ಉದ್ಯೋಗ, ಉನ್ನತ ಶಿಕ್ಷಣ ಮಾಹಿತಿ ಕೇಂದ್ರ ತೆರೆಯಿರಿ
ಮಂಡ್ಯ

ಉದ್ಯೋಗ, ಉನ್ನತ ಶಿಕ್ಷಣ ಮಾಹಿತಿ ಕೇಂದ್ರ ತೆರೆಯಿರಿ

July 13, 2018

ಕೆ.ಆರ್.ಪೇಟೆ:  ಯಾವುದೇ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡದೇ, ಸರಳವಾಗಿ ಮಾಡುವಂತೆ ರಾಜ್ಯ ವಿಧಾನಸಭೆ ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ ರೈತರಿಗೆ ಸಲಹೆ ನೀಡಿದರು.

ಪಟ್ಟಣದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ತಾಲೂಕು ಒಕ್ಕಲಿಗರ ಸಂಘ ಮತ್ತು ನೇಗಿಲಯೋಗಿ ಸಮಾಜ ಸೇವಾ ಟಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಒಕ್ಕಲಿಗ ಸಮಾಜದ ವಧೂ-ವರರ ಮಾಹಿತಿ ಕೇಂದ್ರ ಉದ್ಘಾಟನಾ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಒಕ್ಕಲಿಗ ವಧೂ-ವರರ ಮಾಹಿತಿ ಕೇಂದ್ರ ಸ್ಥಾಪನೆ ಮಾಡಿರುವುದು ಶ್ಲಾಘನೀಯ. ಇದರ ಜೊತೆಗೆ ಉದ್ಯೋಗ ಮಾಹಿತಿ ಕೇಂದ್ರ ಮತ್ತು ಉನ್ನತ ಶಿಕ್ಷಣ ಮಾಹಿತಿ ಕೇಂದ್ರವನ್ನೂ ಆರಂಭಿಸಲು ತಾಲೂಕು ಒಕ್ಕಲಿಗರ ಸಂಘ ಮುಂದಾಗಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ ಗೌರವ ಡಾಕ್ಟರೇಟ್ ಪದವಿ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ಅಂ.ಚಿ.ಸಣ್ಣಸ್ವಾಮೀಗೌಡ, ಐಪಿಎಸ್ ಪರೀಕ್ಷೆಯಲ್ಲಿ ಪಾಸಾದ ದೊಡ್ಡಯಾಚೇನಹಳ್ಳಿ ಪೃಥ್ವಿಕ್ ಹಾಗೂ ಎಂಬಿಬಿಎಸ್ ಪರೀಕ್ಷೆ ಯಲ್ಲಿ ಸರ್ಕಾರಿ ಸೀಟು ಪಡೆದಿರುವ ಅಗ್ರಹಾರ ಬಾಚಹಳ್ಳಿ ಪ್ರಜ್ವಲ್, ಆರ್.ರಮೇಶ್, ಪ್ರಕಾಶ್, ಶೀಳನೆರೆ ಸಿ.ಎಸ್.ಉಜ್ಚಲ್, ಉಯ್ಗೋನ ಹಳ್ಳಿ ಆಕಾಶ್, ಎಂ.ಎ.ಇಂಪನಾ, ಬ್ರಿಜೇಶ್ ಹಾಗೂ ಎಸ್‍ಎಸ್‍ಎಲ್‍ಸಿಯಲ್ಲಿ ಉತ್ತಮ ಅಂಕ ಗಳಿಸಿದ ಸ್ನೇಹ, ದೀಪಿಕಾ ಗೌಡ, ವೈಷ್ಣವಿ, ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ದಿವ್ಯ, ವರ್ಷಿತ, ನಿಶ್ಚಿತ, ನಿಸರ್ಗ, ಮಾನಸ, ಕಾವ್ಯ, ಅಶ್ವಿನಿ, ಮಂಜುನಾಥ್ ಮತ್ತಿತರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಆರ್.ಎಸ್.ಶಿವರಾಮೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ನಾಗೇಗೌಡ, ಮೈಸೂರು ಕೆ.ಆರ್.ಆಸ್ಪತ್ರೆ ಮುಖ್ಯ ಅಧೀಕ್ಷಕ ಡಾ.ಎಸ್.ಚಂದ್ರಶೇಖರ್, ಮಾಜಿ ಶಾಸಕ ಬಿ.ಪ್ರಕಾಶ್, ಜಿಪಂ ಸದಸ್ಯ ಬಿ.ಎಲ್.ದೇವ ರಾಜು, ತಾಪಂ ಸದಸ್ಯ ನಿಂಗೇಗೌಡ, ಕೆ.ಟಿ.ಚಂದ್ರೇಗೌಡ, ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಕಾರ್ಯದರ್ಶಿ ರವಿಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ನಾಗರಾಜು, ಟಿಎಪಿಎಂಎಸ್ ಅಧ್ಯಕ್ಷ ಎ.ಎಸ್.ಶ್ರೀಧರ್, ತಾಲೂಕು ರೈತ ಸಂಘದ ಅಧ್ಯಕ್ಷ ಶಂಕರ್, ತಾಲೂಕು ಒಕ್ಕಲಿಗರ ಸಂಘದ ಉಪಾ ಧ್ಯಕ್ಷ ಕೆ.ಟಿ.ತಿಮ್ಮೇಗೌಡ, ಪ್ರಧಾನ ಕಾರ್ಯದರ್ಶಿ ಮರಡಹಳ್ಳಿ ನಾಗೇಗೌಡ ಸೇರಿದಂತೆ ಮತ್ತಿತರರಿದ್ದರು.

Translate »