ಕೆ.ಆರ್.ಪೇಟೆ: ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಪಟ್ಟಣ ದಲ್ಲಿ ಸೋಮವಾರ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ತಾಲೂಕು ಕರವೇ ಅಧ್ಯಕ್ಷ ಹೊನ್ನೇನ ಹಳ್ಳಿ ಡಿ.ಎಸ್.ವೇಣು ನೇತೃತ್ವದಲ್ಲಿ ಸಮಾ ವೇಶಗೊಂಡ ಕಾರ್ಯಕರ್ತರು ಮಿನಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
ತಾಲೂಕಿನ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ರಾಜಸ್ವ ನಿರೀಕ್ಷಕರು ತಮ್ಮ ನಿಯೋ ಜಿತ ವೃತ್ತಗಳಲ್ಲಿದ್ದು, ರೈತರು ಮತ್ತು ಸಾರ್ವ ಜನಿಕರ ಕೆಲಸವನ್ನು ಸಕಾಲದಲ್ಲಿ ಮಾಡಿ ಕೊಡದೇ ಪಟ್ಟಣದಲ್ಲಿ ಬೀಡುಬಿಟ್ಟು ಗ್ರಾಮೀಣ ರೈತಾಪಿ ವರ್ಗಕ್ಕೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಹೋಬಳಿ ಕೇಂದ್ರಗಳಲ್ಲಿರುವ ನಾಡ ಕಚೇರಿಗಳು ರೈತರಿಗೆ ಉಪಯೋಗವಿಲ್ಲ ದಂತಾಗಿವೆ. ಸದಾ ವಿದ್ಯುತ್, ಸರ್ವರ್ ಇಲ್ಲ ಎಂದು ರೈತರು ಮತ್ತು ಸಾರ್ವಜನಿ ಕರು ಅಲೆದಾಡಿಸುತ್ತಿದ್ದಾರೆ. ಇದನ್ನು ಕೇಳ ಬೇಕಾದ ಗ್ರಾಮ ಲೆಕ್ಕಾಧಿಕಾರಿ, ರಾಜಸ್ವ ನಿರೀಕ್ಷಕರು ತಾಲೂಕು ಕೇಂದ್ರದಲ್ಲಿ ನೆಲೆ ಸುವ ಮೂಲಕ ರೈತರನ್ನು ಕರೆಸಿಕೊಂಡು ಲಂಚ ಪಡೆದು ಕೆಲಸ ಮಾಡಿ ಕೊಡುತ್ತಿದ್ದಾರೆ. ಇದರಿಂದ ರೈತರು ತೊಂದರೆ ಅನು ಭವಿಸಬೇಕಾಗಿದೆ. ಹಾಗಾಗಿ ಗ್ರಾಮ ಲೆಕ್ಕಾಧಿಕಾರಿ ಯಾವ ವೃತ್ತದಲ್ಲಿ ನಿಯೋಜಿಸಲಾಗಿದೆಯೋ ಅಲ್ಲಿ ವಾಸವಿರಲು ಆದೇಶಿಸ ಬೇಕು ಇಲ್ಲದಿದ್ದರೆ ಅಂತಹ ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತಮ್ಮ ಕೆಲಸಕ್ಕಾಗಿ ತಾಲೂಕು ಕಚೇರಿಗೆ ಬರುವ ರೈತರಿಗೆ ಕೂಡಲೇ ಕುಡಿಯುವ ನೀರು, ಶೌಚಾಲಯ, ನೆರಳಿನ ವ್ಯವಸ್ಥೆ ಮಾಡುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ತಾಲೂಕು ಕೇಂದ್ರದಲ್ಲಿ ಆಸ್ತಿ ನೋಂದಣಿ ಮತ್ತಿತರ ಕೆಲಸಕ್ಕೆ ಆರ್‍ಟಿಸಿ ತುರ್ತು ಅಗತ್ಯವಿರುತ್ತದೆ. ಹಾಗಾಗಿ ಈಗಿ ರುವ ಆರ್‍ಟಿಸಿ ಕೇಂದ್ರದ ಜೊತೆಗೆ ಮತ್ತೊಂದು ಆರ್‍ಟಿಸಿ ಕೌಂಟರ್ ತೆರೆಯುವ ಮೂಲಕ ರೈತರಿಗೆ ಅನುಕೂಲ ಮಾಡಿ ಕೊಡಬೇಕೆಂದು ಒತ್ತಾಯಿಸಿ ಪ್ರತಿಭಟನಾ ಕಾರರು ಉಪತಹಸೀಲ್ದಾರ್ ಮಹದೇವೇ ಗೌಡ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕರವೇ ಉಪಾಧ್ಯಕ್ಷ ಕೆ.ಟಿ.ಶ್ರೀನಿವಾಸ್(ಶ್ರೀನಿಧಿ), ತಾಲೂಕು ಸಂಘಟನಾ ಸಂಚಾಲಕ ಶೇಖರ್‍ಗೌಡ, ತಾಲೂಕು ಕಾರ್ಯದರ್ಶಿ ಟೆಂಪೋ ಶ್ರೀನಿ ವಾಸ್, ಪದವೀಧರ ಘಟಕದ ಅಧ್ಯಕ್ಷ ಸಿ.ಬಿ. ಚೇತನ್‍ಕುಮಾರ್, ಜವರೇಗೌಡ, ತಾಲೂಕು ಸಂಘಟನಾ ಕಾರ್ಯದರ್ಶಿ ಸ್ವಾಮಿ, ತಾಲೂಕು ಕರವೇ ಯುವ ಘಕಟದ ಅಧ್ಯಕ್ಷ ಆನಂದ್, ಪ್ರಧಾನ ಕಾರ್ಯದರ್ಶಿ ಮನು, ಉಪಾಧ್ಯಕ್ಷ ಶ್ರೀಧರ್, ಸಿ.ಬಿ.ಬಸವರಾಜು, ಅನಿಲ್, ಅಭಿ, ಮಂಜುನಾಥ್, ರಂಗ, ಆನಂದ್ ಹಲವರಿದ್ದರು.