ಮೈಸೂರು: ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮೈಸೂರು ಮಹಾನಗರ ಪಾಲಿಕೆಗೆ ಬಿಜೆಪಿಯಿಂದ ಆಯ್ಕೆಯಾಗಿರುವ ಕಾರ್ಪೊರೇಟರ್‍ಗಳಿಗೆ ಭಾನು ವಾರ ಮೈಸೂರಿನ ಅದಿತ್ರಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಅಭಿನಂದಿಸಲಾಯಿತು.
ಮೈಸೂರಿನ ಚಾಮುಂಡಿಪುರಂನ ಖಾಸಗಿ ಹೋಟೆಲ್‍ನ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪಾಲಿಕೆಯ ನೂತನ ಕಾರ್ಪೊರೇಟರ್‍ಗಳಾದ ಎಂ.ಸಿ.ರಮೇಶ್, ಎಂ.ಗೀತಶ್ರೀ, ಕೆ.ಚಂಪಕ, ಶಾರದಮ್ಮ, ಜಿ.ರೂಪ, ಎನ್.ಸೌಮ್ಯ ಉಮೇಶ್‍ಕುಮಾರ್, ಆರ್.ಶಾಂತಮ್ಮ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮೈಕ್ ಚಂದ್ರು, ನೂತನ ಕಾರ್ಪೊರೇಟರ್‍ಗಳಿಗೆ ಅವರ ಮುಂದಿರುವ ಜವಾಬ್ದಾರಿಗಳ ಬಗ್ಗೆ ಮನವರಿಕೆ ಮಾಡಿಕೊಡುವುದು ಈ ಕಾರ್ಯ ಕ್ರಮದ ಉದ್ದೇಶವಾಗಿದ್ದು, ಕರ್ತವ್ಯದ ಕರೆ ಬಂದಾಗ ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿದರೆ ನಿಜಕ್ಕೂ ಜನಪ್ರಿಯತೆ ಗಳಿಸಲು ಸಾಧ್ಯವಿದೆ ಎಂದು ಸಲಹೆ ನೀಡಿದರು. ಟ್ರಸ್ಟ್ ಅಧ್ಯಕ್ಷೆ ಎಸ್.ಸೌಭಾಗ್ಯ ಅಧ್ಯಕ್ಷತೆ ವಹಿಸಿದ್ದರು.
ಇಳೈ ಆಳ್ವಾರ್ ಸ್ವಾಮೀಜಿ, ಕೆ.ಆರ್. ಬ್ಯಾಂಕ್ ಉಪಾಧ್ಯಕ್ಷ ಹೆಚ್.ಎನ್.ಭಾಸ್ಕರ್, ಟ್ರಸ್ಟ್ ಕಾರ್ಯದರ್ಶಿ ಅರವಿಂದ್, ಪದಾಧಿಕಾರಿಗಳಾದ ರಂಜಿತ್‍ಪ್ರಸಾದ್, ದಿಲೀಪ್ ಸಿಂಗ್, ರವಿಕುಮಾರ್ ಇನ್ನಿತರರು ಉಪಸ್ಥಿತರಿದ್ದರು.