ತಿ.ನರಸೀಪುರದಲ್ಲಿ ಕಾಂಗ್ರೆಸ್, ಬಿಜೆಪಿ, ಪಕ್ಷೇತರರ ವಿಜಯೋತ್ಸವ
ಮೈಸೂರು

ತಿ.ನರಸೀಪುರದಲ್ಲಿ ಕಾಂಗ್ರೆಸ್, ಬಿಜೆಪಿ, ಪಕ್ಷೇತರರ ವಿಜಯೋತ್ಸವ

September 4, 2018

ತಿ.ನರಸೀಪುರ: ಪುರಸಭೆಯ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ವಿಜೇತ ಅಭ್ಯರ್ಥಿಗಳು ಪಟಾಕಿ ಸಿಡಿಸಿ, ವಿಜಯೋತ್ಸವ ಆಚರಿಸಿ ಮತದಾರರಿಗೆ ಪಾದಯಾತ್ರೆಯ ಮೂಲಕ ಕೃತಜ್ಞತೆಯನ್ನು ಸಲ್ಲಿಸಿದರು.

ಪಟ್ಟಣದ ಮಾಧವರಾವ್ ರಸ್ತೆಯಲ್ಲಿ 23ನೇ ವಾರ್ಡಿನಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಎಸ್.ಕೆ.ಕಿರಣ ಅವರು ಮುಖಂಡರು ಹಾಗೂ ಬೆಂಬಲಿಗರೊಂದಿಗೆ ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಿದರು.

ಎಸ್.ಕೆ.ಕಿರಣ ಮಾತನಾಡಿ, ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಿ, ನಿವಾಸಿಗಳಿಗೆ ಸಮರ್ಪಕ ಮೂಲಭೂತ ಸೌಲಭ್ಯ ಕಲ್ಪಿಸಿಕೊಡಲು ಆದ್ಯತೆ ನೀಡುತ್ತೇನೆ ಎಂದರು.

ಬಿಜೆಪಿ ಹಿಂ.ವರ್ಗಗಳ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಕೆ.ನಂಜುಂಡಸ್ವಾಮಿ, ಹಿರಿಯ ಮುಖಂಡ ಮಹದೇವಣ್ಣ, ಮುಖಂಡರಾದ ಚೌಹಳ್ಳಿ ಸಿದ್ದರಾಜು, ನೂತನ್, ಪ್ರಮೋದ್, ಸುನೀಲ್, ಡೈರಿ ರಾಜು, ಸಂತೋಷ್, ಮುರಳಿ, ಹೊಟೇಲ್ ನಂಜುಂಡ, ಮನು, ಎನ್.ಪಿ.ನಂಜುಂಡಸ್ವಾಮಿ, ಚನ್ನ, ರಾಚಯ್ಯ, ಟೈಲರ್ ರವಿ, ನಿತಿನ್ ಭಂಡಾರಿ ಹಾಗೂ ಇನ್ನಿತರರು ಹಾಜರಿದ್ದರು.

ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಉಪಾಧ್ಯಕ್ಷ ಎನ್.ಕೆ.ಫರೀದ್ ಮುಖಂಡರಾದ ಮಹೇಶ, ಉಮೇಶ, ವಿಷಕಂಠ, ರಂಗಸ್ವಾಮಿ, ಅಫ್ಜಲ್, ಗೋವಿಂದರಾಜು, ರವಿಕಿರಣ, ಖುದ್ಧೂಷ್, ರಿಯಾಜ್ ಅಹಮ್ಮದ್, ಏಜಾಜ್ ಪಾಷ, ಅಬ್ಜರ್ ಪಾಷ, ರವಿಕುಮಾರ, ಹೆಚ್‍ಎಂಸಿ ಹಾಗೂ ಇನ್ನಿತರರು ಹಾಜರಿದ್ದರು.

Translate »