಾರರಿಗೆ ಬ್ರೇಕ್ ಹಾಕಿ, ವಿದ್ಯುತ್ ಸರಬರಾಜು ಸಮರ್ಪಕಗೊಳಿಸಿ: ಶಾಸಕ ರಾಮದಾಸರಲ್ಲಿ ಸಾರ್ವಜನಿಕರ ಮನವಿ
ಮೈಸೂರು

ದ್ವಿಚಕ್ರ ವಾಹನ ಸವಾರರಿಗೆ ಬ್ರೇಕ್ ಹಾಕಿ, ವಿದ್ಯುತ್ ಸರಬರಾಜು ಸಮರ್ಪಕಗೊಳಿಸಿ: ಶಾಸಕ ರಾಮದಾಸರಲ್ಲಿ ಸಾರ್ವಜನಿಕರ ಮನವಿ

ಮೈಸೂರು: ಮೈಸೂರು ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರು ಶನಿವಾರ ಕೆ.ಆರ್.ವನಂ, ಕೃಷ್ಣಮೂರ್ತಿಪುರಂ ಮತ್ತು ಅಶೋಕಪುರಂನಲ್ಲಿ ಪಾದಯಾತ್ರೆ ನಡೆಸಿ ಸ್ಥಳೀಯರಿಂದ ಆಹವಾಲು ಸ್ವೀಕರಿಸಿದರು. ಜೊತೆಗೆ ಅಧಿಕಾರಿಗಳಿಗೆ ಜನರ ಸಮಸ್ಯೆಗಳನ್ನು ಪರಿಹರಿಸುವಂತೆ ಸೂಚಿಸಿದರು. ನಗರ ಪಾಲಿಕೆಯ 56ನೇ ವಾರ್ಡ್(ಹಳೆಯ ವಾರ್ಡ್ ಸಂಖ್ಯೆ 7) ವ್ಯಾಪ್ತಿಯ ಬಡಾವಣೆಗಳಲ್ಲಿ ಪಾಲಿಕೆ ಹಾಗೂ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಇಂದು ಪಾದಯಾತ್ರೆ ಹಮ್ಮಿಕೊಂಡಿದ್ದ ರಾಮದಾಸ್, ಕೃಷ್ಣಮೂರ್ತಿಪುರಂನಲ್ಲಿರುವ ಅರಳೀಮರ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಸಾರ್ವಜನಿಕರ ಸಮಸ್ಯೆ ಆಲಿಸಿದರು. ಪಾದಯಾತ್ರೆ ವೇಳೆ ಸ್ಥಳೀಯರು ಕೃಷ್ಣಮೂರ್ತಿಪುರಂನಲ್ಲಿ ದ್ವಿಚಕ್ರ ವಾಹನದಲ್ಲಿ…

ಟಿ.ಕೆ.ಲೇಔಟ್, ಶಾರದಾದೇವಿ ನಗರದಲ್ಲಿ ಶಾಸಕ ರಾಮ್‍ದಾಸ್ ಪಾದಯಾತ್ರೆ
ಮೈಸೂರು

ಟಿ.ಕೆ.ಲೇಔಟ್, ಶಾರದಾದೇವಿ ನಗರದಲ್ಲಿ ಶಾಸಕ ರಾಮ್‍ದಾಸ್ ಪಾದಯಾತ್ರೆ

ಮಳೆ ನೀರು ಚರಂಡಿ ಮೇಲೆ ನಿರ್ಮಿಸಿರುವ ಅನಧಿಕೃತ ಮನೆಗಳ ತೆರವಿಗೆ ಸೂಚನೆ ಮೈಸೂರು: ಮೈಸೂರಿನ ಟಿ.ಕೆ.ಲೇಔಟ್‍ನಲ್ಲಿ ಮಳೆ ನೀರು ಚರಂಡಿ ಮೇಲೆ ಅನಧಿಕೃತವಾಗಿ ನಿರ್ಮಿಸಿರುವ ಮನೆಗಳು ಹಾಗೂ ಮೀನಿನ ಕಬಾಬ್ ಅಂಗಡಿಯನ್ನು ತಕ್ಷಣ ತೆರವುಗೊಳಿಸಬೇಕೆಂದು ಕೆ.ಆರ್ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅಧಿಕಾರಿಗಳಿಗೆ ಸೂಚಿಸಿದರು. ಅವರು ಇಂದು ಬೆಳಿಗ್ಗೆ ಮೈಸೂರಿನ ಹಿಂದಿನ 23ನೇ ವಾರ್ಡ್(ಹಾಲಿ 43ನೇ ವಾರ್ಡ್)ನಲ್ಲಿ ಪಾದಯಾತ್ರೆ ನಡೆಸಿದ ವೇಳೆ ಟಿ.ಕೆ.ಲೇಔಟ್‍ನ ಮಳೆ ನೀರು ಚರಂಡಿಯನ್ನು ಮುಚ್ಚಿಹಾಕಿ ಅನಧಿಕೃತವಾಗಿ ಮನೆಗಳನ್ನು ನಿರ್ಮಿಸಿರುವುದು ಕಂಡು ಬಂತು. ಅಲ್ಲದೆ, ಶಾಸಕರು…

ಶ್ರೀ ವಿದ್ಯಾಹಂಸ ಭಾರತೀ ಸ್ವಾಮೀಜಿ ಮೈಸೂರು ನಗರ ಪುರ ಪ್ರವೇಶ
ಮೈಸೂರು

ಶ್ರೀ ವಿದ್ಯಾಹಂಸ ಭಾರತೀ ಸ್ವಾಮೀಜಿ ಮೈಸೂರು ನಗರ ಪುರ ಪ್ರವೇಶ

ಮೈಸೂರು:  ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ತ್ರಿಧಾಮ ಕ್ಷೇತ್ರ ಶ್ರೀ ಮಹಾಕಾಳಿ ಚಕ್ರೇಶ್ವರಿ ಪೀಠದ ಶ್ರೀ ವಿದ್ಯಾಹಂಸ ಭಾರತೀ ಸ್ವಾಮೀಜಿ ಅವರು ಬುಧವಾರ ಸಂಜೆ ಮೈಸೂರು ನಗರ ಪುರ ಪ್ರವೇಶ ಮಾಡಿದರು. ಆ.1ರಿಂದ ನ.24ರವರೆಗೆ ಸುಮಾರು 65 ದಿನ ಗಳ ಕಾಲ ನಡೆಯುವ ಚಾತುರ್ಮಾಸ್ಯದಲ್ಲಿ ಭಾಗ ವಹಿಸಲು ಬುಧವಾರ ಸಂಜೆ ಮೈಸೂರಿಗೆ ಆಗಮಿಸಿದ ಶ್ರೀ ವಿದ್ಯಾಹಂಸ ಭಾರತೀ ಸ್ವಾಮೀಜಿ ಅವರನ್ನು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ನೇತೃತ್ವದಲ್ಲಿ ಇತರೆ ವಿಪ್ರ ಮುಖಂಡರು…

ಉದ್ದೇಶಿತ ಕೆರೆಗಳಿಗೆ ನೀರು ಹರಿಸಲು ಕ್ರಮ
ಚಾಮರಾಜನಗರ

ಉದ್ದೇಶಿತ ಕೆರೆಗಳಿಗೆ ನೀರು ಹರಿಸಲು ಕ್ರಮ

ಗುಂಡ್ಲುಪೇಟೆ:  ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದ್ದು, ಹಂತಹಂತವಾಗಿ ಉದ್ದೇಶಿತ ಎಲ್ಲಾ ಕೆರೆ ಗಳಿಗೂ ಕಬಿನಿ ನದಿ ಮೂಲದಿಂದ ನೀರು ಹರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಶಾಸಕ ಸಿ.ಎಸ್.ನಿರಂಜನ ಕುಮಾರ್ ಹೇಳಿದರು. ಪಟ್ಟಣದ ಸಿ.ಎಂ.ಎಸ್.ಕಲಾಮಂದಿರ ದಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕ ರಸಿ ಮಾತನಾಡಿ, ಈಗಾಗಲೇ ಬೆಳಚಲವಾಡಿ ಕೆರೆಗೆ ನೀರು ಹರಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕಮರಹಳ್ಳಿ ಸೇರಿದಂತೆ ಹಂತಹಂತವಾಗಿ ಉದ್ದೇಶಿತ ಎಲ್ಲಾ ಕೆರೆಗಳಿಗೂ ಕಬಿನಿ ನದಿ ನೀರು ಹರಿಸಲು ಕ್ರಮಕೈಗೊಳ್ಳಲಾಗಿದೆ ಎಂದರು. ಅಭಿವೃದ್ಧಿ ಕಾರ್ಯಗಳಿಗೆ…

ಮೈಸೂರು ಕೋರ್ಟ್ ಹಿಂಭಾಗದ ಅಕ್ರಮ  ಮನೆ ತೆರವಿಗೆ ಶಾಸಕ ರಾಮದಾಸ್ ಸೂಚನೆ
ಮೈಸೂರು

ಮೈಸೂರು ಕೋರ್ಟ್ ಹಿಂಭಾಗದ ಅಕ್ರಮ  ಮನೆ ತೆರವಿಗೆ ಶಾಸಕ ರಾಮದಾಸ್ ಸೂಚನೆ

ಮೈಸೂರು: ಮೈಸೂರು ನ್ಯಾಯಾಲಯದ ಹಿಂಭಾಗದ ಸರ್ಕಾರದ ಖರಾಬು ಜಮೀನಿನಲ್ಲಿ ಅಕ್ರಮವಾಗಿ ಮನೆ ನಿರ್ಮಾಣ ಮಾಡಿರುವುದು ಗಮನಕ್ಕೆ ಬಂದಿದ್ದು, ಕೂಡಲೇ ತೆರವುಗೊಳಿಸುವಂತೆ ಶಾಸಕ ಎಸ್.ಎ.ರಾಮದಾಸ್ ಅಧಿಕಾರಿಗಳಿಗೆ ಸೂಚಿಸಿದರು. ಸೋಮವಾರ ಬೆಳಿಗ್ಗೆ ವಾರ್ಡ್ ನಂ 48ನೇ ವಾರ್ಡಿನ ಜಯನಗರ ಮತ್ತಿತರೆ ಪ್ರದೇಶಗಳಲ್ಲಿ ಪಾದಯಾತ್ರೆ ನಡೆಸಿ ಸಾರ್ವಜನಿಕರಿಂದ ಸಮಸ್ಯೆ ಆಲಿಸಿದ ಅವರು, ನ್ಯಾಯಾಲಯದ ಹಿಂಭಾಗದಲ್ಲಿ ಸರ್ಕಾರದ ಖರಾಬು ಜಮೀನಿನಲ್ಲಿ ಅಕ್ರಮವಾಗಿ ಮನೆ ನಿರ್ಮಾಣ ಮಾಡಿರುವುದು, ದನಕರುಗಳನ್ನು ಕಟ್ಟಿರುವುದು ಗಮನಕ್ಕೆ ಬಂದಿದೆ. ಕೂಡಲೇ ಸರ್ಕಾರಿ ಜಾಗದಲ್ಲಿ ಯಾವುದೇ ಕಟ್ಟಡವಿದ್ದರೆ ಅದನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ…

72.5 ಲಕ್ಷ ವೆಚ್ಚದ 5 ಕಾಮಗಾರಿಗೆ ಶಾಸಕ ರಾಮದಾಸ್ ಚಾಲನೆ
ಮೈಸೂರು

72.5 ಲಕ್ಷ ವೆಚ್ಚದ 5 ಕಾಮಗಾರಿಗೆ ಶಾಸಕ ರಾಮದಾಸ್ ಚಾಲನೆ

ಮೈಸೂರು:  ಮೈಸೂರಿನ ವಾರ್ಡ್ ನಂ.64ರಲ್ಲಿ ಸುಮಾರು 72.5 ಲಕ್ಷ ರೂ.ವೆಚ್ಚದ 5 ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಸ್.ಎ. ರಾಮದಾಸ್ ಭಾನುವಾರ ಚಾಲನೆ ನೀಡಿದರು. ಈ ವಾರ್ಡಿನಲ್ಲಿ ಪಾದಯಾತ್ರೆ ನಡೆಸಿದ ವೇಳೆ ಸಾರ್ವಜನಿಕರು ತುರ್ತು ಆಗಬೇಕಿದ್ದ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಡಬೇಕೆಂದು ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ವಿವೇಕಾನಂದ ವೃತ್ತದ ಬಸ್ ನಿಲ್ದಾಣದ ಸಮೀಪ 10 ಲಕ್ಷ ರೂ. ವೆಚ್ಚದ ಸಾರ್ವಜನಿಕರ ಶೌಚಾಲಯ ನಿರ್ಮಾಣ, 15 ಲಕ್ಷ ವೆಚ್ಚದಲ್ಲಿ ಶನಿದೇವರ ದೇವ ಸ್ಥಾನದಿಂದ ಮಹಾಲಿಂಗೇಶ್ವರ ದೇವಸ್ಥಾನದ ರಸ್ತೆ ಅಭಿವೃದ್ಧಿ, 27.5 ಲಕ್ಷ…

ಜ್ಯೋತಿಷಿಗಳು ಪುರೋಹಿತರ ಕ್ರಿಕೆಟ್ ಪಂದ್ಯಾವಳಿ: ಬೆಂಗಳೂರಿನ ಸಮರ್ಥ ಕ್ರಿಕೆಟರ್ಸ್ ವಿನ್ನರ್
ಮೈಸೂರು

ಜ್ಯೋತಿಷಿಗಳು ಪುರೋಹಿತರ ಕ್ರಿಕೆಟ್ ಪಂದ್ಯಾವಳಿ: ಬೆಂಗಳೂರಿನ ಸಮರ್ಥ ಕ್ರಿಕೆಟರ್ಸ್ ವಿನ್ನರ್

ಮೈಸೂರು: ಮೈಸೂರಿನ ರೈಲ್ವೆ ಮೈದಾನದಲ್ಲಿ ಜ್ಯೋತಿಷಿಗಳು ಹಾಗೂ ಪುರೋಹಿತರ ವತಿಯಿಂದ ನಡೆದ ರಾಜ್ಯಮಟ್ಟದ ‘ಶ್ರೀ ಮಾಯಕಾರ ಕಪ್’ ಕ್ರಿಕೆಟ್ ಪಂದ್ಯಾವಳಿಯ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಭಾನು ವಾರ ಏರ್ಪಡಿಸಲಾಗಿತ್ತು. ಎರಡು ದಿನಗಳು ನಡೆದ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ವಿಜೇತ ಬೆಂಗಳೂರಿನ ಸಮರ್ಥ ಕ್ರಿಕೆಟರ್ಸ್ ತಂಡಕ್ಕೆ 10,001.ರೂ ನಗದು ಮತ್ತು ಟ್ರೋಫಿ ಹಾಗೂ ರನ್ನರ್‍ಅಪ್ ಮೈಸೂರಿನ ಪಾಠಶಾಲೆ ಸೀನಿಯರ್ಸ್ ತಂಡಕ್ಕೆ 5000.ರೂ ನಗದು ಮತ್ತು ಟ್ರೋಫಿಯನ್ನು ಶಾಸಕ ಎಸ್.ಎ. ರಾಮದಾಸ್ ವಿತರಿಸಿದರು. ನಂತರ ಮಾತನಾಡಿದ ಅವರು, ಕ್ರಿಕೆಟ್ ಕೆಲವೇ…

1 2 3 4