ನಾಗಮಂಗಲ ಪುರಸಭೆ ಜೆಡಿಎಸ್, ಬೆಳ್ಳೂರು ಪಪಂ ಕಾಂಗ್ರೆಸ್ ವಶ
ಮಂಡ್ಯ

ನಾಗಮಂಗಲ ಪುರಸಭೆ ಜೆಡಿಎಸ್, ಬೆಳ್ಳೂರು ಪಪಂ ಕಾಂಗ್ರೆಸ್ ವಶ

September 4, 2018

ಹಾಲಿ ಶಾಸಕ ಸುರೇಶ್‍ಗೌಡ, ಮಾಜಿ ಶಾಸಕ ಎನ್.ಚಲುವರಾಯಸ್ವಾಮಿಗೆ ಸೋಲು-ಗೆಲುವಿನ ರುಚಿ ತೋರಿದ ಮತದಾರ
ನಾಗಮಂಗಲ: ತೀವ್ರ ಕುತೂಹಲ ಕೆರಳಿಸಿದ್ದ ನಾಗಮಂಗಲ ಪುರಸಭೆ ಮತ್ತು ಬೆಳ್ಳೂರು ಪಟ್ಟಣ ಪಂಚಾಯಿತಿ ಫಲಿತಾಂಶ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಸಿಹಿಕಹಿ ಅನುಭವ ನೀಡಿದೆ.

ನಾಗಮಂಗಲ ಜೆಡಿಎಸ್-ಕಾಂಗ್ರೆಸ್ ಸಮಬಲದ ಹೋರಾಟ ನಡೆಸಿವೆಯಾದರೂ, ಜೆಡಿಎಸ್ 1 ಸ್ಥಾನದಿಂದಷ್ಟೇ ಮುಂದಿದೆ. ಯಾವುದೇ ಪರಿಸ್ಥಿತಿಯಲ್ಲಿ ಅಧಿಕಾರ ಅತಂತ್ರವಾಗುವ ಅವಕಾಶ ವನ್ನು ಮತದಾರ ಮಾಡಿಕೊಟ್ಟಿದ್ದಾನೆ. ಪುರಸಭೆಯಲ್ಲಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎಣಿಕೆ ಕೇಂದ್ರದಲ್ಲಿ ಬೆಳಗ್ಗೆ 8ಕ್ಕೆ ಆರಂಭವಾದ ಮತಗಳ ಏಣಿಕೆ 10 ಗಂಟೆ ವೇಳೆಗೆ ಮುಕ್ತಾಯ ಕಂಡಿತು. ನಾಗಮಂಗಲ ಪುರಸಭೆಯ 23 ವಾರ್ಡ್‍ಗಳಲ್ಲಿ 12ರಲ್ಲಿ ಜೆಡಿಎಸ್ ಮತ್ತು 11 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿದ್ದಾರೆ.

ಬೆಳ್ಳೂರು ಪಪಂ 13 ವಾರ್ಡ್‍ಗಳಲ್ಲಿ ಕಾಂಗ್ರೆಸ್ 7, ಜೆಡಿಎಸ್ 4 ಮತ್ತು ಪಕ್ಷೇತರ ಅಭ್ಯರ್ಥಿಗಳು 2 ಸ್ಥಾನ ಗೆಲ್ಲುವ ಮೂಲಕ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಗಳಿಸಿದ್ದು, ನಾಗಮಂಗಲ ಹಾಗೂ ಬೆಳ್ಳೂರು ಪಪಂಗಳ ಚುನಾವಣಾ ಫಲಿತಾಂಶ ಈ ಕೆಳಕಂಡಂತಿದೆ.

ಬೆಳ್ಳೂರು ಪಪಂ: ವಾರ್ಡ್ 1: ಪಕ್ಷೇತರ ಅಭ್ಯರ್ಥಿ ರಾಮಲಿಂಗಯ್ಯ 302, ಜೆಡಿಎಸ್‍ನ ಜಟಂಗಿನಾಯಕ 257, ವಾರ್ಡ್ 2: ಕಾಂಗ್ರೆಸ್‍ನ ನಿತಿನ್.ಬಿ.ಎಸ್ 462, ಜೆಡಿಎಸ್‍ನ ಮೂರ್ತಿ.ಬಿ.ಎನ್ 155, ವಾರ್ಡ್ 3: ಕಾಂಗ್ರೆಸ್‍ನ ರೂಹಿ ಜೀನತ್ 312, ಪಕ್ಷೇತರ ಅಭ್ಯರ್ಥಿ ಜ್ಯೋತಿ.ಬಿ.ಪಿ 193, ವಾರ್ಡ್ 4: ಜೆಡಿಎಸ್‍ನ ಶಾಹಿನ್ತಾಜ್ 425, ಕಾಂಗ್ರೆಸ್‍ನ ಜೌಹರಿಬಾನು 382, ವಾರ್ಡ್ 5: ಕಾಂಗ್ರೆಸ್‍ನ ಜೈಪಾಲ 475, ಪಕ್ಷೇತರ ಅಭ್ಯರ್ಥಿ ಕೃಷ್ಣಮೂರ್ತಿ ಉ||ದಾಸಪ್ಪ 330, ವಾರ್ಡ್ 6: ಕಾಂಗ್ರೆಸ್‍ನ ಮಹಮದ್ ಯಾಸಿನ್ 365, ಜೆಡಿಎಸ್‍ನ ಮಹಮದ್ ಅಸಗರ್ 266, ವಾರ್ಡ್ 7: ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಮ್ಮ.ಜಿ 174 ಜೆಡಿಎಸ್‍ನ ಸ್ವಾತಿ.ಬಿ.ಎಸ್ 98, ವಾರ್ಡ್ 8: ಕಾಂಗ್ರೆಸ್‍ನ ಆಕರ್ಷ.ಎನ್ 342, ಬಿಜೆಪಿಯ ಶಿವಕುಮಾರ್ 10, ವಾರ್ಡ್ 9: ಜೆಡಿಎಸ್ ಅಭ್ಯರ್ಥಿ ನಾಗರಾಜು 352, ಕಾಂಗ್ರೆಸ್‍ನ ರಾಜಣ್ಣ 311, ವಾರ್ಡ್ 10: ಜೆಡಿಎಸ್‍ನ ಶಾಂತಮ್ಮ 124, ಕಾಂಗ್ರೆಸ್‍ನ ಯಶೋಧಮ್ಮ 87, ವಾರ್ಡ್ 11: ಜೆಡಿಎಸ್‍ನ ಸವಿತ ಕುಮಾರ್ 320, ಬಿಜೆಪಿಯ ರಕ್ಷಿತ.ಬಿ.ಎಸ್ 232, ವಾರ್ಡ್ 12: ಪಕ್ಷೇತರ ಅಭ್ಯರ್ಥಿ ಜೆ.ಕೆ.ಮಂಜೇಗೌಡ 138, ಜೆಡಿಎಸ್‍ನ ಹೇಮರಾಜ್ 89, ವಾರ್ಡ್ 13: ಕಾಂಗ್ರೆಸ್‍ನ ಹೊಂಗೇರೆಗೌಡ 263, ಜೆಡಿಎಸ್ ಶಿವರಾಮು 230 ಮತಗಳನ್ನು ಪಡೆದಿದ್ದಾರೆ.

ನಾಗಮಂಗಲ ಪುರಸಭೆ ಫಲಿತಾಂಶ:
ವಾರ್ಡ್ 1: ಜೆಡಿಎಸ್‍ನ ವರದರಾಜು 492, ಕಾಂಗ್ರೆಸ್‍ನ ನರಸಿಂಹ 381, ವಾರ್ಡ್ 2: ಜೆಡಿಎಸ್‍ನ ರತ್ನಮ್ಮ 341, ಕಾಂಗ್ರೆÉಸ್‍ನ ಪಿ.ಪುಷ್ಪಲತಾ 112, ವಾರ್ಡ್ 3: ಕಾಂಗ್ರೆಸ್‍ನ ಇಂದಿರಾ 272, ಜೆಡಿಎಸ್‍ನ ಸಿ.ಲಕ್ಷ್ಮೀ ರಂಗಪ್ಪ 212, ವಾರ್ಡ್ 4: ಜೆಡಿಎಸ್‍ನ ಭಾರತಿ.ಕೆ.ಎನ್ 317, ಕಾಂಗ್ರೆಸ್‍ನ ಆಶಾ.ಜೆ 312, ವಾರ್ಡ್ 5: ಕಾಂಗ್ರೆಸ್‍ನ ರಮೇಶ 403, ಜೆಡಿಎಸ್‍ನ ಎನ್.ಕೆ.ಗಿರೀಶ್ 252, ವಾರ್ಡ್ 6: ಕಾಂಗ್ರೆಸ್‍ನ ತಿಮ್ಮಪ್ಪ 426, ಜೆಡಿಎಸ್‍ನ ಎನ್.ಬಿ.ರಾಘವೇಂದ್ರ 393, ವಾರ್ಡ್ 7: ಜೆಡಿಎಸ್‍ನ ಎನ್. ಚಂದ್ರಕಲಾ 386, ಕಾಂಗ್ರೆಸ್‍ನ ನೇತ್ರಾವತಿ ಸುರೇಶ್ 211, ವಾರ್ಡ್ 8: ಜೆಡಿಎಸ್‍ನ ವಿಜಯ್‍ಕುಮಾರ್ 585, ಕಾಂಗ್ರೆಸ್‍ನ ಶರತ್ ರಾಮಣ್ಣಗೌಡ, ವಾರ್ಡ್ 9: ಕಾಂಗ್ರೆಸ್‍ನ ಸಯಿದಾ ಸುಮಯ 469, ಜೆಡಿಎಸ್‍ನ ಶೋಭ 226, ವಾರ್ಡ್ 10: ಜೆಡಿಎಸ್‍ನ ಜಾಫರ್ ಷರೀಫ್ 450, ಕಾಂಗ್ರೆಸ್‍ನ ಸುಗ್ಗಿ ಕೆಂಚಪ್ಪ 240, ವಾರ್ಡ್ 11: ಕಾಂಗ್ರೆಸ್‍ನ ರಿಜ್ವಾನ್‍ಪಾಷ 303, ಜೆಡಿಎಸ್‍ನ ಮಹಮದ್ ದಸ್ತಗೀರ್ 221, ವಾರ್ಡ್ 12: ಕಾಂಗ್ರೆಸ್‍ನÀ ಆಲಿ ಅನ್ಸರ್ ಪಾಷ 369, ಜೆಡಿಎಸ್‍ನ ಬರ್ಕತ್ ಉಲ್ಲಾ.ಡಿ.ಕೆ 209, ವಾರ್ಡ್ 13: ಜೆಡಿಎಸ್‍ನ ಆಶಾ.ಎನ್.ಜಿ 363, ಕಾಂಗ್ರೆಸ್‍ನ ಪ್ರಭಾವತಿ.ಬಿ 184 ವಾರ್ಡ್ 14: ಕಾಂಗ್ರೆಸ್‍ನ ಮುಬೀನ್‍ತಾಜ್ 721, ಜೆಡಿಎಸ್‍ನ ಸೀಮಾ 295, ವಾರ್ಡ್ 15: ಕಾಂಗ್ರೆಸ್‍ನ ನಾಜೀಯಾ ಸುಲ್ತಾನ 631, ಜೆಡಿಎಸ್‍ನ ಇಕ್ಬಾಲ್ ಉನ್ನೀಸಾ 483 ವಾರ್ಡ್ 16: ಜೆಡಿಎಸ್‍ನ ರಿಹಾನ 228, ಕಾಂಗ್ರೆಸ್ ತಹಸೀನ್ತಾಜ್ 217, ವಾರ್ಡ್ 17: ಜೆಡಿಎಸ್‍ನ ಶಂಕರಲಿಂಗೇಗೌಡ.ಎಸ್.ಕೆ (ಯೋಗೇಶ್) 568, ಕಾಂಗ್ರೆಸ್‍ನ ಸಾಯಿಕುಮಾರ್.ಎಂ.ಎಸ್(ಅಮಿತ್‍ಗೌಡ) 290, ವಾರ್ಡ್ 18: ಜೆಡಿಎಸ್‍ನ ಮಂಜುನಾಥ.ಪಿ 297, ಕಾಂಗ್ರೆಸ್‍ನ ಕೆ.ಸಂಪತ್‍ಕುಮಾರ್ 237 ವಾರ್ಡ್ 19: ಕಾಂಗ್ರೆಸ್‍ನ ವಸಂತಲಕ್ಷ್ಮೀ ಅಶೋಕ 601, ಜೆಡಿಎಸ್‍ನ ಗೀತಾ ಕಾಂತರಾಜು 237 ವಾರ್ಡ್ 20: ಕಾಂಗ್ರೆಸ್‍ನ ಆರ್.ರೂಪ ಮಂಜುನಾಥ್ 406, ಜೆಡಿಎಸ್‍ನ ಎ.ಎನ್.ಮಂಜುಳಾ ರಮೇಶ 367 ವಾರ್ಡ್ 21: ಜೆಡಿಎಸ್‍ನ ಪ್ರಭಾಕರ (ದಿವಾಕರ) 464, ಕಾಂಗ್ರೆಸ್‍ನ ಚಂದ್ರಕುಮಾರ್.ಎಂ.ಪಿ 357 ವಾರ್ಡ್ 22: ಕಾಂಗ್ರೆಸ್‍ನ ಜ್ಯೋತಿ.ಬಿ.ಎಸ್ 404, ಜೆಡಿಎಸ್‍ನ ರೇಣುಕಾ ಉದಯ್‍ಶಂಕರ್ 368 ವಾರ್ಡ್ 23: ಜೆಡಿಎಸ್‍ನ ಚೆನ್ನಪ್ಪ.ಎಂ.ಸಿ 535, ಕಾಂಗ್ರೆಸ್‍ನ ಕೆ.ಟಿ.ನರಸಿಂಹ ಮೂರ್ತಿ 369 ಮತಗಳನ್ನು ಗಳಿಸಿದ್ದಾರೆ.

ಒಟ್ಟಾರೆ ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ಚುನಾ ವಣೆಯಲ್ಲಿ ಮತದಾರರು ಶಾಸಕ ಸುರೇಶ್‍ಗೌಡ ಮತ್ತು ಮಾಜಿ ಶಾಸಕ ಎನ್. ಚಲುವರಾಯಸ್ವಾಮಿ ಇಬ್ಬರಿಗೂ ಸೋಲು ಗೆಲುವಿನ ರುಚಿ ತೋರಿಸಿದ್ದಾರೆ.

Translate »