ಮದ್ದೂರು ಪುರಸಭೆ: ಜೆಡಿಎಸ್ ವಶಕ್ಕೆ
ಮಂಡ್ಯ

ಮದ್ದೂರು ಪುರಸಭೆ: ಜೆಡಿಎಸ್ ವಶಕ್ಕೆ

September 4, 2018

ಮಂಡ್ಯ:  ಮದ್ದೂರು ಪುರಸಭೆ ಯಲ್ಲಿ ಜೆಡಿಎಸ್ ಸರಳ ಬಹುಮತ ದೊಂದಿಗೆ ಅಧಿಕಾರ ಹಿಡಿದಿದೆ. ಪುರ ಸಭೆಯ 23 ಸ್ಥಾನಗಳಲ್ಲಿ ಜೆಡಿಎಸ್ 12, ಕಾಂಗ್ರೆಸ್ 3, ಬಿಜೆಪಿ 1 ಹಾಗೂ ಇತರರು 6 ಸ್ಥಾನಗಳಲ್ಲಿ ಗೆಲವು ಸಾಧಿಸಿದ್ದಾರೆ.

ವಿಜೇತರ ಪಟ್ಟಿ: ವಾರ್ಡ್ 1: ಎಸ್. ಮಹೇಶ್ ಜೆಡಿಎಸ್ 560, ವಾರ್ಡ್ 2: ಶೋಭಾ ಮರಿ ಪಕ್ಷೇತರ 442, ವಾರ್ಡ್ 3: ಬಸವರಾಜ ಜೆಡಿಎಸ್ 402, ವಾರ್ಡ್ 4: ಪ್ರಿಯಾಂಕಾ ಅಪ್ಪುಗೌಡ ಪಕ್ಷೇತರ 368, ವಾರ್ಡ್ 5: ಕೋಕಿಲಾ ಅರುಣ್ ಕಾಂಗ್ರೆಸ್ 613, ವಾರ್ಡ್ 6: ಕೆ. ಪ್ರಮಿಳಾ ಜೆಡಿಎಸ್ 356, ವಾರ್ಡ್ 7: ಸಚಿನ್ ಪಕ್ಷೇತರ 210, ವಾರ್ಡ್ 8: ಜೆಡಿಎಸ್ ಹಾಗೂ ಪಕ್ಷೇತರ ಅಭ್ಯರ್ಥಿಗಳಿಗೆ ಚುನಾ ವಣಾ ಅಧಿಕಾರಿಗಳು ಇಬ್ಬರ ಹೆಸರನ್ನು ಬರೆದು ಒಂದು ಪಟ್ಟಿಯಲ್ಲಿ ಹಾಕಿ ಕಣ್ಣಿಗೆ ಬಟ್ಟೆ ಕಟ್ಟಿ ಎತ್ತುವÀ ಮೂಲಕ ಪಕ್ಷೇತರ ಅಭ್ಯರ್ಥಿ ರತ್ನ ತಿಮ್ಮಯ್ಯ ಲಾಟರಿಯಲ್ಲಿ ಆಯ್ಕೆಯಾದರು. ವಾರ್ಡ್ 9: ಶೋಭಾ ರಾಣಿ ಚಂದ್ರು ಜೆಡಿಎಸ್ 304, ವಾರ್ಡ್ 10: ಕೇಬಲ್ ಸುರೇಶ್ ಜೆಡಿಎಸ್ 863, ವಾರ್ಡ್ 11: ಕಮಲ್ನಾಥ್ ಕಾಂಗ್ರೆಸ್ 284, ವಾರ್ಡ್ 12: ಎಚ್.ವಿ.ಸುಮಿತ್ರಾ ಜೆಡಿಎಸ್ 269, ವಾರ್ಡ್ 13: ಪಿ.ಸಿದ್ದರಾಜು ಪಕ್ಷೇತರ 250, ವಾರ್ಡ್ 14: ಆಯುಷಾ ಜೆಡಿಎಸ್ 639, ವಾರ್ಡ್ 15: ಆರ್.ಪುಷ್ಪ ಮಹೇಶ್ ಜೆಡಿಎಸ್ 231, ವಾರ್ಡ್ 16: ವನಿತಾ ಜೆಡಿಎಸ್ 314, ವಾರ್ಡ್ 17: ಎಂ.ಐ.ಪ್ರವೀಣ್ ಜೆಡಿಎಸ್ 353, ವಾರ್ಡ್ 18: ಎಂಕೆ ಮನೋಜ್ ಕುಮಾರ್ ಪಕ್ಷೇತರ 303, ವಾರ್ಡ್ 19: ಆದಿಲ್ ಆಲಿಖಾನ್ ಜೆಡಿಎಸ್ 396, ವಾರ್ಡ್ 20: ಟಿಆರ್ ಪ್ರಸನ್ನ ಕುಮಾರ್ ಅವಿರೋಧ ಆಯ್ಕೆ, ವಾರ್ಡ್ 21: ಸರ್ವಮಂಗಳ ಜೆಡಿಎಸ್ 673, ವಾರ್ಡ್ 22: ಸಿ.ನಂದೀಶ್ ಕಾಂಗ್ರೆಸ್ 426, ವಾರ್ಡ್ 23: ಲತಾ.ಕೆ ಬಿಜೆಪಿ 560.

ಅದೃಷ್ಟದ ಫಲಿತಾಂಶದಲ್ಲಿ ಗೆದ್ದ ಮದ್ದೂರಿನ ಇಬ್ಬರು ಅದೃಷ್ಟ ಲಕ್ಷ್ಮಿಯರು.!
ಮಂಡ್ಯ:  ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಇಬ್ಬರು ಪಕ್ಷೇತರ ಮಹಿಳೆಯರು ಅದೃಷ್ಟದ ಮೂಲಕ ವಿಜಯಿಗಳಾದರೆ, ಮಾಜಿ ಶಾಸಕ ಎಂ.ಎಸ್.ಸಿದ್ದರಾಜು ಸಂಬಂಧಿ ಯೋರ್ವ ಹ್ಯಾಟ್ರಿಕ್ ಗೆಲುವು ಸಾಧಿಸಿ 3ನೇ ಬಾರಿಗೆ ಪುರಸಭೆ ಪ್ರವೇಶಿಸಿದ ನಿದರ್ಶನ ಮದ್ದೂರು ಪುರಸಭಾ ಚುನಾವಣೆಯಲ್ಲಿ ನಡೆದಿದೆ.

ಪ್ರಿಯಾಂಕಾ ಅಪ್ಪುಗೌಡ

ಲಾಟರಿ ಎತ್ತುವ ಮೂಲಕ 8ನೇ ವಾರ್ಡ್‍ನ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರತ್ನಾ ತಿಮ್ಮಯ್ಯ ಮತ್ತು 4ನೇ ವಾರ್ಡ್‍ನ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಪ್ರಿಯಾಂಕಾ ಅಪ್ಪುಗೌಡ ಘಟಾನುಘಟಿಗಳನ್ನೇ ಸೋಲಿಸಿ ವಿಜಯಿಗಳಾಗಿದ್ದಾರೆ.
ಲಾಟರಿಯಲ್ಲಿ ಗೆಲುವು: ಪಟ್ಟಣದ 8ನೇ ವಾರ್ಡ್‍ನ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರತ್ನಾ ತಿಮ್ಮಯ್ಯ ಅವರು ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಲತಾ ವೆಂಕಟೇಶ್ ಅವರು 286ಮತಗಳನ್ನು ಪಡೆದಿದ್ದರು. ಆದರೆ ಚುನಾವಣೆ ಅಧಿಕಾರಿ ಗಳು ಚುನಾವಣಾ ಆಯೋಗದ ನಿಯಮಗಳಂತೆ ಅಭ್ಯರ್ಥಿ ಗಳ ಸಮ್ಮುಖದಲ್ಲಿ ಡಬ್ಬದಲ್ಲಿ ಚೀಟಿಯನ್ನು ಹಾಕಿ ಎತ್ತುವ ಮೂಲಕ ಪಕ್ಷೇತರ ಅಭ್ಯರ್ಥಿ ರತ್ನ ತಿಮ್ಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಚುನಾ ವಣಾ ಅಧಿಕಾರಿಗಳು ತಿಳಿಸಿದರು.
ಘಟನಾನುಘಟಿಗಳನ್ನೇ ಸೋಲಿಸಿದ ಮಹಿಳೆ: ಈ ಬಾರಿ ಕುತೂಹಲ ಮೂಡಿ ಸಿದ್ದ 4 ವಾರ್ಡನ ಪಕ್ಷೇತರ ಅಭ್ಯರ್ಥಿ ಪ್ರಿಯಾಂಕಾ ಅಪ್ಪುಗೌಡ (368) ಮತ ಗಳನ್ನು ಪಡೆದು ಜಯಶೀಲರಾಗಿದ್ದಾರೆ.

ರತ್ನಾ ತಿಮ್ಮಯ್ಯ

ಮದ್ದೂರು ಇತಿಹಾಸದಲ್ಲಿ ಪುರ ಸಭಾ ಚುನಾವಣೆಯಲ್ಲಿ 50ಲಕ್ಷಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಬೆಟ್ಟಿಂಗ್ ನಡೆದಿತ್ತು ಎನ್ನಲಾಗಿದೆ. ಮಾಜಿ ಪುರಸಭಾ ಅಧ್ಯಕ್ಷ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಅಮರ್‍ಬಾಬು ಮತ್ತು ಜೆಡಿಎಸ್ ಅಭ್ಯರ್ಥಿಯಾಗಿ ಕೃಷ್ಣ ರವರು ತೀವ್ರ ಪೈಪೋಟಿ ನೀಡಿದ್ದರು. ಆದರೆ ಕೊನೆ ಗಳಿಗೆಯಲ್ಲಿ ಕ್ಷೇತ್ರದ ಮತದಾರರು ಪಕ್ಷೇತರ ಅಭ್ಯರ್ಥಿ ಕೈ ಹಿಡಿದಿದ್ದಾರೆ.
ಹ್ಯಾಟ್ರಿಕ್ ಗೆಲುವು: ಮಾಜಿ ಶಾಸಕ ಎಂ.ಎಸ್.ಸಿದ್ದರಾಜು (ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು ) ರವರ ಸಹೋದರನ ಮಗ ಶ್ರೀ ಪ್ರವೀಣ್ ರವರು ಸತತ 3ನೇ ಬಾರಿಗೆ ಪುರಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

Translate »