ಚಿರತೆ ದಾಳಿಗೆ ಎತ್ತು ಬಲಿ
ಮಂಡ್ಯ

ಚಿರತೆ ದಾಳಿಗೆ ಎತ್ತು ಬಲಿ

June 9, 2018

ಕೆ.ಆರ್.ಪೇಟೆ: ಚಿರತೆ ದಾಳಿಗೆ ಎತ್ತು ಬಲಿಯಾಗಿರುವ ಘಟನೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿ ಗದ್ದೆಹೊಸೂರು ಗ್ರಾಮದ ಹೊರವಲಯದ ತೋಟದ ಬಳಿ ನಡೆದಿದೆ. ಗ್ರಾಮದ ನಿವಾಸಿ ನಾಗಣ್ಣ ಅವರಿಗೆ ಸೇರಿದ ಎತ್ತು ಚಿರತೆ ದಾಳಿಗೆ ಬಲಿಯಾಗಿದ್ದು, ಅವರಿಗೆ ಸುಮಾರು 30ಸಾವಿರ ರೂ. ನಷ್ಟ ಸಂಭವಿಸಿದೆ.

ಶುಕ್ರವಾರ ಬೆಳಿಗ್ಗೆ ರೈತ ನಾಗಣ್ಣ ಅವರು ತಮ್ಮ ಎತ್ತಿನಗಾಡಿಯಲ್ಲಿ ತೋಟಕ್ಕೆ ಕಾಯಿ ಕೀಳಲು ಹೋಗಿದ್ದರು. ಈ ವೇಳೆ ತಮ್ಮ ಕಬ್ಬಿನ ಗದ್ದೆ ಬಳಿ ಎತ್ತಿನಗಾಡಿ ನಿಲ್ಲಿಸಿ ಎತ್ತುಗಳನ್ನು ಕಟ್ಟಿ ಕಾಯಿ ಕೀಳಲು ತೋಟದ ಕೊನೆ ಭಾಗಕ್ಕೆ ಹೋಗಿದ್ದ ವೇಳೆ ಚಿರತೆ ಎತ್ತುಗಳ ಮೇಲೆ ದಾಳಿ ಮಾಡಿದೆ. ಈ ವೇಳೆ ಒಂದು ಎತ್ತನ್ನು ಕಬ್ಬಿನ ಗದ್ದೆಗೆ ಎಳೆದೊಯ್ದು ಅದರ ಕತ್ತು ಕಚ್ಚಿರುವ ಚಿರತೆ ಹೊಟ್ಟೆ ಸೀಳಿ ಶೇ.50ರಷ್ಟು ತಿಂದು ಹಾಕಿದೆ. ಈ ವೇಳೆ ಇನ್ನೊಂದು ಎತ್ತಿನ ಚೀರಾಟ ಕೇಳಿ ರೈತ ನಾಗಣ್ಣ ಸ್ಥಳಕ್ಕಾಗಮಿಸುವಷ್ಟರಲ್ಲಿ ಚಿರತೆ ಪರಾರಿಯಾಗಿದೆ.

ಆತಂಕ: ಪದೇ ಪದೇ ಈ ಭಾಗದಲ್ಲಿ ಚಿರತೆಗಳು ಸಾಕು ಪ್ರಾಣ ಗಳ ಮೇಲೆ ದಾಳಿ ನಡೆಸಿ ಕೊಂದು ಹಾಕುತ್ತಿವೆ. ಹಾಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಬೋನಿಟ್ಟು ಕಾರ್ಯಾಚರಣೆ ನಡೆಸಿ ಚಿರತೆಗಳನ್ನು ಹಿಡಿಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Translate »