Tag: K.R. Pet

ಜಿಲ್ಲಾದ್ಯಂತ ಸಡಗರ, ಭಕ್ತಿಭಾವದ ರಂಜಾನ್ ಆಚರಣೆ ಪರಿಸರ ಪ್ರೇಮಿಯ ಹಸಿರು ರಂಜಾನ್ ಆಚರಣೆ…!
ಮಂಡ್ಯ

ಜಿಲ್ಲಾದ್ಯಂತ ಸಡಗರ, ಭಕ್ತಿಭಾವದ ರಂಜಾನ್ ಆಚರಣೆ ಪರಿಸರ ಪ್ರೇಮಿಯ ಹಸಿರು ರಂಜಾನ್ ಆಚರಣೆ…!

June 17, 2018

ಮಂಡ್ಯ:  ಜಿಲ್ಲಾದ್ಯಂತ ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ ಹಬ್ಬವನ್ನು ಶನಿವಾರ ಸಡಗರ ಸಂಭ್ರಮದಿಂದ ಆಚರಿಸಿದರು. ಜಿಲ್ಲೆಯ ಮಂಡ್ಯ, ಶ್ರೀರಂಗಪಟ್ಟಣ, ಮದ್ದೂರು, ಮಳವಳ್ಳಿ, ನಾಗಮಂಗಲ, ಪಾಂಡವಪುರ, ಕೆ.ಆರ್.ಪೇಟೆ ತಾಲೂಕುಗಳಲ್ಲಿ ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನು ಆಚರಿಸಿದರು. ಮಂಡ್ಯ: ಮಂಡ್ಯ ನಗರದ ಸಂತೇಮಾಳದ ಬಳಿಯ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಮಾಡಿದರು. ಪುಟ್ಟ ಪುಟ್ಟ ಮಕ್ಕಳು ಸಹ ಪ್ರಾರ್ಥನೆಯಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದರು. ಸಾಮೂಹಿಕ ಪ್ರಾರ್ಥನೆ ಬಳಿಕ ಯುವಕರು, ಹಿರಿಯರು, ಕಿರಿಯರು ಮತ್ತು ಮಕ್ಕಳು…

11 ಹಸು, ತೆಂಗಿನ ಕಾಯಿ ರಾಶಿ ಕಳವು ಪ್ರಕರಣ ದಾಖಲಿಸಿಕೊಳ್ಳದ ಪೊಲೀಸರು, ಎಸ್ಪಿಗೆ ದೂರು
ಮಂಡ್ಯ

11 ಹಸು, ತೆಂಗಿನ ಕಾಯಿ ರಾಶಿ ಕಳವು ಪ್ರಕರಣ ದಾಖಲಿಸಿಕೊಳ್ಳದ ಪೊಲೀಸರು, ಎಸ್ಪಿಗೆ ದೂರು

June 17, 2018

ಮಂಡ್ಯ: ಕೆ.ಆರ್.ಪೇಟೆ ತಾಲೂಕಿನ ಬಿ.ಬಿ.ಕಾವಲು ಬಳಿಯ ತೋಟದ ಮನೆಗೆ ಗುಂಪೊಂದು ದಾಳಿ ನಡೆಸಿ ಕೊಟ್ಟಿಗೆಯಲ್ಲಿ ಕಟ್ಟಿದ್ದ 5ಲಕ್ಷ ರೂ. ಮೌಲ್ಯದ 11 ಹಸುಗಳು ಹಾಗೂ 50ಸಾವಿರ ರೂ. ಮೌಲ್ಯದ ತೆಂಗಿನ ಕಾಯಿ ರಾಶಿಯನ್ನು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಗುರುವಾರ ರಾತ್ರಿ ನಡೆದಿದೆ. ಬಿ.ಬಿ.ಕಾವಲಿನ ವೆಂಕಟೇಗೌಡ ಮತ್ತು ಸುಬ್ಬೇಗೌಡರಿಗೆ ಸೇರಿದ ತೋಟದ ಮನೆಯಲ್ಲಿ ಅವರ ಸೋದರ ಸಂಬಂಧಿ ಪ್ರವೀಣ್ ಮತ್ತು ಧರ್ಮಪ್ಪ ಮಲಗಿರುವಾಗ ಜೂ.14ರಂದು ರಾತ್ರಿ ಸುಮಾರು 11ಗಂಟೆ ವೇಳೆ ಪಟ್ಟಣದ ದೀಪಕ್ ಎಂಬಾತ ಏಳೆಂಟು ಮಂದಿಯೊಂದಿಗೆ…

ರೈತರ ಜೀವನಾಡಿ ಮನ್‍ಮುಲ್ ಬಲಪಡಿಸಿ
ಮಂಡ್ಯ

ರೈತರ ಜೀವನಾಡಿ ಮನ್‍ಮುಲ್ ಬಲಪಡಿಸಿ

June 17, 2018

ಕೆ.ಆರ್.ಪೇಟೆ: ತಾಲೂಕಿನ ಅಂಚನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡವನ್ನು ಮನ್‍ಮುಲ್ ನಿರ್ದೇಶಕ ಅಂಬರೀಶ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಗುಣಮಟ್ಟದ ಹಾಲು ಪೂರೈಸುವ ಮೂಲಕ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಗಟ್ಟಿಗೊಳಿಸಿ, ಜಿಲ್ಲೆಯ ರೈತರ ಜೀವನಾಡಿ ಮಂಡ್ಯ ಜಿಲ್ಲಾ ಹಾಲು ಒಕ್ಕೂಟವನ್ನು ಬಲಪಡಿಸಬೇಕು. ಹಾಲು ಉತ್ಪಾದಕರ ಸಂಘಗಳು ಮತ್ತು ಸೊಸೈಟಿಗಳು ರೈತರ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತಿವೆ. ಪ್ರತಿ ವಾರವೂ ರೈತರ ಮನೆ ಬಾಗಿಲಿಗೆ ಹಾಲಿನ ಹಣ ನೀಡುವ ಮೂಲಕ ರೈತರಿಗೆ…

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವಿಪ್ರ ಬಂಧುಗಳ ಕೊಡುಗೆ ಅಪಾರ
ಮಂಡ್ಯ

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವಿಪ್ರ ಬಂಧುಗಳ ಕೊಡುಗೆ ಅಪಾರ

June 16, 2018

ಕೆ.ಆರ್.ಪೇಟೆ: ವಿಪ್ರ ಬಾಂಧವರು ಭಾರತೀಯ ಸಂಸ್ಕೃತಿ, ಪರಂಪರೆ ಹಾಗೂ ಧರ್ಮ ಉಳಿಸುವ ಕಾಯಕವನ್ನು ಶ್ರದ್ಧಾ ಭಕ್ತಿಯಿಂದ ಮಾಡುವ ಮೂಲಕ ಧಾರ್ಮಿಕ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಶಾಸಕ ನಾರಾಯಣಗೌಡ ಹೇಳಿದರು. ಪಟ್ಟಣದ ನಾಗಮಂಗಲ ರಸ್ತೆಯಲ್ಲಿ ರುವ ರಾಮ ಮಂದಿರದಲ್ಲಿ ತಾಲೂಕು ಬ್ರಾಹ್ಮಣ ಮಹಾಸಭಾದ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭ, ಶ್ರೀ ರಾಘವೇಂದ್ರಸ್ವಾಮಿ ಧ್ಯಾನ ಮಂದಿರ ಹಾಗೂ ವಿಪ್ರ ವಿದ್ಯಾರ್ಥಿಗಳ ಹಾಸ್ಟೆಲ್ ಕಟ್ಟಡದ ನಿರ್ಮಾಣಕ್ಕೆ ಆಯೋಜಿಸಿದ್ದ ಸಂಕಲ್ಪ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಆಚಾರ…

ಪತ್ನಿ ಕೊಂದ ಪತಿಗೆ ಜೀವಾವಧಿ ಶಿಕ್ಷೆ
ಮಂಡ್ಯ

ಪತ್ನಿ ಕೊಂದ ಪತಿಗೆ ಜೀವಾವಧಿ ಶಿಕ್ಷೆ

June 15, 2018

ಕೆ.ಆರ್.ಪೇಟೆ:  ಕಳೆದ 2 ವರ್ಷಗಳ ಹಿಂದೆ ತನ್ನ ಪತ್ನಿ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿ ಹತ್ಯೆ ಮಾಡಿದ್ದ ಆರೋಪಿಗೆ ಮಂಡ್ಯದ 3ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ತೀರ್ಪು ನೀಡಿದೆ. ತಾಲೂಕಿನ ಮಡುವಿನಕೋಡಿ ಗ್ರಾಮದ ಜವರೇ ಗೌಡರ ಮಗ ಸತೀಶ್(40) ಜೀವಾವಧಿ ಶಿಕ್ಷೆಗೆ ಗುರಿಯಾದವರು. ಘಟನೆ ವಿವರ: 2016 ಮಾ.19ರಂದು ಮಧ್ಯಾಹ್ನ 3ಗಂಟೆ ವೇಳೆ ಮದ್ಯ ಸೇವನೆಗೆ ಹಣ ನೀಡಲಿಲ್ಲವೆಂದು ಸತೀಶ ತನ್ನ ಪತ್ನಿ ರೇಣುಕಾಳೊಂದಿಗೆ ಜಗಳ ತೆಗೆದು ದೈಹಿಕ ಮತ್ತು ಮಾನಸಿಕ…

ಹಿಂದೂ-ಮುಸ್ಲಿಮರು ಪರಸ್ಪರ ಸೌಹಾರ್ದಯುತ ಜೀವನ ನಡೆಸಿ
ಮಂಡ್ಯ

ಹಿಂದೂ-ಮುಸ್ಲಿಮರು ಪರಸ್ಪರ ಸೌಹಾರ್ದಯುತ ಜೀವನ ನಡೆಸಿ

June 15, 2018

ಕೆ.ಆರ್.ಪೇಟೆ:  ಹಿಂದೂ-ಮುಸ್ಲಿಮರು ಪರಸ್ಪರ ಸೌಹಾರ್ದಯುತ ಜೀವನ ನಡೆಸಬೇಕು. ಯಾವುದೇ ಕಾರಣಕ್ಕೂ ದ್ವೇಷ-ಅಸೂಯೆ ಇಟ್ಟುಕೊಳ್ಳಬಾರದು ಎಂದು ತಹಶೀಲ್ದಾರ್ ಗುರುಸಿದ್ದಯ್ಯ ಹಿರೇಮಠ್ ತಿಳಿಸಿದರು. ಪಟ್ಟಣದ ತಾಲೂಕು ಕಚೇರಿ ಸಭಾಂಗಣ ದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಕರೆಯ ಲಾಗಿದ್ದ ಮುಸಲ್ಮಾನ್ ಬಾಂಧವರು ಮತ್ತು ವಿವಿಧ ಸಂಘ ಸಂಸ್ಥೆಗಳ ಶಾಂತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿಯೊಬ್ಬ ವ್ಯಕ್ತಿ ತಮ್ಮ ಧರ್ಮ ಪ್ರೀತಿ ಸುವ ರೀತಿ ಅನ್ಯ ಧರ್ಮ ಮತ್ತು ಇತರೆ ಧರ್ಮದ ಬಂಧುಗಳನ್ನು ಗೌರವಿಸುವ ಉದಾರ ಗುಣ ಬೆಳೆಸಿಕೊಳ್ಳಬೇಕು. ಮುಸ್ಲಿಂ ಬಂಧುಗಳು…

51 ಅಡಿ ಎತ್ತರದ ಆಂಜನೇಯಸ್ವಾಮಿ ವಿಗ್ರಹ ಲೋಕಾರ್ಪಣೆಗೆ ಸಜ್ಜು
ಮಂಡ್ಯ

51 ಅಡಿ ಎತ್ತರದ ಆಂಜನೇಯಸ್ವಾಮಿ ವಿಗ್ರಹ ಲೋಕಾರ್ಪಣೆಗೆ ಸಜ್ಜು

June 14, 2018

ಕೆ.ಆರ್.ಪೇಟೆ: ಪಟ್ಟಣದ ಕೆರೆ ಬೀದಿಯ ಮುಕ್ಕಟ್ಟೆ ಚೌಕದ ಬಳಿ ಶ್ರೀಕಾರ್ಯಸಿದ್ಧಿ ಆಂಜನೇಯಸ್ವಾಮಿ ದೇವ ಸ್ಥಾನ ಟ್ರಸ್ಟ್ ವತಿಯಿಂದ ನೂತನವಾಗಿ 30ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ 51 ಅಡಿ ಎತ್ತರದ ಆಂಜನೇಯಸ್ವಾಮಿ ವಿಗ್ರಹ ಲೋಕಾರ್ಪಣೆಗೆ ಸಜ್ಜುಗೊಂಡಿದೆ. ಜೂ. 15, 16, 17ರಂದು ಧಾರ್ಮಿಕ ವಿಶೇಷ ಪೂಜಾ ಕೈಂಕರ್ಯಗಳು ಜರುಗ ಲಿದೆ. ಕೊನೆಯ ದಿನದಂದು ಮಹಾ ಮಂಗಳಾ ರತಿ ಆದ ನಂತರ ದೇವಸ್ಥಾನಕ್ಕೆ ಭೇಟಿ ನೀಡುವ ಎಲ್ಲರಿಗೂ ಮಹಾ ಮಸ್ತಕಾಭಿಷೇಕದಲ್ಲಿ ಪಾಲ್ಗೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಅಭಿಷೇಕ ಮಾಡಲು ವಿಶೇಷ ಮೆಟ್ಟಿಲು…

ಬಿಇಓ ಕಚೇರಿ ಮುಂಭಾಗ ಕರವೇ ಪ್ರತಿಭಟನೆ
ಮಂಡ್ಯ

ಬಿಇಓ ಕಚೇರಿ ಮುಂಭಾಗ ಕರವೇ ಪ್ರತಿಭಟನೆ

June 14, 2018

ಕೆ.ಆರ್.ಪೇಟೆ: ತಾಲೂಕಿನ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಇಲಾಖೆಯ ಕಾನೂನು ಮೀರಿ ಹೆಚ್ಚಿನ ಡೊನೇಷನ್ ಪಡೆಯಲಾಗುತ್ತಿದ್ದು, ಈ ಬಗ್ಗೆ ಕ್ಷೇತ್ರ ಶಿಕ್ಷಣಾ ಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಪಟ್ಟಣದಲ್ಲಿ ಬುಧ ವಾರ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‍ಶೆಟ್ಟಿ ಬಣ)ದಿಂದ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಮುಂಭಾಗ ವೇದಿಕೆಯ ತಾಲೂಕು ಘಟಕದ ಅಧ್ಯಕ್ಷ ಆರ್. ಅಂಜನ್ ಮತ್ತು ಗೌರವಾ ಧ್ಯಕ್ಷ ಟಿ.ವೈ. ಆನಂದ್ ಅವರ ನೇತೃತ್ವದಲ್ಲಿ ಸಮಾವೇಶ ಗೊಂಡ ಕಾರ್ಯಕರ್ತರು ಖಾಸಗಿ ಶಾಲೆ…

ಚಿರತೆ ದಾಳಿಗೆ ಎತ್ತು ಬಲಿ
ಮಂಡ್ಯ

ಚಿರತೆ ದಾಳಿಗೆ ಎತ್ತು ಬಲಿ

June 9, 2018

ಕೆ.ಆರ್.ಪೇಟೆ: ಚಿರತೆ ದಾಳಿಗೆ ಎತ್ತು ಬಲಿಯಾಗಿರುವ ಘಟನೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿ ಗದ್ದೆಹೊಸೂರು ಗ್ರಾಮದ ಹೊರವಲಯದ ತೋಟದ ಬಳಿ ನಡೆದಿದೆ. ಗ್ರಾಮದ ನಿವಾಸಿ ನಾಗಣ್ಣ ಅವರಿಗೆ ಸೇರಿದ ಎತ್ತು ಚಿರತೆ ದಾಳಿಗೆ ಬಲಿಯಾಗಿದ್ದು, ಅವರಿಗೆ ಸುಮಾರು 30ಸಾವಿರ ರೂ. ನಷ್ಟ ಸಂಭವಿಸಿದೆ. ಶುಕ್ರವಾರ ಬೆಳಿಗ್ಗೆ ರೈತ ನಾಗಣ್ಣ ಅವರು ತಮ್ಮ ಎತ್ತಿನಗಾಡಿಯಲ್ಲಿ ತೋಟಕ್ಕೆ ಕಾಯಿ ಕೀಳಲು ಹೋಗಿದ್ದರು. ಈ ವೇಳೆ ತಮ್ಮ ಕಬ್ಬಿನ ಗದ್ದೆ ಬಳಿ ಎತ್ತಿನಗಾಡಿ ನಿಲ್ಲಿಸಿ ಎತ್ತುಗಳನ್ನು ಕಟ್ಟಿ ಕಾಯಿ ಕೀಳಲು ತೋಟದ ಕೊನೆ…

ಮಾದಿಗ ಸಮುದಾಯಕ್ಕೆ ಸಿಗದ ಸಚಿವ ಸ್ಥಾನ: ಪ್ರತಿಭಟನೆ
ಮಂಡ್ಯ

ಮಾದಿಗ ಸಮುದಾಯಕ್ಕೆ ಸಿಗದ ಸಚಿವ ಸ್ಥಾನ: ಪ್ರತಿಭಟನೆ

June 8, 2018

ಕೆ.ಆರ್.ಪೇಟೆ: ಸಮ್ಮಿಶ್ರ ಸರ್ಕಾರದಲ್ಲಿ ಮಾದಿಗ(ಆದಿಜಾಂಬವ) ಸಮುದಾಯದ ನಾಯಕರಿಗೆ ಸಚಿವ ಸ್ಥಾನ ನೀಡದ ಕ್ರಮ ಖಂಡಿಸಿ ತಾಲೂಕು ಮಾದಿಗ ಮೀಸಲಾತಿ ಹೋರಾಟ ಸಮಿತಿ ಹಾಗೂ ಡಾ.ಬಾಬು ಜಗಜೀವನರಾಂ ಸಂಘಟನೆಗಳ ಒಕ್ಕೂಟದ ಸದಸ್ಯರು ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಸಮುದಾಯದ ಕಾಂಗ್ರೆಸ್ ಹಿರಿಯ ನಾಯಕರಾದ ಸಂಸದ ಕೆ.ಹೆಚ್.ಮುನಿಯಪ್ಪ ಪುತ್ರಿ ರೂಪಾ ಶಶಿಧರ್‍ಗೆ ಕಡೇ ಗಳಿಗೆಯಲ್ಲಿ ಸಚಿವ ಸ್ಥಾನ ನೀಡದೇ ವಂಚಿಸಲಾಗಿದೆ. ಹಾಗೆಯೇ ಉತ್ತರ ಕರ್ನಾಟಕ ಭಾಗದ ಆರ್.ಬಿ.ತಿಮ್ಮಾಪೂರ್ ಅಥವಾ ಮೈಸೂರಿನ ಪ್ರಭಾವಿ ನಾಯಕ ಧರ್ಮಸೇನಾ ಅವರಿಗಾದರೂ ಸಚಿವ…

1 2 3 4
Translate »