ಸರ್ವೋದಯ ದಿನ: ಸ್ವಾತಂತ್ರ್ಯ ಹೋರಾಟಗಾರರಿಂದ ಗಾಂಧಿ ಸ್ಮರಣೆ
ಮೈಸೂರು

ಸರ್ವೋದಯ ದಿನ: ಸ್ವಾತಂತ್ರ್ಯ ಹೋರಾಟಗಾರರಿಂದ ಗಾಂಧಿ ಸ್ಮರಣೆ

January 31, 2020

ಮೈಸೂರು: ಸರ್ವೋದಯ ದಿನದ ಅಂಗವಾಗಿ ಮೈಸೂರು ಜಿಲ್ಲೆ ಮತ್ತು ನಗರ ಸ್ವಾತಂತ್ರ್ಯ ಹೋರಾಟಗಾರರ ಸಂಘದ ವತಿಯಿಂದ ಗುರುವಾರ ಮೈಸೂರಿನ ಸುಬ್ಬರಾಯನಕೆರೆ ಸ್ವಾತಂತ್ರ್ಯ ಹೋರಾಟ ಗಾರರ ಉದ್ಯಾನವನದಲ್ಲಿ ಗಾಂಧಿ ಪುತ್ಥಳಿಗೆ ಪುಷ್ಪಾ ರ್ಚನೆ, ಮೌನಾಚರಣೆ ಮೂಲಕ ಗೌರವ ಸಲ್ಲಿಸಿದರು.

ಸಂಘದ ಅಧ್ಯಕ್ಷ ಡಾ.ಎಂ.ಜಿ.ಕೃಷ್ಣಮೂರ್ತಿ, ಮೈಸೂರು ನಗರಪಾಲಿಕೆ ಸದಸ್ಯೆ ಪ್ರಮೀಳಾ ಭರತ್ ಅವರು ಗಾಂಧಿ ಪುತ್ಥಳಿಗೆ ಪುಷ್ಪಾರ್ಚನೆ ನೆರವೇರಿಸಿದರು. ಬಳಿಕ ಎರಡು ನಿಮಿಷ ಮೌನಾಚರಣೆ ಮೂಲಕ ಗಾಂಧೀಜಿಯವರಿಗೆ ಗೌರವ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಡಾ. ಎಂ.ಜಿ.ಕೃಷ್ಣಮೂರ್ತಿ, ಗಾಂಧಿ ಬದುಕು, ಹೋರಾಟ, ತ್ಯಾಗವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಜೊತೆಗೆ ಸ್ವಾತಂತ್ರ್ಯಕ್ಕಾಗಿ ತಮ್ಮ ಚಳವಳಿ ದಿನಗಳನ್ನು ಸ್ಮರಿಸಿದರು.

ಮೈಸೂರು ಮಹಾನಗರಪಾಲಿಕೆ ಸದಸ್ಯೆ ಪ್ರಮೀಳಾ ಭರತ್ ಮಾತನಾಡಿ, ನಾವು ಗಾಂಧಿ ಜೀವಿಸಿದ್ದ ಕಾಲ ದಲ್ಲಿ ಇಲ್ಲದೇ ಹೋಗಿದ್ದರೂ, ಇಂದು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರು ನಮ್ಮೊಂ ದಿಗಿದ್ದಾರೆ ಎಂಬುದೇ ಹೆಮ್ಮೆ ಪಡುವ ವಿಷಯ. ವಿದ್ಯಾರ್ಥಿಗಳು ಗಾಂಧಿ ಮಾರ್ಗದಲ್ಲಿ ನಡೆದು, ದೇಶ ಪ್ರೇಮ, ಪರಿಸರ ಪ್ರೇಮವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೃಷ್ಣರಾಜಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇ ಜಿನ ಇತಿಹಾಸ ವಿಭಾಗದ 35ಕ್ಕೂ ಹೆಚ್ಚು ವಿದ್ಯಾರ್ಥಿ ಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ, ಸ್ವಾತಂತ್ರ್ಯ ಹೋರಾಟಗಾರರನ್ನು ನೋಡಿ, ಅವರ ಹೋರಾಟದ ಮಾತುಗಳನ್ನು ಕೇಳಿದರು. ಗಾಂಧಿ ಮಾರ್ಗದಲ್ಲಿ ನಡೆಯುವ ಪ್ರಮಾಣ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಕಾರ್ಯದರ್ಶಿ ಪ್ರೊ.ಹೆಚ್.ಎನ್.ಅಶ್ವಥ್ ನಾರಾ ಯಣ, ಉಪಾಧ್ಯಕ್ಷ ವೈ.ಸಿ.ರೇವಣ್ಣ, ಟಿ.ಪುಟ್ಟಣ್ಣ, ಬಿ. ಲಿಂಗಯ್ಯ, ಹೆಚ್.ಎನ್.ಚನ್ನಬಸಪ್ಪ, ಕೆಆರ್‍ಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ. ಎ.ಸಿ.ಮಂಜುಳಾ, ಶಾರದಾವಿಲಾಸ ಕಾಲೇಜಿನ ನಿವೃತ್ತ ಪ್ರೊ.ಎ.ಶಶಿಕಲಾ, ರವಿ ಇನ್ನಿತರರು ಉಪಸ್ಥಿತರಿದ್ದರು.

Translate »