ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ. ಹರೀಶ್‍ಗೌಡರಿಗೆ ಹುಟ್ಟುಹಬ್ಬದ ಸಂಭ್ರಮ
ಮೈಸೂರು

ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ. ಹರೀಶ್‍ಗೌಡರಿಗೆ ಹುಟ್ಟುಹಬ್ಬದ ಸಂಭ್ರಮ

February 1, 2020

ಮೈಸೂರು, ಜ.31- ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‍ಗೌಡ ಅವರು ಧಾರ್ಮಿಕ ಹಾಗೂ ಸಾಮಾಜಿಕ ಕೈಂಕರ್ಯ ಗಳ ಮೂಲಕ ತಮ್ಮ 33ನೇ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿ ಕೊಂಡರು. ಕುಟುಂಬ ಸಮೇತ ಚಾಮುಂಡಿ ಬೆಟ್ಟಕ್ಕೆ ತೆರಳಿ, ತಾಯಿ ಚಾಮುಂಡೇಶ್ವರಿಗೆ ವಿಶೇಷ ಸಲ್ಲಿಸಿದ ಬಳಿಕ ಬೆಟ್ಟದಲ್ಲೇ ಸ್ಥಳೀ ಯರು ಆಯೋ ಜಿಸಿದ್ದ ಸಂಭ್ರಮಾಚರಣೆ ಯಲ್ಲಿ ಭಾಗಿಯಾದರು. ಬಳಿಕ ಸಮೀಪದ ಸರ್ಕಾರಿ ಉತ್ತನಹಳ್ಳಿ ಶ್ರೀ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಿಯ ದರ್ಶನ ಪಡೆದರು.

ಎಂಸಿಡಿಸಿಸಿ ಬ್ಯಾಂಕ್‍ನಲ್ಲಿ ಸಿಬ್ಬಂದಿ ವತಿಯಿಂದ ಅಧ್ಯಕ್ಷ ಜಿ.ಡಿ.ಹರೀಶ್‍ಗೌಡರ ಹುಟ್ಟು ಹಬ್ಬ ಆಚರಿಸಲಾಯಿತು. ಹರೀಶ್ ಗೌಡ ಕೇಕ್ ಕತ್ತರಿಸಿ, ಸಿಹಿ ಹಂಚಿ, ಸಂಭ್ರಮ ವ್ಯಕ್ತಪಡಿಸಿದರು. ಬೆಳವಾಡಿ ಗ್ರಾಮದಲ್ಲಿ ಸ್ಥಳೀಯ ಕಾರ್ಯಕರ್ತರು, ಹಾಗೂ ಅಭಿಮಾನಿಗಳನ್ನು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಕೃತಜ್ಞತೆ ಸಲ್ಲಿಸಿದರು. ಹುಣಸೂರಿನ ಸನ್ ಶೈನ್ ಅಕಾಡೆಮಿಯ ಪೂರ್ವ ಪ್ರಾಥಮಿಕ ಮತ್ತು ಕಿರಿಯ ಪ್ರಾಥಮಿಕ ಶಾಲೆ ಮಕ್ಕಳೊಂದಿಗೆ ಕೇಕ್ ಕಟ್ ಮಾಡಿ, ಸಿಹಿ ಹಂಚಿದರು.

ಜಿ.ಡಿ.ಹರೀಶ್‍ಗೌಡರ ಅಭಿಮಾನಿಗಳು ವಿವಿಧೆಡೆ ರಕ್ತದಾನ ಶಿಬಿರ, ಬಡವರಿಗೆ ಅಗತ್ಯ ವಸ್ತುಗಳ ವಿತರಣೆ, ರೋಗಿಗಳಿಗೆ ಹಣ್ಣು-ಹಂಪಲು ಹಂಚುವುದು ಸೇರಿ ದಂತೆ ವಿವಿಧ ಸಾಮಾಜಿಕ ಕಾರ್ಯಕ್ರಮ ಗಳ ಮೂಲಕ ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿದರು.

ಚಾಮುಂಡೇಶ್ವರಿ, ಹುಣಸೂರು ಕ್ಷೇತ್ರ ಸೇರಿದಂತೆ ವಿವಿಧೆಡೆಯಿಂದ ನೂರಾರು ಮಂದಿ ಮೈಸೂರು ವಿಜಯನಗರದಲ್ಲಿ ರುವ ನಿವಾಸಕ್ಕೆ ಭೇಟಿ ನೀಡಿ, ಹರೀಶ್ ಗೌಡರಿಗೆ ಶುಭಾಶಯ ಕೋರಿದರು. ಶುಕ್ರವಾರ ಮುಂಜಾನೆಯಿಂದಲೇ ಅವರ ನಿವಾಸದ ಮುಂದೆ ಭಾರೀ ಕಟೌಟ್‍ಗಳು ರಾರಾಜಿಸುತ್ತಿದ್ದವು. ಹುಣ ಸೂರು ರಸ್ತೆ ಯಲ್ಲಿ ಕಿಲೋಮೀಟರ್‍ಗಳು ಹರೀಶ್ ಗೌಡರ ಫ್ಲೆಕ್ಸ್, ಬ್ಯಾನರ್‍ಗಳನ್ನು ಅಳವ ಡಿಸಲಾಗಿತ್ತು. ಅವರ ನಿವಾಸದ ಮುಂದೆ ಬೆಳಿಗ್ಗೆಯಿಂದಲೇ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು.

ಹುಟ್ಟು ಹಬ್ಬದ ಸಂಭ್ರಮದಲ್ಲಿ ಬಿಡುವು ಮಾಡಿಕೊಂಡು ಹರೀಶ್‍ಗೌಡರು, ತಮ್ಮ ಪೂರ್ವ ನಿಗದಿತ ಕಾರ್ಯಕ್ರಮಗಳಿಗೆ ಹಾಜ ರಾದರು. ಆದರೂ ಅವರ ಅಭಿಮಾನಿಗಳು ಮನೆ ಬಳಿಯೇ ಕಾದು ಕುಳಿತು ಶುಭಾ ಶಯ ಕೋರಿದರು. ಭಾರೀ ಹಾರ ಗಳನ್ನು ಹಾಕಿ, ಸಿಹಿ ತಿನಿಸಿ, ಸಂತೋಷ ಪಟ್ಟರು. ಬಂದಂತಹ ಅಭಿಮಾನಿಗಳು ಹಾಗೂ ಹಿತೈಷಿ ಗಳಿಗೆ ಅನುಕೂಲ ಕಲ್ಪಿಸಲು ಮನೆ ಪಕ್ಕ ದಲ್ಲೇ ಭಾರೀ ಪೆಂಡಾಲ್ ಹಾಕಲಾಗಿತ್ತು. ಬಂದವರಿಗೆ ನೆರಳು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಯನ್ನೂ ಮಾಡಲಾಗಿತ್ತು. ಶಾಸಕ ಜಿ.ಟಿ. ದೇವೇಗೌಡರು ಬೆಳಿಗ್ಗೆ ಪುತ್ರನೊಂದಿಗೆ ಹಲವು ಧಾರ್ಮಿಕ ಕೈಂಕರ್ಯಗಳಲ್ಲಿ ಪಾಲ್ಗೊಂಡ ನಂತರ, ಕ್ಷೇತ್ರದ ಜನರ ಅಹವಾಲು ಸ್ವೀಕರಿಸಲು ಪೂರ್ವ ನಿಗದಿತ ಕಾರ್ಯಕ್ರಮದಂತೆ ತೆರಳಿದರು.

Translate »