ಸಾಮಾಜಿಕ ಕಳಕಳಿಯ ‘ಕೋಪ’ ಮಾಧ್ಯಮದಲ್ಲಿ ಪ್ರತಿಧ್ವನಿಸಬೇಕು
ಮೈಸೂರು

ಸಾಮಾಜಿಕ ಕಳಕಳಿಯ ‘ಕೋಪ’ ಮಾಧ್ಯಮದಲ್ಲಿ ಪ್ರತಿಧ್ವನಿಸಬೇಕು

September 24, 2018

ಮೈಸೂರು: ಭ್ರಷ್ಟಾಚಾರ ಹಾಗೂ ದೌರ್ಜನ್ಯ ಸೇರಿದಂತೆ ಸಾಮಾಜಿಕ ಪಿಡುಗುಗಳ ವಿರುದ್ಧ ಸೃಜನಾತ್ಮಕ ಹಾಗೂ ಆರೋಗ್ಯಕರ ನೆಲೆಯೊಂದಿಗೆ ಸಾಮಾಜಿಕ ಕಳಕಳಿಯ `ಕೋಪ’ ಮಾಧ್ಯಮದಲ್ಲಿ ಪ್ರತಿಧ್ವನಿಸುವ ಅಗತ್ಯವಿದೆ ಎಂದು ಹಿರಿಯ ಪತ್ರಕರ್ತ ಕೃಷ್ಣಪ್ರಸಾದ್ ಅಭಿಪ್ರಾಯಪಟ್ಟರು.

ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ದೇಸಿರಂಗ ಸಾಂಸ್ಕøತಿಕ ಸಂಸ್ಥೆ ವತಿಯಿಂದ ಪತ್ರಿಕೋ ದ್ಯಮಿ ರಾಜಶೇಖರ ಕೋಟಿಯವರ ನೆನಪಿನಲ್ಲಿ `ಪತ್ರಿ ಕೋದ್ಯಮದಲ್ಲಿ ಸಾಮಾಜಿಕ ಬದ್ಧತೆ ಮತ್ತು ಕಳಕಳಿ’ ಕುರಿತು ಭಾನುವಾರ ಹಮ್ಮಿಕೊಂಡಿದ್ದ ಅಧ್ಯಯನ ಶಿಬಿರ ಹಾಗೂ ಸಂವಾದ ಕಾರ್ಯಕ್ರಮವನ್ನು ಕಂಸಾಳೆ ಬಾರಿ ಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಇಲ್ಲಿ `ಕೋಪ’ ಎಂದರೆ ಹೊಡಿ-ಬಡಿ, ಹಿಂಸಾ ಚಾರ ನಡೆಸುವುದಲ್ಲ. ಬದಲಾಗಿ ಅಹಿಂಸೆಯ ನೆಲೆ ಯಲ್ಲಿ ಸಮಾಜವನ್ನು ಕಾಡುತ್ತಿರುವ ಸಮಸ್ಯೆಗಳ ನಿವಾ ರಣೆಗೆ ಪೂರಕವಾಗಿ ಸ್ಪಂದಿಸುವ ಆರೋಗ್ಯಕರ ಕೋಪ ಪತ್ರಿಕೋದ್ಯಮದಲ್ಲಿ ಮತ್ತೆ ಮರುಕಳಿಸಬೇಕು. ಪ್ರಸ್ತುತ ಸನ್ನಿವೇಶದಲ್ಲಿ ಪ್ರಧಾನಿಗಳು, ಮುಖ್ಯಮಂತ್ರಿಗಳು, ಶಾಸ ಕರು, ಸಂಸದರ ವರ್ತನೆಗಳ ವಿರುದ್ಧ ಮೂಡಬೇಕಿದ್ದ ಕೋಪ ನಿರೀಕ್ಷಿತ ಪ್ರಮಾಣದಲ್ಲಿ ಪತ್ರಿಕೋದ್ಯಮದಲ್ಲಿ ಪ್ರತಿಬಿಂಬಿಸುತ್ತಿಲ್ಲ. ಸಮಾಜದಲ್ಲಿ ಮನೆ ಮಾಡಿರುವ ಭ್ರಷ್ಟಾಚಾರ, ಜಾತೀಯತೆ, ಕೋಮುವಾದ, ಅನ್ಯಾಯ ಸೇರಿದಂತೆ ಎಲ್ಲಾ ಬಗೆಯ ಅನಾರೋಗ್ಯಕರ ಸಂಗತಿಗಳ ವಿರುದ್ಧ ಸಮರ ಸಾರುವಂತಹ ಕೋಪ ಮಾಧ್ಯಮ ಗಳಲ್ಲಿ ಕ್ಷೀಣಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ನಡೆಯುತ್ತಿರುವ ಹಲವು ಸನ್ನಿವೇಶಗಳ ಬಗ್ಗೆಯೇ ಪತ್ರಿಕೋದ್ಯಮ ಸಾಮಾಜಿಕ ಕಳಕಳಿಯ ಕೋಪ ವ್ಯಕ್ತಪಡಿಸುವ ಅವಕಾಶವಿದೆ. ಇಲ್ಲಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೇ ಇರುವ ಸಂಬಂಧ ಸಂಚಾರ ಪೊಲೀಸರು ವ್ಯಾಪಕ ಕಾರ್ಯಾಚರಣೆ ನಡೆಸುತ್ತಾರೆ. ಇದು ಸ್ವಾಗತಾರ್ಹವಾದರೂ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವ ಕಾರುಗಳ ವಿರುದ್ಧ ಇದೇ ರೀತಿ ಕಠಿಣ ಕ್ರಮ ಕೈಗೊಳ್ಳುವುದು ಕಾಣಸಿಗುವುದೇ ಇಲ್ಲ ಎಂದು ವಿಷಾದಿಸಿದರು.

ಬಡವರು, ರೈತರು ಹಾಗೂ ದಲಿತರು ಹಾಗೂ ಅಲ್ಪಸಂಖ್ಯಾತರ ಮೇಲೆ ಪತ್ರಿಕೋದ್ಯಮ ಹೆಚ್ಚು ಕಳಕಳಿ ವ್ಯಕ್ತಪಡಿಸುವ ಜೊತೆಗೆ ನಗರ ಪ್ರದೇಶದ ಮಧ್ಯಮ ವರ್ಗಗಳ ಸ್ಥಿತಿಗತಿಗಳ ಬಗ್ಗೆಯೂ ಮಾಧ್ಯಮ ಬೆಳಕು ಚೆಲ್ಲಬೇಕಿದೆ. ಮೈಸೂರಿನ ಉದಯಗಿರಿ, ಕಲ್ಯಾಣಗಿರಿ ಯಂತಹ ಪ್ರದೇಶಗಳಲ್ಲಿ ಇಂದಿಗೂ ಅಭಿವೃದ್ಧಿ ಮರೀ ಚಿಕೆಯಾಗಿದೆ. ಸಮರ್ಪಕವಾದ ನಾಗರಿಕ ಮೂಲಭೂತ ಸೌಲಭ್ಯಗಳು ಇಲ್ಲದೆ ಇಲ್ಲಿನ ನಿವಾಸಿಗಳು ಪರಿ ತಪಿಸುವುದನ್ನು ಕಾಣಬಹುದು ಎಂದರು.

ರಿಯಲ್ ಎಸ್ಟೇಟ್ ಏಜೆಂಟ್‍ಗಳು ಇಂದು ರಾಜಕಾರಣಿ ಗಳಾಗಿ ಅಕ್ರಮದಲ್ಲಿ ತೊಡಗಿದ್ದಾರೆ. ಮೈಸೂರು ನಗರಾಭಿ ವೃದ್ಧಿ ಪ್ರಾಧಿಕಾರ (ಮುಡಾ) ರಾಜಕಾರಣಿಗಳ ಕಪಿಮುಷ್ಟಿಗೆ ಸಿಲುಕಿ ಅವ್ಯವಸ್ಥೆಯ ಆಗರವಾಗಿದೆ. ಆದರೆ ಈ ಬಗ್ಗೆ ಕೇವಲ ಒಂದೇ ಒಂದು ತನಿಖಾ ವರದಿಯೂ ಯಾವ ಮಾಧ್ಯಮ ದಲ್ಲೂ ಕಾಣುತ್ತಿಲ್ಲ. ದಸರಾ ಮಹೋತ್ಸವ ಸಮೀಪಿಸುತ್ತಿದ್ದು, ಮೊನ್ನೆಯಷ್ಟೇ ಮೈಸೂರು ಮಹಾನಗರ ಪಾಲಿಕೆ ಆಯು ಕ್ತರು ದಸರಾ ಕಾಮಗಾರಿಗಳಿಗಾಗಿ 27 ಕೋಟಿ ರೂ. ಅನು ದಾನ ಕೋರಿರುವುದಾಗಿ ಹೇಳಿಕೆ ನೀಡಿದ್ದಾರೆ. ಕೇವಲ ರಸ್ತೆ ಗುಂಡಿಗಳಿಗೆ ತೇಪೆ ಹಾಕಲು ಇಷ್ಟು ಹಣ ವೆಚ್ಚವಾಗುತ್ತ ದೆಯೇ? ಎಂಬ ಬಗ್ಗೆ ವರದಿಗಳು ಪ್ರಕಟಗೊಂಡಿಲ್ಲ. ಈ ಬಗ್ಗೆ ಯಾರೂ ಆರ್‍ಟಿಐ ಅಡಿ ಮಾಹಿತಿ ಪಡೆದು ಪ್ರಕಟಿ ಸಲು ಪ್ರಯತ್ನಿಸಿಲ್ಲವೇ? ಎಂದು ಪ್ರಶ್ನಿಸಿದರು. ಮೈಸೂರು ವಿಶ್ವವಿದ್ಯಾನಿಲಯಕ್ಕೆ ಇದೀಗ 6ನೇ ಹಂಗಾಮಿ ಕುಲಪತಿ ನೇಮಕ ಮಾಡಲಾಗಿದೆ. ಒಂದು ಪ್ರತಿಷ್ಠಿತ ವಿಶ್ವ ವಿದ್ಯಾನಿಲಯ ಈ ರೀತಿ ದುಸ್ಥಿತಿಗೆ ಬರಲು ಏನು ಕಾರಣ? ಎಂಬ ಬಗ್ಗೆ ವರದಿಗಳು ಪ್ರತಿಧ್ವನಿ ಸದೇ ಇದ್ದಲ್ಲಿ ಭ್ರಷ್ಟಾಚಾರಕ್ಕೇ ವಿವಿ ಹೆಸರಾಗುವ ಅಪಾಯ ಬಂದೊದಗಬಹುದು ಎಂದು ಆತಂಕ ವ್ಯಕ್ತಪಡಿಸಿದರು. ಹಿರಿಯ ಪತ್ರಕರ್ತರಾದ ಅಂಶಿ ಪ್ರಸನ್ನಕುಮಾರ್, ಮರಿಯಪ್ಪ, ದೇಸಿರಂಗ ಸಂಸ್ಥೆ ಕಾರ್ಯದರ್ಶಿ ಕೃಷ್ಣಜನಮನ ಹಾಜರಿದ್ದರು.

Translate »