Tag: K.R. Pet

ಮಹಾರಾಷ್ಟ್ರದಿಂದ ಬಂದು ಮನೆಯಲ್ಲಿದ್ದವರಿಗೆ ಚಿಕಿತ್ಸೆ.ಕೊಡಿಸಿದ ಗ್ರಾಮಸ್ಥರು !
ಮಂಡ್ಯ

ಮಹಾರಾಷ್ಟ್ರದಿಂದ ಬಂದು ಮನೆಯಲ್ಲಿದ್ದವರಿಗೆ ಚಿಕಿತ್ಸೆ.ಕೊಡಿಸಿದ ಗ್ರಾಮಸ್ಥರು !

March 29, 2020

ಮಂಡ್ಯ,ಮಾ.29 (ನಾಗಯ್ಯ); ಹಲವಾರು ವರ್ಷಗಳಿಂದ ಕಾರ್ಯನಿಮಿತ್ತ ಮಹಾರಾಷ್ಟ್ರದಲ್ಲಿದ್ದು ಇಂದು ಗ್ರಾಮಕ್ಕೆ ಬಂದ ಇಬ್ಬರಿಗೆ ಗ್ರಾಮಸ್ತರೇ ಕರೆದೊಯ್ದು ಚಿಕಿತ್ಸೆಗೆ ದಾಖಲು ಮಾಡಿಸಿದ ಘಟನೆ ಕೆ.ಎಂ.ದೊಡ್ಡಿ ಸಮೀಪದ ಬಿದರಹೊಸಹಳ್ಳಿಯಲ್ಲಿ ಜರುಗಿದೆ. ಸುಮಾರು 35 ವರ್ಷವಯಸ್ಸಿನವರಾದ ವ್ಯಕ್ತಿಗಳು ಮಹಾರಾಷ್ಟ್ರದಲ್ಲಿ ನೆಲೆಸಿದ್ದು ಗ್ರಾಮಕ್ಕೆ ಆಗಮಿಸಿ ಮನೆಯಲ್ಲಿದ್ದವರನ್ನ ಕರೆದೊಯ್ದು ಆಸ್ಪತ್ರಗೆ ದಾಖಲಿಸಿದ್ದಾರೆ ಎನ್ನಲಾಗಿದೆ. ಕೆ.ಎಂ.ದೊಡ್ಡಿ ಸಮೀಪದ ಬಿದರಹೊಹಳ್ಳಿ ಗ್ರಾಮದ ಇಬ್ಬರು ವ್ಯಕ್ತಿಗಳು ಮಹಾರಾಷ್ಟ್ರದಲ್ಲಿ ಕೆಲಸಮಾಡಿಕೊಂಡಿದ್ದರು ಎನ್ನಲಾಗಿದ್ದು ಅವರು ಕೊರೊನಾ ಹಿನ್ನೆಲೆಯಲ್ಲಿ ಸ್ವಗ್ರಾಮಕ್ಕೆ ಆಗಮಿಸಿದ್ದರು.ವಿಷಯ ತಿಳಿದ ಸ್ಥಳೀಯ ಗ್ರಾಮಪಂಚಾಯಿತಿಯವರು ಬೆಳಿಗ್ಗೆ ಕೆ.ಎಂ ದೊಡ್ಡಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ….

ಅನಧಿಕೃತವಾಗಿ ಸಂಚರಿಸುತ್ತಿದ್ದ ಸಚಿವ ಜಮೀರ್ ಒಡೆತನದ ನ್ಯಾಷನಲ್ ಟ್ರಾವೆಲ್ಸ್ ಬಸ್ ಪೊಲೀಸರ ವಶಕ್ಕೆ
ಮಂಡ್ಯ, ಮೈಸೂರು

ಅನಧಿಕೃತವಾಗಿ ಸಂಚರಿಸುತ್ತಿದ್ದ ಸಚಿವ ಜಮೀರ್ ಒಡೆತನದ ನ್ಯಾಷನಲ್ ಟ್ರಾವೆಲ್ಸ್ ಬಸ್ ಪೊಲೀಸರ ವಶಕ್ಕೆ

November 28, 2018

ಕೆ.ಆರ್.ಪೇಟೆ: ಪರವಾನಗಿ ಇಲ್ಲದೆ ಅನಧಿಕೃತವಾಗಿ ಕೆ.ಆರ್.ಪೇಟೆಯಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಸಚಿವ ಜಮೀರ್ ಅಹಮದ್ ಅವರಿಗೆ ಸೇರಿದ ನ್ಯಾಷನಲ್ ಟ್ರಾವೆಲ್ಸ್ ಸಂಸ್ಥೆಯ ಬಸ್ಸನ್ನು ಸಾರ್ವಜನಿಕರೇ ತಡೆದು ಕೆ.ಆರ್.ಪೇಟೆ ಪಟ್ಟಣ ಪೊಲೀಸರಿಗೆ ಮಂಗಳವಾರ ಒಪ್ಪಿಸಿದ್ದಾರೆ. ರಾಜ್ಯದ ಪ್ರಭಾವಿ ಸಚಿವರಾಗಿರುವ ಜಮೀರ್ ಅಹಮದ್ ಒಡೆತನದ ನ್ಯಾಷ ನಲ್ ಟ್ರಾವೆಲ್ಸ್ ಸಂಸ್ಥೆಯ ಆರಕ್ಕೂ ಹೆಚ್ಚು ಬಸ್ಸುಗಳು ಪ್ರತಿನಿತ್ಯ ಪಟ್ಟಣದಿಂದ ನಾಗಮಂಗಲ ಮಾರ್ಗವಾಗಿ ಬೆಂಗಳೂರಿಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿವೆ. ಇತ್ತೀಚೆಗೆ ಪಾಂಡವಪುರ ತಾಲೂಕಿನ ಕನಗನಮರಡಿ ಬಳಿ ರಾಜಕುಮಾರ ಖಾಸಗಿ ಬಸ್ಸು ನಾಲೆಗೆ ಉರುಳಿ ಬಿದ್ದು 30…

ಕಂದಾಯ ಇಲಾಖೆ ಅವ್ಯವಸ್ಥೆ ಖಂಡಿಸಿ ಕರವೇ ಮುತ್ತಿಗೆ
ಮಂಡ್ಯ

ಕಂದಾಯ ಇಲಾಖೆ ಅವ್ಯವಸ್ಥೆ ಖಂಡಿಸಿ ಕರವೇ ಮುತ್ತಿಗೆ

July 31, 2018

ಕೆ.ಆರ್.ಪೇಟೆ:  ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಪಟ್ಟಣ ದಲ್ಲಿ ಸೋಮವಾರ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ತಾಲೂಕು ಕರವೇ ಅಧ್ಯಕ್ಷ ಹೊನ್ನೇನ ಹಳ್ಳಿ ಡಿ.ಎಸ್.ವೇಣು ನೇತೃತ್ವದಲ್ಲಿ ಸಮಾ ವೇಶಗೊಂಡ ಕಾರ್ಯಕರ್ತರು ಮಿನಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ತಾಲೂಕಿನ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ರಾಜಸ್ವ ನಿರೀಕ್ಷಕರು ತಮ್ಮ ನಿಯೋ ಜಿತ ವೃತ್ತಗಳಲ್ಲಿದ್ದು, ರೈತರು ಮತ್ತು ಸಾರ್ವ ಜನಿಕರ ಕೆಲಸವನ್ನು ಸಕಾಲದಲ್ಲಿ ಮಾಡಿ ಕೊಡದೇ ಪಟ್ಟಣದಲ್ಲಿ ಬೀಡುಬಿಟ್ಟು ಗ್ರಾಮೀಣ ರೈತಾಪಿ…

ಶ್ರವಣಬೆಳಗೊಳ ಮಾರ್ಗ ರಸ್ತೆ ದುರಸ್ತಿಗೆ ವರ್ತಕರ ಆಗ್ರಹ
ಮಂಡ್ಯ

ಶ್ರವಣಬೆಳಗೊಳ ಮಾರ್ಗ ರಸ್ತೆ ದುರಸ್ತಿಗೆ ವರ್ತಕರ ಆಗ್ರಹ

July 15, 2018

ಕೆ.ಆರ್.ಪೇಟೆ:  ಪಟ್ಟಣದ ಬಸವೇಶ್ವರ ವೃತ್ತದಿಂದ ಶ್ರವಣಬೆಳಗೊಳಕ್ಕೆ ಹೋಗುವ ನಡು ರಸ್ತೆಯಲ್ಲಿ ಕೊಳೆತು ನಾರುತ್ತಿರುವ ಮಳೆ ನೀರಿನಿಂದ ಸಾರ್ವ ಜನಿಕರಿಗೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಹೀಗಾಗಿ ತಕ್ಷಣ ರಸ್ತೆ ದುರಸ್ತಿಗೆ ಕ್ರಮ ವಹಿಸ ಬೇಕೆಂದು ಆಗ್ರಹಿಸಿ ಸದರಿ ರಸ್ತೆಯ ವರ್ತಕರು ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಕಳೆದ 3 ತಿಂಗಳ ಹಿಂದೆ ಈ ರಸ್ತೆಯನ್ನು ದುರಸ್ಥಿ ಮಾಡಲಾಗಿತ್ತು. ಈ ವೇಳೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯತೆ ಯಿಂದ ಗುತ್ತಿಗೆದಾರರು ಮನಬಂದಂತೆ ರಸ್ತೆ ದುರಸ್ಥಿ ಮಾಡಿದ್ದಾರೆ. ಆದರೆ ಮಳೆ…

ಮದ್ಯಪಾನದಿಂದ ಸಂಸಾರದ ನೆಮ್ಮದಿ ಹಾಳು
ಮಂಡ್ಯ

ಮದ್ಯಪಾನದಿಂದ ಸಂಸಾರದ ನೆಮ್ಮದಿ ಹಾಳು

July 14, 2018

ಕೆ.ಆರ್.ಪೇಟೆ: ಮದ್ಯಪಾನದಿಂದ ಸಂಸಾರದ ನೆಮ್ಮದಿ ಹಾಳಾಗಲಿದ್ದು, ಹಣವೂ ವ್ಯರ್ಥವಾಗಲಿದೆ ಎಂದು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಅಭಿಪ್ರಾಯಪಟ್ಟರು. ತಾಲೂಕಿನ ಸಿಂಧುಘಟ್ಟ ಗ್ರಾಮದ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಶ್ರೀಕ್ಷೇತ್ರ ಧರ್ಮ ಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹಾಗೂ ಪ್ರಗತಿ ಬಂಧು ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಹಮ್ಮಿ ಕೊಂಡಿದ್ದ ರಾಜ್ಯಮಟ್ಟದ 1223ನೇ ಮದ್ಯವರ್ಜನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮದ್ಯಪಾನ, ಬೀಡಿ-ಸಿಗರೇಟು, ಗುಟ್ಕಾ, ಗಾಂಜಾ ಸೇರಿದಂತೆ ಮಾದಕ ವಸ್ತುಗಳಿಂದ ಪ್ರತಿಯೊಬ್ಬರೂ ದೂರವಿರಬೇಕು….

ಉದ್ಯೋಗ, ಉನ್ನತ ಶಿಕ್ಷಣ ಮಾಹಿತಿ ಕೇಂದ್ರ ತೆರೆಯಿರಿ
ಮಂಡ್ಯ

ಉದ್ಯೋಗ, ಉನ್ನತ ಶಿಕ್ಷಣ ಮಾಹಿತಿ ಕೇಂದ್ರ ತೆರೆಯಿರಿ

July 13, 2018

ಕೆ.ಆರ್.ಪೇಟೆ:  ಯಾವುದೇ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡದೇ, ಸರಳವಾಗಿ ಮಾಡುವಂತೆ ರಾಜ್ಯ ವಿಧಾನಸಭೆ ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ ರೈತರಿಗೆ ಸಲಹೆ ನೀಡಿದರು. ಪಟ್ಟಣದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ತಾಲೂಕು ಒಕ್ಕಲಿಗರ ಸಂಘ ಮತ್ತು ನೇಗಿಲಯೋಗಿ ಸಮಾಜ ಸೇವಾ ಟಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಒಕ್ಕಲಿಗ ಸಮಾಜದ ವಧೂ-ವರರ ಮಾಹಿತಿ ಕೇಂದ್ರ ಉದ್ಘಾಟನಾ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಒಕ್ಕಲಿಗ ವಧೂ-ವರರ ಮಾಹಿತಿ ಕೇಂದ್ರ ಸ್ಥಾಪನೆ ಮಾಡಿರುವುದು ಶ್ಲಾಘನೀಯ. ಇದರ ಜೊತೆಗೆ ಉದ್ಯೋಗ…

ರಾಜ್ಯ ಸರ್ಕಾರದ ವಿರುದ್ಧ ಜಿಲ್ಲೆಯಲ್ಲಿ ಪ್ರತ್ಯೇಕ ಪ್ರತಿಭಟನೆ: ಸ್ತ್ರೀಶಕ್ತಿ ಮಹಿಳಾ ಸಂಘದ ಸಾಲಮನ್ನಾಕ್ಕೆ ಆಗ್ರಹ
ಮಂಡ್ಯ

ರಾಜ್ಯ ಸರ್ಕಾರದ ವಿರುದ್ಧ ಜಿಲ್ಲೆಯಲ್ಲಿ ಪ್ರತ್ಯೇಕ ಪ್ರತಿಭಟನೆ: ಸ್ತ್ರೀಶಕ್ತಿ ಮಹಿಳಾ ಸಂಘದ ಸಾಲಮನ್ನಾಕ್ಕೆ ಆಗ್ರಹ

July 12, 2018

ಕೆ.ಆರ್.ಪೇಟೆ: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಚುನಾವಣೆಗೂ ಮುನ್ನ ನೀಡಿದ ಭರವಸೆಯಂತೆ ಸ್ತ್ರೀಶಕ್ತಿ ಮಹಿಳಾ ಸ್ವಸಹಾಯ ಸಂಘದ ಬ್ಯಾಂಕ್ ಸಾಲ ಮನ್ನಾ ಮಾಡಬೇಕು. ಡೀಸೆಲ್, ಪೆಟ್ರೋಲ್, ವಿದ್ಯುತ್ ದರ ಕಡಿತಗೊಳಿಸಬೇಕು ಎಂದು ಆಗ್ರಹಿಸಿ ಪಟ್ಟಣದಲ್ಲಿ ಬುಧವಾರ ತಾಲೂಕು ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರವಾಸಿ ಮಂದಿರ ವೃತ್ತದಲ್ಲಿ ಸಮಾ ವೇಶಗೊಂಡ ಕಾರ್ಯಕರ್ತರು ಹಾಗೂ ಸಂಘಟನೆಯ ಮಹಿಳಾ ಘಟಕದ ಪದಾಧಿಕಾರಿಗಳು ಮಾನವ ಸರಪಳಿ ನಿರ್ಮಿಸಿ ಕೆಲ ಕಾಲ ಮೈಸೂರು-ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿಯನ್ನು ತಡೆದು, ರಾಜ್ಯ ಸರ್ಕಾರದ ವಿರುದ್ಧ…

ಮಹಿಳೆಯ ಚಿನ್ನದ ಸರ ಕಳ್ಳತನ
ಮಂಡ್ಯ

ಮಹಿಳೆಯ ಚಿನ್ನದ ಸರ ಕಳ್ಳತನ

July 12, 2018

ಕೆ.ಆರ್.ಪೇಟೆ:  ಸಿಗರೇಟ್ ಕೊಳ್ಳುವ ನೆಪದಲ್ಲಿ ಅಂಗಡಿಗೆ ಬಂದ ದುಷ್ಕರ್ಮಿಗಳು ಮಹಿಳೆಯೊಬ್ಬರ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಪಟ್ಟಣದ ಮುತ್ತುರಾಯಸ್ವಾಮಿ ಬಡಾವಣೆ ಯಲ್ಲಿ ಬುಧವಾರ ರಾತ್ರಿ ಸುಮಾರು 8.45ರ ಸಮಯದಲ್ಲಿ ನಡೆದಿದೆ. ಬಡಾವಣೆಯ ಹೇಮಗಿರಿ ರಸ್ತೆ ಯಲ್ಲಿ ಅಂಗಡಿ ನಡೆಸುತ್ತಿದ್ದ ಶಿಕ್ಷಕ ಎಂ.ಎಸ್. ಮಹದೇವಪ್ಪ ಅವರ ಪತ್ನಿ ಜಗದಾಂಬ ಎಂಬುವರು ಚಿನ್ನದ ಸರ ಕಳೆದುಕೊಂಡ ವರಾಗಿದ್ದಾರೆ. ಘಟನೆ ವಿವರ: ದುಷ್ಕರ್ಮಿಗಳಿಬ್ಬರ ಪೈಕಿ ಒಬ್ಬ ಸಿಗರೇಟ್ ಕೊಂಡು ಅಲ್ಲಿಯೇ ಸೇದುತ್ತಾ ಬೈಕ್ ಪಕ್ಕದಲ್ಲಿ ಮಾತಾಡುತ್ತಾ ನಿಂತಿದ್ದರು….

ಬ್ಯಾಂಕ್ ಖಾತೆ ತೆರೆದು ಸೌಲಭ್ಯ ಸದುಪಯೋಗಪಡಿಸಿಕೊಳ್ಳಿ
ಮಂಡ್ಯ

ಬ್ಯಾಂಕ್ ಖಾತೆ ತೆರೆದು ಸೌಲಭ್ಯ ಸದುಪಯೋಗಪಡಿಸಿಕೊಳ್ಳಿ

July 11, 2018

ಕೆ.ಆರ್.ಪೇಟೆ: ಗ್ರಾಮೀಣ ಜನತೆ ಕಡ್ಡಾಯವಾಗಿ ಬ್ಯಾಂಕ್ ಖಾತೆ ತೆರೆ ಯುವ ಮೂಲಕ ಬ್ಯಾಂಕ್‍ನಿಂದ ದೊರೆಯುವ ಸೌಲಭ್ಯಗಳನ್ನು ಪಡೆದು ಆರ್ಥಿಕ ವಾಗಿ ಅಭಿವೃದ್ಧಿ ಹೊಂದಬೇಕು ಎಂದು ಹೊಸಹೊಳಲು ವಿಜಯಾಬ್ಯಾಂಕ್ ಶಾಖೆ ವ್ಯವಸ್ಥಾಪಕ ಗೌರವ್ ಅಗರ್‍ವಾಲ್ ಸಲಹೆ ನೀಡಿದರು. ತಾಲೂಕಿನ ನಾರ್ಗೋನಹಳ್ಳಿಯಲ್ಲಿ ವಿಜಯಾಬ್ಯಾಂಕ್ ಹೊಸಹೊಳಲು ಶಾಖೆ ಹಾಗೂ ಆರ್ಥಿಕ ಸಾಕ್ಷರತಾ ಯೋಜನೆ ಯಡಿ ಹಮ್ಮಿಕೊಂಡಿದ್ದ ಬ್ಯಾಂಕ್ ಸೌಲಭ್ಯ ಗಳ ಕುರಿತಾದ ಜನಜಾಗೃತಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಸರ್ಕಾರ ಶೂನ್ಯ ಬ್ಯಾಲೆನ್ಸ್‍ನಲ್ಲಿ ಜನಧನ್ ಖಾತೆ ತೆರೆಯುವ ಅವಕಾಶವನ್ನು ಗ್ರಾಮೀಣ ಜನರಿಗೆ…

ಗುಂಡಯ್ಯನವರ ಸೇವೆ ಸ್ಮರಣೀಯ
ಮಂಡ್ಯ

ಗುಂಡಯ್ಯನವರ ಸೇವೆ ಸ್ಮರಣೀಯ

July 8, 2018

ಕೆ.ಆರ್.ಪೇಟೆ:  ಕರ್ನಾಟಕ ರಾಜ್ಯ ಉಗ್ರಾಣ ನಿಗಮದಲ್ಲಿ ಉನ್ನತ ಹುದ್ದೆಯ ಲ್ಲಿದ್ದ ಶೀಳನೆರೆ ಎಸ್.ಎಸ್.ಗುಂಡಯ್ಯ ನವರು ತಾಲೂಕಿನ 300ಕ್ಕೂ ಹೆಚ್ಚು ಮಂದಿಗೆ ಸರ್ಕಾರಿ ಕೆಲಸ ಕೊಡಿಸುವ ಮೂಲಕ ಸಾವಿರಾರು ಕುಟುಂಬಕ್ಕೆ ಆಸರೆಯಾಗಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರವಿಕುಮಾರ್ ತಿಳಿಸಿದರು. ತಾಲೂಕು ಕಸಾಪ ವತಿಯಿಂದ ಪಟ್ಟಣದ ಗ್ರಾಮಭಾರತಿ ಶಿಕ್ಷಣ ಸಂಸ್ಥೆ ಸಭಾಂಗಣ ದಲ್ಲಿ ದಿ.ಎಸ್.ಎಸ್.ಗುಂಡಯ್ಯನವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಭಾವಗೀತೆ ಸ್ಪರ್ಧೆ ಮತ್ತು ಪ್ರತಿಭಾ ಪುರಸ್ಕಾರ ಹಾಗೂ ಎಸ್.ಎಸ್.ಗುಂಡಯ್ಯ ದತ್ತಿ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ…

1 2 3 4
Translate »