ಆನ್‍ಲೈನ್‍ನಲ್ಲಿ ಯುವತಿಗೆ 13 ಸಾವಿರ ರೂ. ವಂಚನೆ
ಮಂಡ್ಯ

ಆನ್‍ಲೈನ್‍ನಲ್ಲಿ ಯುವತಿಗೆ 13 ಸಾವಿರ ರೂ. ವಂಚನೆ

June 9, 2018

ಮಂಡ್ಯ: ಬ್ಯಾಂಕ್‍ನವರೆಂದು ಕರೆ ಮಾಡಿ ಆಧಾರ್ ಮತ್ತು ಓಟಿಪಿ ನಂಬರ್ ಪಡೆದು ಯುವತಿ ಯೊಬ್ಬಳ ಖಾತೆ ಯಿಂದ ಆನ್‍ಲೈನ್ ಮೂಲಕ 13 ಸಾವಿರ ರೂ. ಎಗರಿಸಿದ ಘಟನೆ ನಾಗಮಂಗಲದಲ್ಲಿ ನಡೆದಿದೆ.

ನಾಗಮಂಗಲ ತಾಲೂಕಿನ ಕಸುವಿನಹಳ್ಳಿ ಗ್ರಾಮದ ಜ್ಯೋತಿ ಎಂಬ ಯುವತಿಯೇ ವಂಚನೆಗೊಳಗಾದವರು.

ಘಟನೆ ಹಿನ್ನೆಲೆ: ಜ್ಯೋತಿ ಅವರ ಮೊ: 9591821316ಗೆ ರಾಹುಲ್ ಹೆಸರಿನ ವ್ಯಕ್ತಿಯೊಬ್ಬ ಮೊ: 8617802782 ನಿಂದ ಬುಧ ವಾರ ಸಂಜೆ ಹಿಂದಿಯಲ್ಲಿ ಮಾತನಾಡಿದ್ದಾನೆ. ತಾನು ಬ್ಯಾಂಕಿನವ ನೆಂದು ನಿಮ್ಮ ಎಟಿಎಂ ಕಾರ್ಡ್ ರಿನ್ಯೂವಲ್ ಮಾಡಲು ಆಧಾರ್ ನಂಬರ್ ಬೇಕಿದೆ ಎಂದಿದ್ದಾನೆ. ಒಂದೆರಡು ನಿಮಿಷದ ನಂತರ ಮತ್ತೆ ಅದೇ ವ್ಯಕ್ತಿ ಫೋನ್ ಮಾಡಿ, ಓಟಿಪಿ ನಂಬರ್ ಹೇಳಿ ಎಂದು ಪುಸಲಾಯಿಸಿ ಜ್ಯೋತಿ ಅವರಿಂದ ಮಾಹಿತಿ ಪಡೆದು ತಲಾ 4 ಸಾವಿರದಂತೆ 3 ಬಾರಿ ಮತ್ತು ಒಂದು ಬಾರಿ 995 ರೂ.ಗಳನ್ನು ಆಕೆಯ ಖಾತೆಯ ಎಟಿಎಂನಿಂದ ಡ್ರಾ ಮಾಡಿಕೊಂಡಿದ್ದಾನೆ.

ಗುರುವಾರ ಪತ್ರಿಕೆಯೊಂದರಲ್ಲಿ ಆನ್ ಲೈನ್‍ನಲ್ಲಿ ವಂಚನೆಗೊಳಗಾದ ಸುದ್ದಿ ಯೊಂದು ಕಣ ್ಣಗೆ ಬಿದ್ದು ಪೋಷಕರ ಬಳಿ ಈ ವಿಷಯ ಹೇಳಿದ ಯುವತಿ ಜ್ಯೋತಿ, ತನ್ನ ಖಾತೆಯಿಂದ 14 ಸಾವಿರ ರೂ.ಗಳು ಹಿಂಪಡೆದ ಸಂದೇಶ ಮೊಬೈಲ್ ಬಂದಿರು ವುದು ಗೊತ್ತಾಗಿದೆ. ಇದರಿಂದ ಕಂಗಾಲಾದ ಯುವತಿ ಜ್ಯೋತಿ ತಕ್ಷಣವೇ ನಾಗಮಂಗಲದ ಕೆನರಾ ಬ್ಯಾಂಕಿಗೆ ಬಂದು ವ್ಯವಸ್ಥಾಪಕ ಪುರುಷೋತ್ತಮ್‍ಗೆ ದೂರು ನೀಡಿದ್ದಾರೆ. ಅವರೂ ಸಹ ಬೆಸ್ತು ಬಿದ್ದಿದ್ದಾರೆ.

ಬ್ಯಾಂಕ್‍ನವರ ಹೇಳಿಕೆ ಪ್ರಕಾರ ನಾವು ಖಾತೆ ಆರಂಭಿಸುವುದಕ್ಕೆ ಮುಂಚೆಯೇ ನಿಮ್ಮ ಸಂಪೂರ್ಣ ವಿವರ ಪಡೆದುಕೊಂಡಿ ರುತ್ತೇವೆ. ನಾವು ಯಾವುದೇ ಕಾರಣಕ್ಕೂ ಗ್ರಾಹಕರಿಗೆ ಫೋನ್ ಮಾಡುವುದಿಲ್ಲ. ಯಾರಿಗೂ ಖಾತೆ ಮಾಹಿತಿ ನೀಡ ಬಾರದೆಂದು ಬ್ಯಾಂಕಿನಲ್ಲಿ ಪ್ರಕಟಿಸಿದ್ದೇವೆ.

ಆದರೂ ಬೇರೆಯವರ ಎಟಿಎಂನ್ನು ಉಪಯೋಗಿಸುವುದರಿಂದ ಈ ರೀತಿಯ ವಂಚನೆಗಳು ನಡೆಯುವ ಸಾಧ್ಯತೆಯಿದೆ. ಜೊತೆಗೆ ಮಾಹಿತಿ ಕೊರತೆಯಿಂದಾಗಿ ಈ ರೀತಿಯ ಎಟಿಎಂ ವಂಚನೆಗಳು ಹೆಚ್ಚಾ ಗುತ್ತಿದೆ. ಹಾಗಾಗಿ ಅನಾಮಧೇಯರಿಂದ ಬರುವ ಕಾಲ್‍ಗಳಿಗೆ ಯಾವುದೇ ವಿವರ ನೀಡಬಾರದು. ನಾವು ಯಾವುದೇ ಕಾರಣಕ್ಕೂ ಗ್ರಾಹಕರಿಗೆ ಫೋನ್ ಮೂಲಕ ಸಂಪರ್ಕಿ ಸುವುದಿಲ್ಲವೆಂದು ತಿಳಿಸಿದ್ದಾರೆ. ಈ ಸಂಬಂಧ ಪಟ್ಟಣ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »