ಶಾಸಕ ಎಸ್.ಎ.ರಾಮದಾಸ್ ಅವರಿಂದ ಗುಂಡೂರಾವ್‍ನಗರದಲ್ಲಿ ಸ್ವಚ್ಛತಾ ಕಾರ್ಯಕ್ರಮ
ಮೈಸೂರು

ಶಾಸಕ ಎಸ್.ಎ.ರಾಮದಾಸ್ ಅವರಿಂದ ಗುಂಡೂರಾವ್‍ನಗರದಲ್ಲಿ ಸ್ವಚ್ಛತಾ ಕಾರ್ಯಕ್ರಮ

September 24, 2018

ಮೈಸೂರು: ಕೃಷ್ಣ ರಾಜ ಕ್ಷೇತ್ರಾದ್ಯಂತ ಸ್ವಚ್ಛತಾ ಅಭಿಯಾನ ಕೈಗೊಂಡಿರುವ ಶಾಸಕ ಎಸ್.ಎ.ರಾಮ ದಾಸ್ ಭಾನುವಾರ ತಮ್ಮ ತಂಡದೊಂ ದಿಗೆ ಗುಂಡೂರಾವ್‍ನಗರದ ಗವಿಮಠದ ಎದುರಿನ ಭಾಗದಲ್ಲಿ ಸ್ವಚ್ಛತಾ ಕಾರ್ಯ ಕ್ರಮ ಕೈಗೊಂಡರು.

55ನೇ ವಾರ್ಡ್ ವ್ಯಾಪ್ತಿಯ ಮೇದರ ಕೇರಿ ಭಾಗದಲ್ಲಿ ಸದ್ಭಾವನಾ ದಿನದ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಈ ವ್ಯಾಪ್ತಿ ಯಲ್ಲಿ ಕಾರ್ಯ ನಿರ್ವಹಿಸಬೇಕಾದ 39 ಮಂದಿ ಪೌರ ಕಾರ್ಮಿಕರ ಪೈಕಿ 9 ಮಂದಿ ಪೌರ ಕಾರ್ಮಿಕರು ಮಾತ್ರ ಹಾಜರಿದ್ದು ಕೆಲಸ ನಿರ್ವಹಿಸುತ್ತಿದ್ದದ್ದು ಹಾಜರಾತಿ ಪುಸ್ತಕ ಪರಿಶೀಲನೆ ವೇಳೆ ಕಂಡು ಬಂತು. ಅಲ್ಲದೆ ಈ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಕಸ ನಿರ್ವಹಣೆ ಮತ್ತು ಸ್ವಚ್ಛತಾ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ದೂರುಗಳು ಅಲ್ಲಿನ ನಿವಾಸಿಗಳಿಂದ ಕೇಳಿ ಬಂದಿತು.

ಈ ಸಂಬಂಧ ಅಂತಹವರ ಮೇಲೆ ಕೂಡಲೇ ಕ್ರಮಕೈಗೊಂಡು, ಮುಂದೆ ಸರಿ ಯಾದ ರೀತಿಯಲ್ಲಿ ಸ್ವಚ್ಛತಾ ಕೆಲಸ ನಿರ್ವ ಹಿಸಿಕೊಂಡು ಹೋಗುವಂತೆ ಶಾಸಕರು, ಸ್ಥಳದಲ್ಲಿಯೇ ಅಧಿಕಾರಿಗಳಿಗೆ ತಾಕೀತು ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಯವರ ಜನ್ಮದಿನದಂದು `ಸದ್ಭಾವನಾ ದಿನಾಚರಣೆ’ ಶೀರ್ಷಿಕೆಯಡಿ ಪ್ರಾರಂಭವಾಗಿ ರುವ ಸ್ವಚ್ಛತಾ ಅಭಿಯಾನ ಕ್ಷೇತ್ರಾದ್ಯಂತ ಸ್ಥಳೀಯ ಸಂಸ್ಥೆಗಳು, ಸ್ಥಳೀಯ ನಿವಾಸಿ ಗಳು, ಶಾಲಾ ಕಾಲೇಜಿನ ವಿದ್ಯಾರ್ಥಿಗಳನ್ನು ಒಳಗೊಂಡು ಜಾಗೃತಿ ಅಭಿಯಾನವಾಗಿ ಮಾರ್ಪಟ್ಟಿರುವುದಾಗಿ ತಿಳಿಸಿದರು. ಕಾರ್ಯ ಕ್ರಮದಲ್ಲಿ ಮುಖಂಡರಾದ ಪುರುಷೋ ತ್ತಮ್, ಮೋಹನ್, ಶಿವಪ್ರಕಾಶ್, ಹರ್ಷ, ಚಂದ್ರು, ಶಿವಪ್ಪ ಇತರರು ಉಪಸ್ಥಿತರಿದ್ದರು.

Translate »