ತಿ.ನರಸೀಪುರದಲ್ಲಿ ಮೇಲುಗೈ ಸಾಧಿಸಿದ ಕಾಂಗ್ರೆಸ್
ಮೈಸೂರು

ತಿ.ನರಸೀಪುರದಲ್ಲಿ ಮೇಲುಗೈ ಸಾಧಿಸಿದ ಕಾಂಗ್ರೆಸ್

September 4, 2018

6 ಪಕ್ಷೇತರರು, ಬಿಜೆಪಿ 4, ಜೆಡಿಎಸ್ 3ರಲ್ಲಿ ಜಯ
ತಿ.ನರಸೀಪುರ: ಪರಸಭೆಯಾಗಿ ಪರಿವರ್ತನೆಗೊಂಡು ಪ್ರಥಮ ಬಾರಿಗೆ ನಡೆದ ಚೊಚ್ಚಲ ಚುನಾವಣೆಯ ಮತ ಎಣಿಕೆಯ ಕಾರ್ಯ ಇಂದು ನಡೆದು ಕಾಂಗ್ರೆಸ್ 10, ಬಿಜೆಪಿ 4, ಜೆಡಿಎಸ್ 3 ಸ್ಥಾನ ಗಳಿಸಿದ್ದು, 6 ವಾರ್ಡ್‍ಗಳಲ್ಲಿ ಪಕ್ಷೇತರರು ಆಯ್ಕೆಯಾಗಿದ್ದಾರೆ.
ವಾರ್ಡ್ ನಂ.1ರಲ್ಲಿ ಪಕ್ಷೇತರ ಅಭ್ಯರ್ಥಿ ರೂಪಕರಿಯಪ್ಪ (311) ಕಾಂಗ್ರೆಸ್‍ನ ಚೆನ್ನಾಜಮ್ಮ(249) ಅವರನ್ನು ಪರಾಭವ ಗೊಳಿಸಿದ್ದಾರೆ. ವಾರ್ಡ್ ನಂ.2ರಲ್ಲಿ 496 ಮತ ಪಡೆದು ಜೆಡಿಎಸ್‍ನ ಸಿಸ್ಟಮ್ ಸಿದ್ದು ಕಾಂಗ್ರೆಸ್‍ನ ಪುಟ್ಟು(394), ವಿರುದ್ಧ ಜಯ ಸಾಧಿಸಿದ್ದಾರೆ.

ವಾರ್ಡ್ 3ರಲ್ಲಿ ಕಾಂಗ್ರೆಸ್ ಪ್ರೇಮಮರಯ್ಯ (392) ಬಿಜೆಪಿಯ ಶಿಲ್ಪ(320) ಅವರನ್ನು ಸೋಲಿಸಿ ಆಯ್ಕೆಯಾಗಿದ್ದಾರೆ.
ವಾರ್ಡ್ 4ರಲ್ಲಿ ಪಕ್ಷೇತರ ಎಲ್.ಮಂಜುನಾಥ್(300) ಜಯ ಸಾಧಿಸಿದ್ದು, ಪ್ರತಿಸರ್ಧಿ ಬಿಜೆಪಿಯ ಸಿ.ನಾಗರಾಜಪ್ಪ(108) ಪರಾಭವ ಗೊಂಡಿದ್ದಾರೆ.ವಾರ್ಡ್ 5ರಲ್ಲಿ ಪಕ್ಷೇತರ ಅಹ್ಮದ್ ಸಯೀದ್(201) ಅವರು ಎದುರಾಳಿ ಬಿಜೆಪಿಯ ಹೆಚ್.ಎನ್.ಸಿದ್ದರಾಜು(137) ವಿರುದ್ಧ ಜಯ ಗಳಿಸಿದ್ದಾರೆ.ವಾರ್ಡ್ 6ರಲ್ಲಿ ಕಾಂಗ್ರೆಸ್‍ನ ಬಿ.ಬೇಬಿ ಹೇಮಂತ್‍ಕುಮಾರ್(322) ಪಕ್ಷೇತರ ಅಭ್ಯರ್ಥಿ ಎಂ.ಕುಸುಮ(174) ವಿರುದ್ಧ ಗೆಲುವ ಸಾಧಿಸಿದ್ದಾರೆ.ವಾರ್ಡ್ 7ರಲ್ಲಿ ಜೆಡಿಎಸ್‍ನ ಸಿ.ಪ್ರಕಾಶ್ 162 ಮತ ಪಡೆದು ಚುನಾಯಿತರಾಗಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್‍ನ ಪಿ.ಪುಟ್ಟರಾಜು(154) ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.
ವಾರ್ಡ್ 8ರಲ್ಲಿ 416 ಮತ ಪಡೆದ ಬಿಜೆಪಿಯ ರೂಪಶ್ರೀ ಪರಮೇಶ್ ಅವರು, ಪಕ್ಷೇತರ ಅಭ್ಯರ್ಥಿ ಹೆಚ್.ಗೀತಾ(144) ಅವರನ್ನು 272 ಮತಗಳ ಅಂತರದಿಂದ ಮಣಿಸಿದ್ದಾರೆ.

ವಾರ್ಡ್ 9ರಲ್ಲಿ ಕಾಂಗ್ರೆಸ್‍ನ ಮೆಡಿಕಲ್ ಆರ್.ನಾಗರಾಜು (308), ಬಿಜೆಪಿಯ ಬಿ.ವೀರಭದ್ರಪ್ಪ (284) ವಿರುದ್ಧ ಜಯ ಗಳಿಸಿದ್ದಾರೆ.
ವಾರ್ಡ್ 10ರಲ್ಲಿ ಕಾಂಗ್ರೆಸ್‍ನ ಮಹದೇವಮ್ಮ(199) ಪ್ರತಿಸ್ಪರ್ಧಿ ಬಿಜೆಪಿಯ ಎನ್.ಎ.ವಿಜಯಲಕ್ಷ್ಮಿ(82) ವಿರುದ್ಧ ಜಯ ಪಡೆದಿದ್ದಾರೆ.ವಾರ್ಡ್ 11ರಲ್ಲಿ ಕಾಂಗ್ರೆಸ್‍ನ ಟಿ.ಎಂ.ನಂಜುಂಡಸ್ವಾಮಿ(470) ಅವರು ಪಕ್ಷೇತರ ಅಭ್ಯರ್ಥಿ ಲಿಂಗರಾಜು(177) ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ.ವಾರ್ಡ್ 12ರಲ್ಲಿ ಪಕ್ಷೇತರ ಅಭ್ಯರ್ಥಿ ಬಿ.ವಸಂತ ಶ್ರೀಕಂಠ (342) ಕಾಂಗ್ರೆಸ್‍ನ ಶೈಲಾ(273) ಅವರನ್ನು ಮಣಿಸಿ ಆಯ್ಕೆಯಾಗಿದ್ದಾರೆ.ವಾಡ 13ರಲ್ಲಿ ಕಾಂಗ್ರೆಸ್‍ನ ಎಸ್.ಸೋಮಣ್ಣ(405) ಪಡೆದು, ಬಿಜೆಪಿಯ ಸಿ.ಮಲ್ಲೇಶ್(387) ವಿರುದ್ಧ 18 ಮತಗಳ ಅಂತರದಿಂದ ಗೆಲವು ಕಂಡಿದ್ದಾರೆ.

ವಾರ್ಡ್ 14ರಲ್ಲಿ ಬಿಜೆಪಿಯ ಆರ್.ಅರ್ಜುನ್ 638 ಮತ ಪಡೆದು, ಕಾಂಗ್ರೆಸ್‍ನ ರಕ್ಷಯ್ಯ(292) ಅವರನ್ನು ಪರಾಭವಗೊಳಿಸಿದರು.
ವಾರ್ಡ್ 15ರಲ್ಲಿ ಬಿಜೆಪಿ ಅಭ್ಯರ್ಥಿ ಮಾದೇವಿ(402), ಪಕ್ಷೇತರ ಅಭ್ಯರ್ಥಿ ಮಹದೇವಮ್ಮ(233) ಅವರನ್ನು ಮಣಿಸಿದ್ದಾರೆ.
ವಾರ್ಡ್ 16ರಲ್ಲಿ ಕಾಂಗ್ರೆಸ್‍ನ ಮದನ್‍ರಾಜ್(417), ಬಿಜೆಪಿಯ ಎ.ಎನ್.ರಂಗು(242) ಅವರನ್ನು ಮಣಿಸಿ ಜಯ ಪಡೆದಿದ್ದಾರೆ.
ವಾರ್ಡ್ 17ರಲ್ಲಿ ಕಾಂಗ್ರೆಸ್‍ನ ರಾಜೇಶ್ವರಿ ರಾಘವೇಂದ್ರ 494 ಮತ ಪಡೆದು, ಬಿಜೆಪಿಯ ವಸಂತಕುಮಾರಿ(318) ಅವರನ್ನು ಸೋಲಿಸಿದ್ದಾರೆ.ವಾಡ್ 18ರಲ್ಲಿ ಪಕ್ಷೇತರ ಅಭ್ಯರ್ಥಿ ಪಿ.ಶೋಭರಾಣಿ(410) ಜಯಗಳಿಸಿದ್ದಾರೆ. 293 ಮತ ಪಡೆದ ಕಾಂಗ್ರೆಸ್‍ನ ಅನುಪಮವೀರೇಶ್ ಪರಾಭವಗೊಂಡಿದ್ದಾರೆ.ವಾರ್ಡ್ 19ರಲ್ಲಿ ಪಕ್ಷೇತರ ಅಭ್ಯರ್ಥಿ ಆರ್.ತೇಜಸ್ವಿನಿರಾಜು(428), ಎದುರಾಳಿ ಜೆಡಿಎಸ್‍ನ ಎಂ.ಶೋಭಾ(274), ಕಾಂಗ್ರೆಸ್‍ನ ಜ್ಞಾನೇಶ್ವರಿ(203) ವಿರುದ್ಧ ಜಯಗಳಿಸಿದ್ದಾರೆ.

ವಾರ್ಡ್ 20ರಲ್ಲಿ 492 ಮತ ಗಳಿಸಿದ ಜೆಡಿಎಸ್‍ನ ವಿ.ಮೋಹನ್, ಕಾಂಗ್ರೆಸ್‍ನ ಮಣಿಕಂಠಸ್ವಾಮಿ (288) ಅವರನ್ನು ಮಣಿಸಿ ಆಯ್ಕೆಯಾಗಿದ್ದಾರೆ.ವಾರ್ಡ್ 21ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಗರತ್ನ ಮಾದೇಶ್(594), ಪಕ್ಷೇತರ ಅಭ್ಯರ್ಥಿ ಪಾರ್ವತಮ್ಮ ಬಸವಣ್ಣ(523) ವಿರುದ್ಧ ಜಯ ಸಾಧಿಸಿದ್ದಾರೆ.ವಾರ್ಡ್ 22ರಲ್ಲಿ ಕಾಂಗ್ರೆಸ್‍ನ ಬಾದಾಮಿ ಮಂಜು 341 ಪಡೆದು, ಪಕ್ಷೇತರ ಸಿ.ಉಮೇಶ್ (217) ವಿರುದ್ಧ ಚುನಾಯಿತರಾಗಿದ್ದಾರೆ.
ವಾರ್ಡ್ 23ರಲ್ಲಿ ಬಿಜೆಪಿಯ ಎಸ್.ಕೆ.ಕಿರಣ(494) ಅವರು, ಕಾಂಗ್ರೆಸ್‍ನ ಮೀನಾಕ್ಷಿ(414) ವಿರುದ್ಧ ಗೆಲುವು ಪಡೆದಿದ್ದಾರೆ.

Translate »