ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಉದ್ಘಾಟನೆ
ಮೈಸೂರು

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಉದ್ಘಾಟನೆ

September 24, 2018

ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆಗೆ ನಿರಂತರ ಹೋರಾಟ
ಮೈಸೂರು: ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ದೊರಕುವವರೆಗೂ ನಿರಂ ತರವಾಗಿ ಸಾಮಾಜಿಕ ಹಾಗೂ ಕಾನೂ ನಾತ್ಮಕ ಹೋರಾಟ ನಡೆಸುತ್ತೇವೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಚಾಮರಾಜನಗರ ಘಟಕದ ಗೌರವಾಧ್ಯಕ್ಷ ರಾದ ಮುಡಿಗುಂಡ ವಿರಕ್ತಮಠದ ಶ್ರೀ ಶ್ರೀಕಂಠಮಹಾಸ್ವಾಮೀಜಿ ಘೋಷಿಸಿದರು.

ಮೈಸೂರಿನ ಹೊಸಮಠ ಆವರಣದಲ್ಲಿ ಭಾನುವಾರ ನಡೆದ ಜಾಗತಿಕ ಲಿಂಗಾ ಯತ ಮಹಾಸಭಾದ ಮೈಸೂರು ಜಿಲ್ಲಾ ಘಟಕ ಉದ್ಘಾಟನೆ ಸಮಾರಂಭದಲ್ಲಿ `ಲಿಂಗಾ ಯತ ಹೋರಾಟ: ಪ್ರಶ್ನೆ-ಪರಿಹಾರ’ ಕೃತಿಯನ್ನು ಬಿಡುಗಡೆ ಮಾಡಿ ಮಾತ ನಾಡಿದ ಅವರು, ನಾವು ಯಾರ ಪರ ಅಥವಾ ವಿರೋಧವಿಲ್ಲ. ಸ್ವಾತಂತ್ರ್ಯ ಪೂರ್ವ ದಿಂದಲೂ ಬ್ರಾಹ್ಮಣರನ್ನು ಹೊರತು ಪಡಿಸಿ ಉಳಿದವರ ಮೇಲೆ ಶೋಷಣೆ ಯಾಗುತ್ತಿದೆ. ಯಾವ ರಾಜರು ರಾಜ್ಯ ಆಳಿದರೂ, ಬ್ರಾಹ್ಮಣರೇ ಪ್ರಮುಖ ಸ್ಥಾನ ದಲ್ಲಿರುತ್ತಿದ್ದರು. ಇಂದಿಗೂ ಚಾತು ರ್ವರ್ಣ ಪ್ರತಿಪಾದನೆ ಉಳಿಸಿಕೊಂಡಿರುವು ವರನ್ನು ಒಪ್ಪಲು ಸಾಧ್ಯವಿಲ್ಲ. ಇಂದು ಪ್ರಜಾಪ್ರಭುತ್ವ ವ್ಯವಸ್ಥೆಯಿದೆ. ಎಲ್ಲವೂ ಸಂವಿಧಾನಬದ್ಧವಾಗಿಯೇ ನಡೆಯಬೇಕು. ಈ ಹಿನ್ನೆಲೆಯಲ್ಲಿ ಲಿಂಗಾಯತ ಧರ್ಮ ವನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಮಾನ್ಯತೆ ಕೇಳುತ್ತಿದ್ದೇವೆ. ಇಂದಲ್ಲ ನಾಳೆ ಮಾನ್ಯತೆ ಸಿಕ್ಕೇ ಸಿಗುತ್ತದೆ. ಅದಕ್ಕಾಗಿ ನಾವೆಲ್ಲಾ ಕಟಿಬದ್ಧ ರಾಗಿ ಹೋರಾಟ ನಡೆಸುತ್ತೇವೆಂದು ಹೇಳಿದರು.

ಸಪ್ತ ಶೈವಗಳಲ್ಲಿ ಒಂದು: ವೀರಶೈವ ಎಂಬುದು ಸಪ್ತ ಶೈವಗಳಲ್ಲಿ ಒಂದಷ್ಟೆ. ಅದು ಧರ್ಮವಾಗಲಾರದು. ಧರ್ಮದ ಹುಟ್ಟು, ಧರ್ಮಗುರು, ಧರ್ಮ ಗ್ರಂಥ, ಕಾಲ ನಿರ್ಣಯದಂತಹ ಯಾವುದೇ ಐತಿ ಹಾಸಿಕ ಮಾಹಿತಿಯಿಲ್ಲ. ಈ ಕಾರಣ ಗಳಿಂದಲೇ ವೀರಶೈವ ಧರ್ಮಕ್ಕೆ ಮಾನ್ಯತೆ ದೊರಕಲಿಲ್ಲ. ಅಷ್ಟಕ್ಕೂ ಪ್ರತ್ಯೇಕ ಧರ್ಮ ಕ್ಕಾಗಿ ಹೋರಾಟ ಆರಂಭಿಸಿದ್ದೇ ಅಖಿಲ ಭಾರತ ವೀರಶೈವ ಮಹಾಸಭಾ. ಆದರೆ ಸೂಕ್ತ ಆಧಾರಗಳಿಲ್ಲದ ಕಾರಣಕ್ಕೆ ಅವರು 2 ಬಾರಿ ಸಲ್ಲಿಸಿದ್ದ ಮನವಿಯೂ ತಿರಸ್ಕøತವಾ ಯಿತು. ನಮ್ಮ ಲಿಂಗಾಯತ ಧರ್ಮಕ್ಕೆ ಇತಿಹಾಸವಿದೆ. ಬಸವಣ್ಣ ನಮ್ಮ ಧರ್ಮ ಗುರುವಾಗಿದ್ದಾನೆ. ವಚನ ಸಾಹಿತ್ಯ ಧರ್ಮ ಗ್ರಂಥವಾಗಿದೆ. ಹಾಗಾಗಿ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಗಬೇಕೆಂದು ಹೋರಾಟ ನಡೆಸುತ್ತಿದ್ದೇವೆ. ಇದನ್ನು ಕೆಲವರು ಧರ್ಮ ಒಡೆಯುವ ಕೆಲಸ ಎಂದು ಆಪಾದಿಸುತ್ತಾರೆ. ವೀರಶೈವ ಎಂಬುದು ಧರ್ಮವೇ ಅಲ್ಲ ಅಂದ ಮೇಲೆ ಅದನ್ನು ಒಡೆಯುವ ಮಾತೆಲ್ಲಿ. ನಾವು ಯಾರ ವಿರುದ್ಧವಾಗಿಯೂ ನಡೆಯುತ್ತಿಲ್ಲ. ಬಸವಣ್ಣನ ಆಶಯದಲ್ಲಿ ಸಮಾಜ ಕಟ್ಟುವ ಹೋರಾಟಕ್ಕೆ ವಿರೋಧ ಮಾಡುವುದರಿಂದ ಯಾವುದೇ ಪ್ರಯೋ ಜನವಿಲ್ಲ. ಧರ್ಮದ ಮಾನ್ಯತೆ ಸಿಗಬಾರ ದೆಂಬ ಉದ್ದೇಶದಿಂದ ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದರು.

ಸ್ತ್ರೀಪರ ಧರ್ಮ: ಸ್ತ್ರೀ ಸಮಾನತೆಗಾಗಿ ಹುಟ್ಟಿದ ಜಗತ್ತಿನ ಏಕೈಕ ಧರ್ಮ ಎಂದರೆ ಅದು ಲಿಂಗಾಯತ ಧರ್ಮ. ಶೈವ ಬ್ರಾಹ್ಮಣ ರಾಗಿದ್ದ ಬಸವಣ್ಣನವರು ಉಪನಯನ ಸಂದರ್ಭದಲ್ಲಿ ತಮ್ಮ ಸಹೋದರಿಗೆ ಧರ್ಮೋಪದೇಶ ಹಾಗೂ ಉಪನಯನ ಮಾಡುವಂತೆ ತಿಳಿಸುತ್ತಾರೆ. ಅದಕ್ಕೆ ಇಡೀ ವ್ಯವಸ್ಥೆಯೇ ವಿರೋಧ ವ್ಯಕ್ತಪಡಿಸುತ್ತದೆ. ಮಾತೃ ಸ್ವರೂಪಿ ಹೆಣ್ಣಿಗೆ ಗೌರವ ಇಲ್ಲದ ಧರ್ಮದಲ್ಲಿ ಏಕಿರಬೇಕೆಂದು ಉಪನಯನ ಧಿಕ್ಕರಿಸಿ ಹೊರಬಂದು ಸ್ತ್ರೀ ಶೋಷಣೆಯ ವಿರುದ್ಧ ಮೊದಲ ಚಳುವಳಿ ಆರಂಭಿ ಸುತ್ತಾರೆ. ಕೂಡಲಸಂಗಮಕ್ಕೆ ಬಂದು ಅಧ್ಯಯನ ನಡೆಸುತ್ತಾರೆ. ಚೈತನ್ಯ ಸ್ವರೂಪಿ ಯಾಗಿದ್ದ ಬಸವಣ್ಣ, ದೇವರ ವಿಚಾರದಲ್ಲಿ ಗೊಂದಲಕ್ಕೀಡಾಗುತ್ತಾರೆ. ಆದರೆ ದೇವರು ನಿರಾಕಾರನಾಗಿದ್ದು, ಜಗತ್ತಿನ ಸ್ವರೂಪದಲ್ಲಿ ಪ್ರಕಟಗೊಳ್ಳುತ್ತಾನೆ ಎಂಬುದನ್ನು ತಿಳಿದು, ದೇವರ ಹೆಸರಿನಲ್ಲಿ ಸಮಾಜ ಬಹಿಷ್ಕರಿ ಸಿದ್ದ ನೊಂದ ಜನರ ಬಳಿಗೆ ತೆರಳಿ, `ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಶವಯ್ಯ’ `ಸ್ಥಾವರಕ್ಕಳಿ ವುಂಟು ಜಂಗಮಕ್ಕಳಿವಿಲ್ಲ…’ಎಂದು ತಿಳಿಹೇಳುತ್ತಾರೆ. ಜಾತಿ ವ್ಯವಸ್ಥೆಯಿಂದ ಮುಕ್ತರಾಗಿ ಧರ್ಮ ಬಯಸಿ ಬಂದವರಿಗೆ ಅಂಗದ ಮೇಲೆ ಲಿಂಗವನ್ನಿಟ್ಟು ಹೊಸ ಜೀವನ ನೀಡುತ್ತಾರೆ. ಹೀಗಿರುವಾಗ ಇಂದಿಗೂ ಚಾತು ರ್ವರ್ಣ ಉಳಿಸಿಕೊಂಡು ಬರುತ್ತಿರುವ ಧರ್ಮ ದಲ್ಲಿ ಬಸವಣ್ಣನ ಅನುಯಾಯಿಗಳು ಇರ ಬೇಕೆ?. ಬಸವಣ್ಣನ ಆಶಯ ದಂತೆ ಧರ್ಮ ಉಳಿಸಿಕೊಳ್ಳಲು ಮಾನ್ಯತೆ ಕೇಳುತ್ತಿದ್ದೇವೆ ಎಂದು ಶ್ರೀಕಂಠಸ್ವಾಮೀಜಿ ತಿಳಿಸಿದರು.

ರಾಜಕಾರಣಿಗಳಿಗೂ ಎಚ್ಚರಿಕೆ: ಲಿಂಗಾ ಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಸಿಗದಿದ್ದರೆ, ಧರ್ಮದ ರಾಜಕಾರಣಿಗಳ ಭವಿಷ್ಯಕ್ಕೂ ತೊಂದರೆಯಾಗುತ್ತದೆ. ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಿ ಕೊಂಡು, ಸ್ವಾರ್ಥಕ್ಕಾಗಿ ಜನರನ್ನು ಕತ್ತಲಲ್ಲಿ ಇಟ್ಟು, ಸುಳ್ಳು ಹೇಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ವಿಜಯ ನಗರ ಲಿಂಗಾಯತ ಅರಸ ಪ್ರೌಢದೇವ ರಾಯನ ಕಾಲದಲ್ಲೇ ಉತ್ತುಂಗ ಸ್ಥಿತಿಯಲ್ಲಿತ್ತು. ನೂರಾರು ವಿರಕ್ತರಿಗೆ ಆಶ್ರಯ ನೀಡಿದ್ದರು. ನಂತರ ವಿರೂಪಾಕ್ಷರಾಯನ ಕಾಲದಲ್ಲಿ ವಿರಕ್ತಿಗೆ ತೊಂದರೆಯಾಯಿತು. ಬಳಿಕ ಕೃಷ್ಣ ದೇವರಾಯ ಹಂಪಿಯನ್ನು ಅಭಿವೃದ್ಧಿ ಪಡಿಸಿದ. ಆದರೆ ಇತಿಹಾಸದಲ್ಲಿ ಇದರ ಪ್ರಸ್ತಾಪವನ್ನೇ ಮಾಡುವುದಿಲ್ಲ. ಕೊಡಗಿ ನಲ್ಲಿ ಆಳ್ವಿಕೆ ನಡೆಸಿದ ಲಿಂಗಾಯತ ರಾಜರ ಬಗೆಗಿನ ಇತಿಹಾಸವನ್ನೂ ತಿರುಚ ಲಾಗಿದೆ ಎಂದು ತಿಳಿಸಿದರು.’

ಹೊಸಮಠದ ಶ್ರೀ ಚಿದಾನಂದ ಮಹಾ ಸ್ವಾಮೀಜಿ ಜಾಗತಿಕ ಲಿಂಗಾಯತ ಮಹಾ ಸಭಾ ಮೈಸೂರು ಜಿಲ್ಲಾ ಘಟಕವನ್ನು ಉದ್ಘಾಟಿಸಿದರು. `ಲಿಂಗಾಯತ ಹೋರಾಟ: ಹಿಂದೂ ವಿರೋಧಿಯೇ ಮತ್ತು ದೇಶ ವಿರೋಧಿಯೇ’ ಮಾಹಿತಿ ಕೈಪಿಡಿಯನ್ನು ಮೈಸೂರಿನ ನೀಲಕಂಠ ಮಠದ ಶ್ರೀ ಸಿದ್ದಮಲ್ಲ ಸ್ವಾಮೀಜಿ, ಅದರ ಇಂಗ್ಲಿಷ್ ಅವತರಣಿಕೆಯನ್ನು ರಾವಂ ದೂರು ಶ್ರೀ ಮುರುಘಮಠದ ಶ್ರೀ ಮೋಕ್ಷ ಪತಿ ಸ್ವಾಮೀಜಿ ಹಾಗೂ ಮಹಾಸಭಾದ ಗುರುತಿನ ಚೀಟಿ ಯನ್ನು ಚಿಕ್ಕಮಗಳೂರು ಎನ್.ಆರ್. ಪುರ ಬಸವಕೇಂದ್ರದ ಶ್ರೀ ಬಸವಯೋಗಿ ಪ್ರಭು ಸ್ವಾಮೀಜಿ ಬಿಡುಗಡೆ ಮಾಡಿ ಮಾತನಾಡಿದರು. ಗುರುಮಲ್ಲೇ ಶ್ವರ ಮಠದ ಶರಣೆ ಜಯದೇವ ತಾಯಿ, ಬಸವಜ್ಞಾನ ಮಂದಿರದ ಡಾ.ಮಾತೆ ಬಸವಾಂಜಲಿ, ಜಾಗತಿಕ ಲಿಂಗಾಯತ ಮಹಾಸಭಾ ಚಾಮರಾಜನಗರ ಜಿಲ್ಲಾಧ್ಯಕ್ಷ ಗುರುಸ್ವಾಮಿ, ಮೈಸೂರು ಘಟಕದ ಜಿಲ್ಲಾ ಸಂಚಾಲಕ ಮಹದೇವಪ್ಪ, ಎಲ್. ಶಿವಲಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.

Translate »