ರಾಜಕೀಯ, ಆಧ್ಯಾತ್ಮಿಕವಾಗಿ ಭಾರತದ ಸರ್ವೋತ್ಕೃಷ್ಟ ನಾಯಕರಾಗಿದ್ದ ಗಾಂಧಿ
ಮೈಸೂರು

ರಾಜಕೀಯ, ಆಧ್ಯಾತ್ಮಿಕವಾಗಿ ಭಾರತದ ಸರ್ವೋತ್ಕೃಷ್ಟ ನಾಯಕರಾಗಿದ್ದ ಗಾಂಧಿ

January 31, 2020

ಮೈಸೂರು: ಅಸಹಕಾರ, ಅಹಿಂಸೆ ಮತ್ತು ಶಾಂತಿ ಯುತ ಪ್ರತಿರೋಧವನ್ನು ತಮ್ಮ ಶಸ್ತ್ರ ವನ್ನಾಗಿ ಬಳಸಿದ್ದ ಗಾಂಧಿ, ಭಾರತೀಯ ಸ್ವಾತಂತ್ರ್ಯ ಚಳವಳಿ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಮತ್ತು ಆಧ್ಯಾತ್ಮಿಕ ನಾಯಕರಾಗಿದ್ದರು ಎಂದು ಹಿರಿಯ ಗಾಂಧಿವಾದಿ ಪ್ರೊ.ಕರೀ ಮುದ್ದೀನ್ ಇಂದಿಲ್ಲಿ ಅಭಿಪ್ರಾಯಪಟ್ಟರು.

ಸರ್ವೋದಯ ದಿನಾಚರಣೆ ಅಂಗವಾಗಿ ಸಿದ್ದಾರ್ಥನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಎನ್‍ಎಸ್‍ಎಸ್ ಘಟಕ ಜಂಟಿಯಾಗಿ ಕಾಲೇಜಿನಲ್ಲಿ ಆಯೋಜಿ ಸಿದ್ದ ಗಾಂಧಿ ಸ್ಮರಣೆ ಕಾರ್ಯಕ್ರಮದಲ್ಲಿ ಗಾಂಧಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮಾತನಾಡಿದರು. ಭಾರತದಲ್ಲಿ ಗಾಂಧೀಜಿ ಯವರನ್ನು ಬಾಪೂಜಿ ಎಂದು ಸಂಬೋಧಿಸು ತ್ತಿದ್ದರೆ, ವಿಶ್ವಾದ್ಯಂತ ಮಹಾತ್ಮ ಗಾಂಧಿ ಎಂದು ಚಿರಪರಿಚಿತರಾಗಿದ್ದರು. ವಿದ್ಯಾರ್ಥಿಗಳು ಗಾಂಧಿ ತತ್ವವನ್ನು ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಸಿದ್ದಾರ್ಥನಗರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶು ಪಾಲ ಪ್ರೊ. ಟಿ.ಬಿ.ರವಿಪ್ರಕಾಶ್, ನೆಹರು ಯುವ ಕೇಂದ್ರದ ಜಿಲ್ಲಾ ಯುವ ಜನ ಸಂಯೋಜನಾಧಿಕಾರಿ ಎಸ್.ಸಿದ್ದರಾಮಪ್ಪ, ಕ್ರೆಡಿಟ್ ಐ ನಿರ್ದೇಶಕ ಡಾ. ಎಂ.ಪಿ.ವರ್ಷಾ, ಸಹಾಯಕ ಪ್ರಾಧ್ಯಾಪಕರಾದ ಕೆ.ಎಂ. ಪ್ರಸನ್ನಕುಮಾರ್, ಡಾ.ಪಿ.ಚಂದ್ರಶೇಖರ್, ಡಾ. ಡಿ.ಪುರುಷೋತ್ತಮ್, ಲೋಕೇಶ್, ಶ್ರೀನೀನಾಯಕ್, ಮಹೇಶ್, ನೆಹರು ಯುವ ಕೇಂದ್ರದ ಲೆಕ್ಕಾಧಿಕಾರಿ ಚಿನ್ನಗಿರಿಗೌಡ, ಸಹಾ ಯಕ ಯುವ ಸಂಯೋಜಕ ಹಿರೇಮಠ ಇನ್ನಿತರರು ಉಪಸ್ಥಿತರಿದ್ದರು.

Translate »