ನಾಗಮಂಗಲ: ಸಾಮಾಜಿಕ ಸಮಸ್ಯೆಗಳನ್ನು ಎತ್ತಿ ಹಿಡಿದು ಅವುಗಳ ಪರಿ ಹಾರಕ್ಕೆ ಉತ್ತರಗಳನ್ನು ನೀಡಲು ರಂಗಭೂಮಿ ಸಹಕಾರಿಯಾಗಲಿದೆ ಎಂದು ಹಿರಿಯ ನಟ ಮತ್ತು ರಂಗಕರ್ಮಿ ದೇವರಾಜ್ ತಿಳಿಸಿದರು. ಪಟ್ಟಣದ ಕನ್ನಡ ಸಂಘದ ವತಿಯಿಂದ ಆಯೋಜಿಸಿದ್ದ 13ನೇ ರಾಜ್ಯ ಮಟ್ಟದ ನಾಗರಂಗ ನಾಟಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಸಮಾಜ ದಲ್ಲಿ ಜನಸಾಮಾನ್ಯರ ಕಷ್ಟಗಳನ್ನು ಅರಿ ಯುವ ಶಕ್ತಿಯಿಲ್ಲ. ಆದರೆ ಕಾಲಕಾಲಕ್ಕೂ ಎಲ್ಲಾ ವರ್ಗದ ಜನರ ನೋವುಗಳನ್ನು ಎಲ್ಲರಿಗೂ ತಿಳಿಸಬಲ್ಲ ಶಕ್ತಿ ಇರುವುದು ರಂಗಭೂಮಿಗೆ ಮಾತ್ರ. ನಾಟಕಗಳನ್ನು ಕೇವಲ ಮನರಂಜನಗೆ…