ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ರಂಗಭೂಮಿ ಸಹಕಾರಿ
ಮಂಡ್ಯ

ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ರಂಗಭೂಮಿ ಸಹಕಾರಿ

July 31, 2018

ನಾಗಮಂಗಲ:  ಸಾಮಾಜಿಕ ಸಮಸ್ಯೆಗಳನ್ನು ಎತ್ತಿ ಹಿಡಿದು ಅವುಗಳ ಪರಿ ಹಾರಕ್ಕೆ ಉತ್ತರಗಳನ್ನು ನೀಡಲು ರಂಗಭೂಮಿ ಸಹಕಾರಿಯಾಗಲಿದೆ ಎಂದು ಹಿರಿಯ ನಟ ಮತ್ತು ರಂಗಕರ್ಮಿ ದೇವರಾಜ್ ತಿಳಿಸಿದರು.

ಪಟ್ಟಣದ ಕನ್ನಡ ಸಂಘದ ವತಿಯಿಂದ ಆಯೋಜಿಸಿದ್ದ 13ನೇ ರಾಜ್ಯ ಮಟ್ಟದ ನಾಗರಂಗ ನಾಟಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಸಮಾಜ ದಲ್ಲಿ ಜನಸಾಮಾನ್ಯರ ಕಷ್ಟಗಳನ್ನು ಅರಿ ಯುವ ಶಕ್ತಿಯಿಲ್ಲ. ಆದರೆ ಕಾಲಕಾಲಕ್ಕೂ ಎಲ್ಲಾ ವರ್ಗದ ಜನರ ನೋವುಗಳನ್ನು ಎಲ್ಲರಿಗೂ ತಿಳಿಸಬಲ್ಲ ಶಕ್ತಿ ಇರುವುದು ರಂಗಭೂಮಿಗೆ ಮಾತ್ರ. ನಾಟಕಗಳನ್ನು ಕೇವಲ ಮನರಂಜನಗೆ ಸೀಮಿತಗೊಳಿಸುವುದು ಸರಿಯಲ್ಲ. ನಮ್ಮಗಳ ಮತ್ತು ನಮ್ಮೊಳಗಿನ ಸರಿ-ತಪ್ಪುಗಳನ್ನು ತಿದ್ದಿ ಮುನ್ನಡೆಯಲು ರಂಗಭೂಮಿ ಸಹಕಾರಿಯಾಗಿದೆ ಎಂದರು.

ಚಲನಚಿತ್ರಗಳಲ್ಲಿ ಇಂದು ವೈಭವೀಕರಣ ಹೆಚ್ಚಾಗಿದೆ. ಆದರೆ ರಂಗಭೂಮಿಯಲ್ಲಿ ಪಾತ್ರಗಳು ಎಂದಿಗೂ ವಿಜೃಂಭಿಸುವು ದಿಲ್ಲ. ಬದಲಾಗಿ ಅವುಗಳೇ ಪ್ರೇಕ್ಷಕರ ಮನ ದಲ್ಲಿ ಅಭಿನಯದ ಮೂಲಕ ಮಿನುಗುತ್ತಿವೆ. ನಾಟಕಗಳು ಮನುಷ್ಯನ ಆಂತರ್ಯದ ತೊಳಲಾಟವನ್ನು ಕಡಿಮೆ ಮಾಡಿ ಅವ ನನ್ನು ಉತ್ತಮನಾಗಿಸಲು ಸಹಕಾರಿ ಯಾಗಲಿವೆ ಎಂದರು.

ಕನ್ನಡ ಸಂಘದ ಅಧ್ಯಕ್ಷ ಎನ್.ಆರ್. ಪ್ರಶಾಂತ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾರಂಭದ ಬಳಿಕ ಬೆಂಗಳೂರಿನ ರಂಗ ಪಯಣ ತಂಡದ ವತಿಯಿಂದ ಗುಲಾಬಿ ಗ್ಯಾಂಗ್ ನಾಟಕ ಪ್ರದ ರ್ಶನಗೊಂಡಿತು. ಪಟ್ಟಣ ಸೇರಿದಂತೆ ಹಲವೆಡೆಯಿಂದ ನೂರಾರು ಕಲಾಸಕ್ತರು ಆಗಮಿಸಿ, ನಾಟಕ ವೀಕ್ಷಿಸಿದರು.

ಸಮಾರಂಭದಲ್ಲಿ ಮೈಸೂರು ರಂಗಾಯಣದ ನಿರ್ದೇಶಕ ಭಾಗೀರಥಿ ಬಾಯಿ ಕದಂ, ಹಿರಿಯ ರಂಗಕರ್ಮಿ ಪ್ರಸಾದ್ ರಕ್ಷಿದಿ, ಕನ್ನಡ ಸಂಘದ ಸದಸ್ಯರಾದ ನಟರಾಜ್, ನಾಗೇಶ್, ಶಿವಕುಮಾರ್ ಸೇರಿದಂತೆ ಹಲವರಿದ್ದರು.

Translate »