ಜೀವನ ಸಾರ್ಥಕಕ್ಕೆ ಸಮಾಜ ಸೇವೆ ಅವಶ್ಯ
ಮಂಡ್ಯ

ಜೀವನ ಸಾರ್ಥಕಕ್ಕೆ ಸಮಾಜ ಸೇವೆ ಅವಶ್ಯ

June 9, 2018

ಭಾರತೀನಗರ:  ಮಾನವನ ಜೀವನ ಸಾರ್ಥಕವಾಗಬೇಕಾದರೆ ಸಮಾಜದ ಯಾವ ರಂಗದಲ್ಲಾದರೂ ಸೇವೆ ಸಲ್ಲಿಸ ಬೇಕೆಂದು ಭಾರತೀ ಎಜುಕೇಷನ್ ಟ್ರಸ್ಟ್‍ನ ಕಾರ್ಯಾಧ್ಯಕ್ಷ ಮಧು ಜಿ. ಮಾದೇಗೌಡ ತಿಳಿಸಿದರು.

ಇಲ್ಲಿನ ಭಾರತೀ ಎಜುಕೇಷನ್ ಟ್ರಸ್ಟ್‍ನ ಭಾರತೀ ಕಾಲೇಜಿನ ರಾಸಾಯನಶಾಸ್ತ್ರ ಉಪ ನ್ಯಾಸಕ ಪ್ರೊ.ಎಂ.ಟಿ.ಪುಟ್ಟಸ್ವಾಮಿ ಅವರು ನಿವೃತ್ತರಾದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರನ್ನು ಅಭಿನಂದಿಸಿ ಅವರ ಮಾತನಾಡಿದರು.

ಮನುಷ್ಯನ ಜೀವನದಲ್ಲಿ ವೃತ್ತಿ, ಪ್ರವೃತ್ತಿ ಮತ್ತು ನಿವೃತ್ತಿ ಬಹಳ ಮುಖ್ಯವಾದ ಘಟಕ. ಈ ಘಟಕವನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ದಾಟಬೇಕಾಗಿದೆ. ಈ ಮಧ್ಯೆ ಸಮಾಜಕ್ಕೆ ನೀಡುವ ಕೊಡುಗೆ ಬಹಳ ಮುಖ್ಯವಾದದ್ದು ಎಂದರು. ಪುಟ್ಟಸ್ವಾಮಿ ಅವರು ತಮ್ಮ ವೃತ್ತಿ ಜೀವನದಲ್ಲಿ ಉತ್ತಮ ಸೇವೆ ಸಲ್ಲಿಸಿ ಸಹಸ್ರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದಾರೆ. ಇವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಆಶಿಸಿದರು.

ನಿವೃತ್ತ ಉಪನ್ಯಾಸಕ ಪ್ರೊ.ಎಂ.ಟಿ. ಪುಟ್ಟಸ್ವಾಮಿ ಮಾತನಾಡಿ, ನನ್ನ ವೃತ್ತಿ ಜೀವನ ದಲ್ಲಿ ವಿದ್ಯೆ ಪಡೆದ ಬಹಳಷ್ಟು ವಿದ್ಯಾರ್ಥಿ ಗಳು ಉನ್ನತ ಅಂಕಗಳಿಸಿ ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಮತ್ತು ಉದ್ಯಮಿಗಳಾಗಿದ್ದಾರೆ. ಇದರಿಂದ ನನ್ನ ಉಪ ನ್ಯಾಸಕ ವೃತ್ತಿ ನನ್ನ ಜೀವನದಲ್ಲಿ ಸಾರ್ಥಕತೆ ತಂದಿದೆ ಎಂದು ಭಾವಿಸಿದ್ದೇನೆ ಎಂದು ಸಂತಸ ಪಟ್ಟರು. ನನ್ನ ವೃತ್ತಿ ಜೀವನಕ್ಕೆ ಅವಕಾಶ ಮಾಡಿ ಕೊಟ್ಟ ಟ್ರಸ್ಟ್‍ನ ಅಧ್ಯಕ್ಷ ಜಿ.ಮಾದೇಗೌಡ ಹಾಗೂ ಅಣ್ಣೂರು ಎಸ್. ಸಿದ್ದೇಗೌಡರನ್ನು ಈ ಸಂದರ್ಭ ನೆನಪಿಸಿ ಕೊಳ್ಳುತ್ತಾ ಅವರ ವೃತ್ತಿ ಜೀವನದ ಏಳು ಬೀಳುಗಳ ಅನುಭವವನ್ನು ಹಂಚಿಕೊಂಡರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ. ಶಿವಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ವೇಳೆ ಉಪನ್ಯಾಸಕರಾದ ಡಾ.ಮಾ. ರಾಮಕೃಷ್ಣ, ಎಸ್.ರೇವಣ್ಣ, ಪ್ರೊ. ನಾಗೇಂದ್ರ, ಪ್ರೊ.ಜವರೇಗೌಡ, ಹೊನ್ನಾ ಯಕನಹಳ್ಳಿ ರೇವಣ್ಣ ಸೇರಿದಂತೆ ಇತರರಿದ್ದರು.

Translate »