ಮೈಸೂರು: 2022ರೊಳಗಾಗಿ ಪ್ರಧಾನಮಂತ್ರಿಗಳ ಕನಸಿನಂತೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಮೈಸೂರಿನ ಕೆ.ಆರ್.ಕ್ಷೇತ್ರದ ಎಲ್ಲಾ ಅರ್ಹ ಫಲಾನುಭವಿಗಳಿಗೆ ಸ್ವಂತ ಸೂರು ಒದಗಿಸಲಾಗುವುದು ಎಂದು ಶಾಸಕ ಎಸ್.ಎ.ರಾಮದಾಸ್ ಇಂದಿಲ್ಲಿ ಪ್ರಕಟಿಸಿದ್ದಾರೆ. ಸಂಸದರಾಗಿ ಎರಡನೇ ಬಾರಿ ಪ್ರತಾಪ್ ಸಿಂಹ ಅವರನ್ನು ಆಯ್ಕೆ ಮಾಡಿದ ಮತ ದಾರರಿಗೆ ಕೃತಜ್ಞತೆ ಹೇಳುವ ಸಲುವಾಗಿ ಮೈಸೂರಿನ ಬಿ.ಎನ್. ರಸ್ತೆಯಲ್ಲಿರುವ ಹೋಟೆಲ್ ಪ್ರೆಸಿಡೆಂಟ್‍ನಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಭಾರತದ 75ನೇ ಸ್ವಾತಂತ್ರ್ಯ ವರ್ಷ ವಾದ 2022ರ ಆಗಸ್ಟ್ 15ರೊಳಗಾಗಿ ಪ್ರಧಾನಮಂತ್ರಿಗಳ ಆವಾಜ್ ಹಾಗೂ…
ಕೆ.ಆರ್.ಕ್ಷೇತ್ರದಲ್ಲಿ ಪ್ರತಾಪ್‍ಸಿಂಹಗೆ ಅತೀ ಹೆಚ್ಚು ಮತಗಳ ಮುನ್ನಡೆ
May 26, 2019ಮೈಸೂರು: ಮೈಸೂರಿನ ಕೆ.ಆರ್.ಕ್ಷೇತ್ರದಲ್ಲಿ ಪ್ರತಾಪ್‍ಸಿಂಹರಿಗೆ ಅತ್ಯಧಿಕ ಮತಗಳ ಮುನ್ನಡೆ ದೊರೆತಿದೆ ಎಂದು ಶಾಸಕ ಎಸ್.ಎ.ರಾಮದಾಸ್ ಇಂದಿಲ್ಲಿ ತಿಳಿಸಿದ್ದಾರೆ. ಮೈಸೂರಿನ ಬಿ.ಎನ್.ರಸ್ತೆಯಲ್ಲಿರುವ ಪ್ರೆಸಿಡೆಂಟ್ ಹೋಟೆಲಿನಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾ ಡಿದ ಅವರು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 60,000 ಮತಗಳ ಮುನ್ನಡೆ ಸಾಧಿಸಲು ಅವಕಾಶ ನೀಡಿ, ಪ್ರತಾಪ್‍ಸಿಂಹ 2ನೇ ಬಾರಿ ಸಂಸದರಾಗಿ ಆಯ್ಕೆಯಾಗಲು ಕಾರಣಕರ್ತರಾದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು. 2018ರ ವಿಧಾನಸಭೆ ಚುನಾವಣೆಯಲ್ಲಿ 1,46,690 ಮತಗಳು ಚಲಾವಣೆಯಾಗಿತ್ತು. 100 ದಿನಗಳಲ್ಲಿ 1 ಲಕ್ಷ ಮತ ಕ್ಷೇತ್ರವಾಗಿಸುವ…
ಕೆ.ಆರ್.ಕ್ಷೇತ್ರದಲ್ಲಿ ಆರಂಭದಲ್ಲಿ ಉತ್ಸಾಹ ಬಿಸಿಲೇರುತ್ತಿದ್ದಂತೆ ನಿರುತ್ಸಾಹ
April 19, 2019ಮೈಸೂರು: ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಬೆಳಿಗ್ಗೆ ಚುರುಕಾಗಿ ಆರಂಭವಾದ ಮತ ದಾನ ಮಧ್ಯಾಹ್ನದ ವೇಳೆಗೆ ಇಳಿಮುಖ ವಾಯಿತು. ಆದರೆ ಮತ್ತೆ ಸಂಜೆ ಬಿರುಸಾಗಿ ಸಾಗಿತು. ಕ್ಷೇತ್ರದ ಎಲ್ಲಾ 270 ಮತಗಟ್ಟೆಗಳಲ್ಲಿಯೂ ಯಾವುದೇ ಗೊಂದಲವಿಲ್ಲದೆ ಶಾಂತಿಯುತ ಶೇ.60.36 ರಷ್ಟು ಮತದಾನ ನಡೆಯಿತು. ಕೆ.ಆರ್.ಕ್ಷೇತ್ರದಲ್ಲಿ 1,20,146 ಪುರು ಷರು, 1,23,568 ಮಹಿಳೆಯರು ಹಾಗೂ 22 ತೃತೀಯ ಲಿಂಗಿಗಳು ಸೇರಿ ಒಟ್ಟು 2,43, 736 ಮತದಾರರಿದ್ದು, ಇಂದು ಬೆಳಿಗ್ಗೆ ಎಲ್ಲ ಮತಗಟ್ಟೆಗಳಲ್ಲಿಯೂ ನಿಗದಿತ ಸಮಯದಲ್ಲಿ ಮತದಾನ ಆರಂಭವಾಯಿತು. ಆರಂಭದಲ್ಲಿ ಮತ…
ಮತಗಟ್ಟೆ, ಹೆಸರು ಗೊಂದಲ
April 19, 2019ಮೈಸೂರು: ಎಂದಿನಂತೆ ಮತದಾರರ ಪಟ್ಟಿಯಲ್ಲಿ ಹೆಸರು ಮತ್ತು ಮತಗಟ್ಟೆಯ ಗೊಂದಲ ಮೈಸೂರು -ಕೊಡಗು ಲೋಕಸಭಾ ಚುನಾವಣೆಯಲ್ಲೂ ಕಂಡು ಬಂದಿತು. ಕೆ.ಆರ್. ಕ್ಷೇತ್ರದಲ್ಲಿ ಕೆಲವು ಮತದಾರ ಹೆಸರು ಮತದಾರರ ಪಟ್ಟಿಯಲ್ಲಿಲ್ಲದೆ ಪರ ದಾಡುವಂತಾಯಿತು. ಮತದಾನ ಮಾಡಲು ಆಗಮಿಸಿದ್ದ 79ವರ್ಷದ ವೃದ್ಧೆ ಶೀಲಾ ಶಾಂಭವಮೂರ್ತಿ ಅವರ ಹೆಸರು ಪಟ್ಟಿಯಲ್ಲಿರಲಿಲ್ಲ. ಆದರೆ, ಎಲ್ಲಾ ದಾಖಲೆಗಳಿದ್ದರೂ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ ಎಂದು ಮತಗಟ್ಟೆ ಅಧಿಕಾರಿಗಳು ಮತದಾನಕ್ಕೆ ಅವಕಾಶ ನೀಡದೆ ವಾಪಸ್ ಕಳುಹಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಇದೇ ರೀತಿ ಹಲವರು ತಮ್ಮ ಹೆಸರು…
ಕೆ.ಆರ್.ಕ್ಷೇತ್ರದ ನೂತನ ಬಿಜೆಪಿ ಕಾರ್ಪೊರೇಟರ್‍ಗಳಿಗೆ ಸನ್ಮಾನ
September 24, 2018ಮೈಸೂರು: ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮೈಸೂರು ಮಹಾನಗರ ಪಾಲಿಕೆಗೆ ಬಿಜೆಪಿಯಿಂದ ಆಯ್ಕೆಯಾಗಿರುವ ಕಾರ್ಪೊರೇಟರ್‍ಗಳಿಗೆ ಭಾನು ವಾರ ಮೈಸೂರಿನ ಅದಿತ್ರಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಅಭಿನಂದಿಸಲಾಯಿತು. ಮೈಸೂರಿನ ಚಾಮುಂಡಿಪುರಂನ ಖಾಸಗಿ ಹೋಟೆಲ್‍ನ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪಾಲಿಕೆಯ ನೂತನ ಕಾರ್ಪೊರೇಟರ್‍ಗಳಾದ ಎಂ.ಸಿ.ರಮೇಶ್, ಎಂ.ಗೀತಶ್ರೀ, ಕೆ.ಚಂಪಕ, ಶಾರದಮ್ಮ, ಜಿ.ರೂಪ, ಎನ್.ಸೌಮ್ಯ ಉಮೇಶ್‍ಕುಮಾರ್, ಆರ್.ಶಾಂತಮ್ಮ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮೈಕ್ ಚಂದ್ರು, ನೂತನ ಕಾರ್ಪೊರೇಟರ್‍ಗಳಿಗೆ ಅವರ ಮುಂದಿರುವ ಜವಾಬ್ದಾರಿಗಳ ಬಗ್ಗೆ ಮನವರಿಕೆ ಮಾಡಿಕೊಡುವುದು…
ಶಾಸಕ ಎಸ್.ಎ.ರಾಮದಾಸ್ ಅವರಿಂದ ಗುಂಡೂರಾವ್‍ನಗರದಲ್ಲಿ ಸ್ವಚ್ಛತಾ ಕಾರ್ಯಕ್ರಮ
September 24, 2018ಮೈಸೂರು: ಕೃಷ್ಣ ರಾಜ ಕ್ಷೇತ್ರಾದ್ಯಂತ ಸ್ವಚ್ಛತಾ ಅಭಿಯಾನ ಕೈಗೊಂಡಿರುವ ಶಾಸಕ ಎಸ್.ಎ.ರಾಮ ದಾಸ್ ಭಾನುವಾರ ತಮ್ಮ ತಂಡದೊಂ ದಿಗೆ ಗುಂಡೂರಾವ್‍ನಗರದ ಗವಿಮಠದ ಎದುರಿನ ಭಾಗದಲ್ಲಿ ಸ್ವಚ್ಛತಾ ಕಾರ್ಯ ಕ್ರಮ ಕೈಗೊಂಡರು. 55ನೇ ವಾರ್ಡ್ ವ್ಯಾಪ್ತಿಯ ಮೇದರ ಕೇರಿ ಭಾಗದಲ್ಲಿ ಸದ್ಭಾವನಾ ದಿನದ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಈ ವ್ಯಾಪ್ತಿ ಯಲ್ಲಿ ಕಾರ್ಯ ನಿರ್ವಹಿಸಬೇಕಾದ 39 ಮಂದಿ ಪೌರ ಕಾರ್ಮಿಕರ ಪೈಕಿ 9 ಮಂದಿ ಪೌರ ಕಾರ್ಮಿಕರು ಮಾತ್ರ ಹಾಜರಿದ್ದು ಕೆಲಸ ನಿರ್ವಹಿಸುತ್ತಿದ್ದದ್ದು ಹಾಜರಾತಿ ಪುಸ್ತಕ…
ಶಾಸಕ ರಾಮದಾಸ್‍ರ ಮುಂದುವರಿದ ಪಾದಯಾತ್ರೆ: ಜನರ ಸಮಸ್ಯೆ ಆಲಿಕೆ, ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ
August 6, 2018ಮೈಸೂರು: ಶಾಸಕ ಎಸ್.ಎ.ರಾಮದಾಸ್ ಅವರು ಭಾನುವಾರ ತಮ್ಮ ಕ್ಷೇತ್ರ ವ್ಯಾಪ್ತಿಯ 31ನೇ ವಾರ್ಡ್ (ಹಳೇ ವಾರ್ಡ್ ಸಂಖ್ಯೆ 9) ನೆಲ್ಲೂರು ಶೆಡ್ಡು ಕಾಲೋನಿ, ಅಂಬೇಡ್ಕರ್ ಕಾಲೋನಿಗಳಲ್ಲಿ ಪಾದಯಾತ್ರೆ ಕೈಗೊಂಡು ಜನರಿಂದ ಅಹವಾಲು ಆಲಿಸಿದರು. ನೆಲ್ಲೂರು ಶೆಡ್ಡು ಕಾಲೋನಿಯಿಂದ ಪಾದಯಾತ್ರೆ ಆರಂಭಿಸಿದ ವೇಳೆ ಅಲ್ಲಿ ಮನೆಗಳನ್ನು ಕಟ್ಟಿಸಿಕೊಡುವುದಾಗಿ ಇದ್ದ ಮನೆಗಳನ್ನು ಒಡೆದು ಹಾಕಿದ್ದು, ಇದುವರೆಗೂ ಮನೆಗಳನ್ನು ನಿರ್ಮಿಸಿಕೊಡದಿರುವ ಬಗ್ಗೆ ದೂರು ಆಲಿಸಿದ ಶಾಸಕರು ಈ ಸಂಬಂಧ ಸ್ಮಂ ಬೋರ್ಡ್ ವಿರುದ್ಧ ಎಸಿಬಿಗೆ ದೂರು ನೀಡಲು ನಿರ್ಧರಿಸಿದರು. ತಾವು ಸಚಿವರಾಗಿದ್ದ…
ದ್ವಿಚಕ್ರ ವಾಹನ ಸವಾರರಿಗೆ ಬ್ರೇಕ್ ಹಾಕಿ, ವಿದ್ಯುತ್ ಸರಬರಾಜು ಸಮರ್ಪಕಗೊಳಿಸಿ: ಶಾಸಕ ರಾಮದಾಸರಲ್ಲಿ ಸಾರ್ವಜನಿಕರ ಮನವಿ
August 5, 2018ಮೈಸೂರು: ಮೈಸೂರು ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರು ಶನಿವಾರ ಕೆ.ಆರ್.ವನಂ, ಕೃಷ್ಣಮೂರ್ತಿಪುರಂ ಮತ್ತು ಅಶೋಕಪುರಂನಲ್ಲಿ ಪಾದಯಾತ್ರೆ ನಡೆಸಿ ಸ್ಥಳೀಯರಿಂದ ಆಹವಾಲು ಸ್ವೀಕರಿಸಿದರು. ಜೊತೆಗೆ ಅಧಿಕಾರಿಗಳಿಗೆ ಜನರ ಸಮಸ್ಯೆಗಳನ್ನು ಪರಿಹರಿಸುವಂತೆ ಸೂಚಿಸಿದರು. ನಗರ ಪಾಲಿಕೆಯ 56ನೇ ವಾರ್ಡ್(ಹಳೆಯ ವಾರ್ಡ್ ಸಂಖ್ಯೆ 7) ವ್ಯಾಪ್ತಿಯ ಬಡಾವಣೆಗಳಲ್ಲಿ ಪಾಲಿಕೆ ಹಾಗೂ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಇಂದು ಪಾದಯಾತ್ರೆ ಹಮ್ಮಿಕೊಂಡಿದ್ದ ರಾಮದಾಸ್, ಕೃಷ್ಣಮೂರ್ತಿಪುರಂನಲ್ಲಿರುವ ಅರಳೀಮರ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಸಾರ್ವಜನಿಕರ ಸಮಸ್ಯೆ ಆಲಿಸಿದರು. ಪಾದಯಾತ್ರೆ ವೇಳೆ ಸ್ಥಳೀಯರು ಕೃಷ್ಣಮೂರ್ತಿಪುರಂನಲ್ಲಿ ದ್ವಿಚಕ್ರ ವಾಹನದಲ್ಲಿ…
ಇನ್ನು 15 ದಿನದಲ್ಲಿ ಬಾಕಿ ಮನೆಗಳಿಗೆ ಜಸ್ಕೋ ನೀರಿನ ಸಂಪರ್ಕ ಕಲ್ಪಿಸಲು ಶಾಸಕ ರಾಮದಾಸ್ ತಾಕೀತು
August 4, 2018ಮೈಸೂರು: ಮೈಸೂರಿನ ಕೃಷ್ಣರಾಜ ಕ್ಷೇತ್ರದ ಮರುವಿಂಗಡಿತ 55ನೇ ವಾರ್ಡ್‍ನಲ್ಲಿ ಪಾದಯಾತ್ರೆ ನಡೆಸಿ, ಸಮಸ್ಯೆ ಆಲಿಸಿದ ಶಾಸಕ ಎಸ್.ಎ.ರಾಮದಾಸ್ ಅವರು, ಇನ್ನು 15 ದಿನಗಳಲ್ಲಿ ಜಸ್ಕೋ ಬಾಕಿ ಉಳಿಸಿರುವ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸುವುದರೊಂದಿಗೆ, ಪೈಪ್‍ಲೈನ್‍ಗಾಗಿ ಅಗೆದಿರುವ ರಸ್ತೆಗಳಿಗೆ ಡಾಂಬರು ಹಾಕಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ನರ್ಮ್ ಯೋಜನೆಯಡಿ 24×7 ಕುಡಿಯುವ ನೀರು ಸರಬರಾಜು ಕಾಮಗಾರಿ ನಡೆಸಿದ ಜಸ್ಕೋ ಸಂಸ್ಥೆ, ಅನೇಕ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಿಲ್ಲ. ಈ ಬಗ್ಗೆ ಪರಿಶೀಲನೆ ಮಾಡಿ ಎಲ್ಲಾ ಮನೆಗಳಿಗೂ ಸಂಪರ್ಕ ಕಲ್ಪಿಸಬೇಕು. ಅಲ್ಲದೆ…
ಶಾಸಕ ರಾಮದಾಸ್‍ಗೆ ಸರಣಿ ಸಮಸ್ಯೆಗಳ ದರ್ಶನ ಮುಂದುವರೆದ ಪಾದಯಾತ್ರೆ
August 3, 2018ಮೈಸೂರು: ಮೈಸೂರಿನ ವಿದ್ಯಾರಣ್ಯಪುರಂ ಮತ್ತು ವಿಶ್ವೇಶರನಗರ ಪ್ರದೇಶಗಳಲ್ಲಿ ಕೆ.ಆರ್.ಕ್ಷೇತ್ರದ ಶಾಸಕ ರಾಮದಾಸ್ ಅವರು 14 ಇಲಾಖೆ ಅಧಿಕಾರಿಗಳೊಡಗೂಡಿ ಇಂದು ಪಾದಯಾತ್ರೆ ನಡೆಸಿದರು. ಈ ವೇಳೆ ಕೈಗಾರಿಕಾ ಪ್ರದೇಶ ಯಾವುದೇ ಅಭಿವೃದ್ಧಿಯಾಗದೇ ಇರುವುದು ಕಂಡು ಬಂತು. ಈ ಪ್ರದೇಶದ ಬಹುತೇಕ ಎಲ್ಲಾ ರಸ್ತೆಗಳಲ್ಲಿಯೂ ಮಳೆ ನೀರು ಚರಂಡಿಗಳು ಮುಚ್ಚಿ ಹೋಗಿರುವ ಪರಿಣಾಮವಾಗಿ ಮಳೆ ನೀರು ರಸ್ತೆಯಲ್ಲೇ ಹರಿದ ಕಾರಣ ರಸ್ತೆಗಳೆಲ್ಲವೂ ಹಳ್ಳಕೊಳ್ಳಗಳಿಂದ ಕೂಡಿರುವುದನ್ನು ಕಂಡ ಶಾಸಕರು, ಈ ರಸ್ತೆಗಳ ಚರಂಡಿಗಳಲ್ಲಿ ಹೂಳೆತ್ತುವಂತೆಯೂ ಚರಂಡಿಗಳಿಲ್ಲದ ರಸ್ತೆಗಳಲ್ಲಿ ಹೊಸದಾಗಿ ಚರಂಡಿ ನಿರ್ಮಿಸಲು…