ಗಾಂಧೀಜಿಯನ್ನು ಎಷ್ಟರ  ಮಟ್ಟಿಗೆ ಸ್ಮರಿಸಿಕೊಳ್ಳುತ್ತಿದ್ದೇವೆ?
ಮೈಸೂರು

ಗಾಂಧೀಜಿಯನ್ನು ಎಷ್ಟರ ಮಟ್ಟಿಗೆ ಸ್ಮರಿಸಿಕೊಳ್ಳುತ್ತಿದ್ದೇವೆ?

January 31, 2020

ಮೈಸೂರು: ದೇಶದಲ್ಲಿ ಗಾಂಧೀಜಿಯವರನ್ನು ನಾವು ಎಷ್ಟರಮಟ್ಟಿಗೆ ಸ್ಮರಿಸಿ ಕೊಳ್ಳುತ್ತಿದ್ದೇವೆ ಎಂಬುದನ್ನು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳುವ ಅಗತ್ಯವಿದೆ ಎಂದು ಮಾಜಿ ವಿಧಾನ ಸಭಾಧ್ಯಕ್ಷ ಕೃಷ್ಣ ಅಭಿಪ್ರಾಯಪಟ್ಟರು.

ಮೈಸೂರಿನ ಮಾನಸಗಂಗೋತ್ರಿ ಗಾಂಧಿ ಭವನ ದಲ್ಲಿ ಗಾಂಧಿ ಅಧ್ಯಯನ ಕೇಂದ್ರ ಮತ್ತು ವಾಣಿಜ್ಯ ಶಾಸ್ತ್ರ ಅಧ್ಯಯನ ವಿಭಾಗ ಜಂಟಿಯಾಗಿ ಆಯೋಜಿ ಸಿದ್ದ 72ನೇ ಸರ್ವೋದÀಯ ದಿನಾಚರಣೆ ಕಾರ್ಯ ಕ್ರಮದಲ್ಲಿ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರ ವೇರಿಸಿ ಮಾತನಾಡಿದರು. ಇತ್ತೀಚಿನ ಯುವಕರಿಗೆ ಗಾಂಧಿ ಬಗ್ಗೆಯಾಗಲೀ, ದೇಶದ ಬಗ್ಗೆಯಾಗಲೀ ಸದಭಿಪ್ರಾಯವಿಲ್ಲದಿರುವ ಬಗ್ಗೆ ಬೇಸರ ವ್ಯಕ್ತಪಡಿ ಸಿದ ಅವರು, ನಮ್ಮ ಸಮಾಜದಲ್ಲಿ ಯಾವ ವೃತ್ತಿಯೂ ಶ್ರೇಷ್ಠವೂ ಅಲ್ಲ, ಕೀಳೂ ಅಲ್ಲ. ಕೌಶಲ್ಯ ಉಪಯೋಗಿಸಿ ನಾವು ದುಡಿದು ತಿನ್ನಬೇಕು ಎಂದು ಪ್ರತಿಪಾದಿಸಿದ ಅವರು ಗಾಂಧಿ ಮಾರ್ಗ ದಲ್ಲಿ ನಡೆಯುವುದು ಅಗತ್ಯ. ನಾವು ದುಡಿದು ನಮಗೆಷ್ಟು ಬೇಕೋ ಅಷ್ಟನ್ನು ಮಾತ್ರ ತಿಂದು ಬದುಕಬೇಕು ಎಂದು ತಿಳಿಸಿದರು.

ಯಂತ್ರ ಸಂಸ್ಕøತಿಯನ್ನು ವಿರೋಧಿಸಿದ್ದ ಗಾಂಧಿ, ಅದು ನಮ್ಮನ್ನು ಗುಲಾಮರನ್ನಾಗಿಸುತ್ತದೆ ಎಂದು ಹೇಳಿದ್ದರು. ಯಂತ್ರಗಳು ಉದ್ಯೋಗವನ್ನು ಕಸಿದು ಕೊಳ್ಳುತ್ತಿವೆ ಎಂದರು. ಬ್ರಿಟಿಷರನ್ನು ವಿರೋಧಿಸುವ ಜೊತೆಗೆ ಆಧುನಿಕ ನಾಗರಿಕತೆಯನ್ನೂ ಗಾಂಧೀಜಿ ವಿರೋಧಿಸಲು ಹೇಳಿದ್ದನ್ನು ಸ್ಮರಿಸಿದರು.

ಯುದ್ಧ ವಿಮಾನಗಳ ಬದಲು ಪರಸ್ಪರ ಪ್ರೀತಿ ಬೇಕು: ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಆರ್.ಶಿವಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ವಿಶ್ವಕ್ಕೆ ಬೇಕಾಗಿರುವುದು ದೇಶ ದೇಶಗಳ ನಡುವೆ ಸಂಘರ್ಷ ಉಂಟು ಮಾಡುವ ಬಾಂಬ್, ಟ್ಯಾಂಕರ್, ಯುದ್ಧ ವಿಮಾನಗಳಲ್ಲ. ಮನುಷ್ಯ-ಮನುಷ್ಯರ ನಡುವೆ ಸಂಬಂಧ ಬೆಸೆ ಯುವ ಪ್ರೀತಿ, ವಿಶ್ವಾಸ ಎಂದು ಅಭಿಪ್ರಾಯಪಟ್ಟರು.

ಯುದ್ಧಗಳು ದೇಶ ಮತ್ತು ಜನರ ನಡುವಿನ ಸಂಪರ್ಕವನ್ನು ಕಡಿದು ಹಾಕುತ್ತವೆ. ಆದರೆ ಗಾಂಧಿ ಯವರು ಹೇಳಿಕೊಟ್ಟ ಮಾರ್ಗದಲ್ಲಿ ಪ್ರೀತಿ, ತಾಳ್ಮೆ, ಅಂತರ್ಧರ್ಮೀಯ ಸಹಿಷ್ಣುತೆಯನ್ನು ನಾವು ಅಳವಡಿಸಿಕೊಳ್ಳಬೇಕಿದೆ. ಗಾಂಧಿ ಮಾರ್ಗ ಅನು ಸರಿಸಿದರೆ ವಿಶ್ವಾದ್ಯಂತ ಶಾಂತಿ ನೆಲೆಸುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಅಶೋಕಪುರಂನ ಹಿರಿಯ ಪೌರಕಾರ್ಮಿಕ ಮಹಿಳೆ ರತ್ನಮ್ಮ ಅವ ರನ್ನು ಸನ್ಮಾನಿಸಲಾಯಿತು. ಗಾಂಧಿ ಭವನ ನಿರ್ದೇ ಶಕ ಪ್ರೊ. ಎಂ.ಎಸ್.ಶೇಖರ್, ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗದ ಕುಮಾರಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »