ಕಾನಿನಿ ಎದುರು ಟಾಸ್ಕ್ ವರ್ಕ್ ನೌಕರರ ಧರಣಿ
ಮಂಡ್ಯ

ಕಾನಿನಿ ಎದುರು ಟಾಸ್ಕ್ ವರ್ಕ್ ನೌಕರರ ಧರಣಿ

July 31, 2018

ಮಂಡ್ಯ: ಕಾವೇರಿ ನೀರಾವರಿ ನಿಗಮದಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ನೀರು ಗಂಟಿಗಳು, ಕಂಪ್ಯೂಟರ್ ಆಪರೇಟರ್‍ಗಳ ವೇತನ ಬಿಡುಗಡೆ, ಸೇವೆ ಖಾಯಂಮ್ಮಾತಿ, ಸಮಾನ ಕೆಲಸಕ್ಕೆ ಸಮಾನ ವೇತನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಟಾಸ್ಕ್ ವರ್ಕ್ ನೌಕರರು ನಗರದಲ್ಲಿಂದು ಪ್ರತಿಭಟನೆ ನಡೆಸಿದರು.

ಸೋಮವಾರ ಬೆಳಿಗ್ಗೆ ನಗರದ ಕಾವೇರಿ ನೀರಾವರಿ ನಿಗ ಮದ ಕಚೇರಿಎದುರು ಸಮಾವೇಶಗೊಂಡ ಪ್ರತಿಭಟನಾ ಕಾರರು, ಕಾವೇರಿ ನೀರಾವರಿ ಇಲಾಖಾಧಿಕಾರಿಗಳು ಮತ್ತು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಸಂಘದ ಕಾರ್ಯದರ್ಶಿ ಚನ್ನಕೇಶವ, ವಿಶ್ವೇಶ್ವರಯ್ಯ ನಾಲಾ ವಿಭಾಗ ವ್ಯಾಪ್ತಿಯಲ್ಲಿ ಸುಮಾರು 300ಕ್ಕೂ ಹೆಚ್ಚು ಟಾಸ್ಕ್‍ವರ್ಕ್ ಸೌಡಿಗಳು, ಲಿಪಿಕ ಸಹಾಯಕರು, ವಾಹನ ಚಾಲಕರು 30 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಇವರೆಲ್ಲರೂ ಸರ್ಕಾರಿ ಸವಲತ್ತುಗಳಿಂದ ವ0ಚಿತ ರಾಗಿದ್ದಾರೆ. ಕಳೆದ 5 ತಿಂಗಳಿಂದ ವೇತನ ಸಿಗದೇ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರು.

ಈ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡು ವಂತೆ ನೀರಾವರಿ ನಿಗಮದ ಅಧಿಕಾರಿಗಳು ಸಮಿತಿ ರಚನೆ ಮಾಡಿ ತೀರ್ಮಾನಿಸಿದ್ದಾರೆ. ಆದರೆ, ಈವರೆಗೆ ಅದು ಆದೇಶ ವಾಗಿ ಜಾರಿಯಾಗಿಲ್ಲದೆ ಸಮಾನ ವೇತನದಿಂದಲೂ ವಂಚಿತ ರಾಗುವಂತಾಗಿದೆ. ಕೂಡಲೇ ಅದನ್ನು ಆದೇಶ ಮಾಡಿ ಹೊರ ಡಿಸಬೇಕೆಂದು ಒತ್ತಾಯಿಸಿದರು.

ಪ್ರತಿ ತಿಂಗಳು ಸಂಬಳ ದೊರಕದೆ ನೌಕರರ ಬದುಕು ಸಂಕ ಷ್ಟಕ್ಕೆ ಸಿಲುಕಿದೆ. ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೂ ತೀವ್ರ ತೊಂದರೆಯಾಗಿದೆ. ಅಧಿಕಾರಿಗಳು ನೌಕರರ ಸಂಕಷ್ಟ ಮನಗಂಡು ಕೂಡಲೇ ವೇತನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ವರುಣ ಕುಮಾರ, ಜಯಕುಮಾರ್, ಡಿ.ದೊಡ್ಡಯ್ಯ, ರಾಮೇಗೌಡ, ಮಹೇಶ, ರಾಮೇಗೌಡ, ಶಶಿಧರ, ತಿಮ್ಮೇಗೌಡ, ಚಿಕ್ಕಬೊಮ್ಮೇಗೌಡ, ಕೆಂಪೇಗೌಡ, ವೆಂಕಟೇಶ್, ದೊಡ್ಡಸ್ವಾಮಿ, ಎಸ್.ಕೆ.ನಾಗರಾಜು, ಶ್ರೀನಿವಾಸ್ ಇದ್ದರು.

Translate »