ಭಾರತೀನಗರ: ಇಲ್ಲಿನ ಚಾಮುಂ ಡೇಶ್ವರಿ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆಯ ಪೂರ್ವಭಾವಿಯಾಗಿ ಬಾಯ್ಲರ್‌ಗೆ ಕಾರ್ಖಾನೆ ಉಪಾಧ್ಯಕ್ಷ ಎಸ್.ಬ್ರೀಟೋ ಪೂಜೆ ಸಲ್ಲಿಸಿದರು.
ನಂತರ ಮಾತನಾಡಿದ ಅವರು, ಪ್ರಸಕ್ತ ವರ್ಷ ಕಬ್ಬು ಅರೆಯಲು ಈಗಾಗಲೇ ಪೂರ್ವಭಾವಿ ಸಭೆ ನಡೆಸಲಾಗಿದೆ. ಹೀಗಾಗಿ ಕಾರ್ಖಾನೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲು ಇಂದು ಬಾಯ್ಲರ್ ಪೂಜೆ ಮಾಡಲಾಗಿದೆ. ನಂತರದ ದಿನಗಳಲ್ಲಿ ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದರು.
ವ್ಯವಸ್ಥಾಪಕ ನಿರ್ದೇಶಕ ಎಂ.ಶ್ರೀನಿ ವಾಸ್ ಅವರು ಈ ಭಾಗದ ರೈತರ ಅನು ಕೂಲಕ್ಕಾಗಿ ಕಾರ್ಖಾನೆಯನ್ನು ನಿರ್ಮಿ ಸಿದ್ದು, ಕಬ್ಬು ಕಟಾವಿನ ಹಂತಕ್ಕೆ ಬಂದಿ ರುವುದರಿಂದ ಅವರ ಮಾರ್ಗದರ್ಶನ ದಲ್ಲಿ ಕಾರ್ಖಾನೆ ಪ್ರಾರಂಭಿಸಲು ಬಾಯ್ಲರ್‌ಗೆ ಆಡಳಿತ ಮಂಡಳಿ ಪೂಜೆ ಸಲ್ಲಿಸಿದೆ.
ಕಬ್ಬು ಅರೆವಿಕೆಗೆ ಬೇಕಾದ ಅಗತ್ಯ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೈತ ಬಾಂಧವರು ಸಹ ಕರಿಸಬೇಕೆಂದು ಕೋರಿದರು. ರೈತರಿಗೆ ಕೊಡಬೇಕಾಗಿರುವ ಬಾಕಿ ಹಣವನ್ನು ಕೂಡಲೇ ಪಾವತಿಸಿ ಶೀಘ್ರದಲ್ಲೇ ಕಾರ್ಖಾನೆ ಪ್ರಾರಂಭಿಸುವುದಾಗಿ ಇದೇ ವೇಳೆ ತಿಳಿಸಿ ದರು. ಈ ಸಂದರ್ಭ ಪ್ರಧಾನ ವ್ಯವಸ್ಥಾಪಕ ಮಣಿ, ಉಪಪ್ರಧಾನ ವ್ಯವಸ್ಥಾಪಕರಾದ ರವಿ, ಕೆಂಪೇಗೌಡ, ಸೆಂಥಿಲ್, ಮಣಿ ಮಾರನ್, ಆಡಳಿತಾಧಿಕಾರಿಗಳಾದ ನಿತೀಶ್, ಸುಧೀಂದ್ರಕಟ್ಟಿ, ಕಾರ್ಮಿಕರ ಸಂಘದ ಅಧ್ಯಕ್ಷ ಗೋಪಾಲ್, ಪದಾಧಿಕಾರಿಗಳಾದ ಸಿದ್ದ ರಾಜು, ಮಹದೇವು, ಪಾರ್ಥ, ಲೋಕೇಶ್, ಸೇರಿದಂತೆ ಕಾರ್ಮಿಕರು ಪಾಲ್ಗೊಂಡಿದ್ದರು.