ಮಹಾಸಭಾ ಉದ್ಘಾಟನೆ ವಿರೋಧಿಸಲು ಬಂದವರ ಬಂಧನ
ಮೈಸೂರು

ಮಹಾಸಭಾ ಉದ್ಘಾಟನೆ ವಿರೋಧಿಸಲು ಬಂದವರ ಬಂಧನ

September 24, 2018

ಮೈಸೂರು:  ಜಾಗತಿಕ ಲಿಂಗಾಯತ ಮಹಾಸಭಾ ಮೈಸೂರು ಜಿಲ್ಲಾ ಘಟಕದ ಉದ್ಘಾಟನೆ ಯನ್ನು ವಿರೋಧಿಸಿ, ಪ್ರತಿಭಟಿಸಿದ ವೀರಶೈವ ಲಿಂಗಾಯತ ಜಾಗೃತಿ ವೇದಿಕೆ ಸದಸ್ಯರನ್ನು ಪೊಲೀಸರು ವಶಕ್ಕೆ ಪಡೆದು, ಕೆಲ ಗಂಟೆ ಗಳ ನಂತರ ಬಿಡುಗಡೆ ಮಾಡಿದರು.

ಮೈಸೂರಿನ ಹೊಸಮಠದ ಆವರಣ ದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನೆಪದಲ್ಲಿ ಬಂದ ವೀರ ಶೈವ ಲಿಂಗಾಯತ ಜಾಗೃತಿ ವೇದಿಕೆ ಸದಸ್ಯ ರನ್ನು ಗೇಟಿನ ಬಳಿಯೇ ಪೊಲೀಸರು ತಡೆದರು. ನಾವು ಗಲಾಟೆ ಮಾಡಲು ಬಂದಿಲ್ಲ. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಏನೆಲ್ಲಾ ವಿಚಾರಗಳನ್ನು ಮಂಡಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಬಂದಿ ದ್ದೇವೆ.

ನಮ್ಮನ್ನೇಕೆ ತಡೆಯುತ್ತೀರಿ ಎಂದು ಪೊಲೀಸರನ್ನು ಪ್ರಶ್ನಿಸಿದರು. ಆದರೆ ಹಿಂದೊಮ್ಮೆ ಹೊಸಮಠದಲ್ಲೇ ನಡೆದ ಕಾರ್ಯಕ್ರಮದಲ್ಲಿ ಗಲಾಟೆಯಾಗಿದ್ದು ಹಾಗೂ ನಿನ್ನೆಯಷ್ಟೇ ವೀರಶೈವ ಲಿಂಗಾ ಯತ ಜಾಗೃತಿ ವೇದಿಕೆ ಸುದ್ದಿಗೋಷ್ಠಿ ನಡೆಸಿ, ಪ್ರತಿಭಟನೆಯ ಎಚ್ಚರಿಕೆ ನೀಡಿದ್ದರಿಂದ ಇಂದು ಕಟ್ಟೆಚ್ಚರವಹಿಸಿದ್ದ ಪೊಲೀಸರು, ಪ್ರವೇಶಾವಕಾಶವನ್ನು ನಿರಾಕರಿಸಿದರು.
ಈ ಸಂದರ್ಭದಲ್ಲಿ ಜಾಗತಿಕ ಲಿಂಗಾ ಯತ ಮಹಾಸಭಾ ಉದ್ಘಾಟನಾ ಸಮಾ ರಂಭದಲ್ಲಿ ಭಾಗವಹಿಸಿದ್ದವರು ಗೇಟಿನ ಬಳಿಗೆ ಧಾವಿಸಿದ್ದರಿಂದ ಎರಡೂ ಗುಂಪು ಗಳ ನಡುವೆ ವಾಕ್ಸಮರ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ತಿರುಗಬಹುದೆಂದು ಪೊಲೀಸರು, ಗೇಟ್ ಭದ್ರಪಡಿಸಿ, ಎರಡೂ ಗುಂಪುಗಳನ್ನು ಪ್ರತ್ಯೇಕಿಸಿದರು. ಹೊಸ ಮಠದ ಆವರಣದಲ್ಲಿದ್ದವರು ಬಸವಣ್ಣನ ಪರ ಘೋಷಣೆಗಳನ್ನು ಕೂಗಿದರು. ಇನ್ನು ಹೊರಭಾಗದಲ್ಲಿದ್ದವರೂ ‘ವೀರಶೈವ ಲಿಂಗಾಯತ ಒಂದೇ’, ‘ನಮ್ಮ ಐಕ್ಯತೆಗೆ ಧಕ್ಕೆ ತರಬೇಡಿ’ ಇನ್ನಿತರ ಘೋಷಣಾ ಫಲಕ ಪ್ರದರ್ಶಿಸಿ, ಆಕ್ರೋಶ ವ್ಯಕ್ತಪಡಿಸಿ ದರು. ಕಡೆಗೆ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಿದ ಪೊಲೀಸರು, ಕಾರ್ಯಕ್ರಮ ವಿರೋಧಿಸಿ ಪ್ರತಿಭಟಿಸುತ್ತಿದ್ದ ಸುಮಾರು 12 ಮಂದಿ ಯನ್ನು ವಶಕ್ಕೆ ಪಡೆದು, ಸಿಎಆರ್ ಮೈದಾನಕ್ಕೆ ಕರೆದೊಯ್ದು, ಕೆಲ ಗಂಟೆಗಳ ಬಳಿಕ ಬಿಡುಗಡೆ ಮಾಡಿದರು. ಕಾರ್ಯ ಕ್ರಮ ಮುಗಿಯುವವರೆಗೂ ಬಿಗಿ ಬಂದೋ ಬಸ್ತ್ ಮಾಡಿದ್ದರು.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿ ಸಿದ ರಾವಂದೂರು ಮುರುಘಮಠದ ಶ್ರೀ ಮೋಕ್ಷಪತಿ ಸ್ವಾಮೀಜಿ, ವಿರೋಧ ಮಾಡುವವರು ಮಾಡಲಿ. ಎಲ್ಲರನ್ನೂ ತಿದ್ದಲು ಸಾಧ್ಯವಿಲ್ಲ. ಒಳ್ಳೆಯ ಕೆಲಸಕ್ಕೆ ವಿರೋಧ ಇದ್ದೇ ಇರುತ್ತದೆ. ಅವರು ಸ್ವತಂತ್ರರು ಆದರೆ ಸ್ವೇಚ್ಛಾಚಾರದಿಂದ ವರ್ತಿಸಬಾರದು. ನಮ್ಮದು ಜಾತಿರಹಿತ ಲಿಂಗಾಯತ ಧರ್ಮ. ನಾವೆಲ್ಲಾ ಒಂದೇ. ಬಸವಣ್ಣನ ಆಶಯ ಒಪ್ಪಿ ಬರುವ ಎಲ್ಲ ರನ್ನೂ ಒಗ್ಗೂಡಿಸಿಕೊಂಡು ಮುನ್ನಡೆ ಯುತ್ತೇವೆ. ಸಂಕುಚಿತ ಮನೋ ಭಾವದಿಂದ ಅವರೇ ಹೊರಹೋದರೆ ನಾವೇನು ಮಾಡಲಾಗದು ಎಂದರು.

Translate »