ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಉನ್ನತ ಗುರಿ ಸಾಧಿಸಿ
ಮಂಡ್ಯ

ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಉನ್ನತ ಗುರಿ ಸಾಧಿಸಿ

July 25, 2018

ಭಾರತೀನಗರ: ಶಿಕ್ಷಣ ವಿದ್ಯಾರ್ಥಿಗಳ ಬದುಕನ್ನು ಬೆಳಗುವುದ ರಿಂದ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಉನ್ನತ ಗುರಿ ತಲುಪಬೇಕೆಂದು ಎಸ್‍ಬಿಐ ಮದ್ದೂರು ಹಿರಿಯ ಶಾಖಾ ಪ್ರಬಂಧಕ ಅನಂತಪ್ರಸಾದ್ ಸಲಹೆ ನೀಡಿದರು.

ಚಿಕ್ಕರಸಿನಕೆರೆ ಸರ್ಕಾರಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆ ಮಕ್ಕಳಿಗೆ ಪರಿಸರ ಜಾಗೃತಿ ವೇದಿಕೆ ಹಾಗೂ ಡಾ.ಜೈಭೀಮ್ ದಲಿತ ಜಾಗೃತಿ ಸಮಿತಿ ವತಿಯಿಂದ ಉಚಿತ ಲೇಖನ ಸಾಮಗ್ರಿ ಗಳನ್ನು ವಿತರಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳ ಬೆಳವಣಿಗೆಗೆ ಸರ್ಕಾರದ ಜೊತೆಗೆ ಸ್ವಯಂಸೇವಾ ಸಂಘ ಸಂಸ್ಥೆಗಳು ಕೈ ಜೋಡಿಸಿದಾಗ ಮಾತ್ರ ದೇಶ ಅಭಿವೃದ್ಧಿ ಕಾಣಲು ಸಾಧ್ಯ ಎಂದರು.

ಜೈ ಭೀಮ್ ದಲಿತ ಜಾಗೃತಿ ಸಮಿತಿ ಅಧ್ಯಕ್ಷ ಸಿ.ಶಿವಲಿಂಗಯ್ಯ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಓದಿದವರು ಒಳ್ಳೆಯ ಉದ್ಯೋಗವನ್ನು ಪಡಿಯುವ ಜೊತೆಗೆ ರಾಜ್ಯ, ಅಂತಾರಾಷ್ಟ್ರಿಯ ಮಟ್ಟದಲ್ಲಿ ಹೆಸರುಗಳಿಸಿರುವುದನ್ನು ಕಾಣಬಹುದು. ಆದ್ದರಿಂದ ಸರ್ಕಾರಿ ಶಾಲೆ ಎಂಬ ಕೀಳರಿಮೆ ಪಡದೆ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕೆಂದು ಮನವಿ ಮಾಡಿದರು.

ಪರಿಸರ ಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ಅಣ್ಣೂರು ಸತೀಶ್ ಮಾತನಾಡಿ, ಹಿಂದೆ ರಾಜ-ಮಹಾರಾಜರು ತಮ್ಮ ನಿಸ್ವಾರ್ಥ ಆಡಳಿತದ ಮೂಲಕ ಜನಗಳ ಸೇವೆಯೇ ಜನಾರ್ಧನ ಸೇವೆ ಎಂದು ರಾಜ್ಯವನ್ನಾಳುತ್ತಿದ್ದರು. ಆದರೆ ಇಂದಿನ ಜನತೆ ಪ್ರಗತಿ ಹೆಸರಿನಲ್ಲಿ ದೇಶದ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ ಎಂದು ವಿಷಾದಿಸಿದರು.

ಶಾಲೆಗೆ ನೋಟ್‍ಬುಕ್, ಲೇಖನ ಸಾಮಗ್ರಿ ನೀಡಿದ ಬೆಂಗಳೂರು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧೀಕ್ಷಕ ಕೆ.ಮೂರ್ತಿ, ಎಸ್‍ಬಿಐ ಪ್ರಬಂಧಕ ಅನಂತ ಪ್ರಸಾದ್ ಹಾಗೂ ಸಮಾಜ ಸೇವಕ ಮಹೇಂದ್ರ ಅವರನ್ನು ಮುಖ್ಯ ಶಿಕ್ಷಕ ಸಿ.ಎಚ್.ಶಂಕರಯ್ಯ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ರಾಜಣ್ಣ, ಎಸ್‍ಡಿ ಎಂಸಿ ಅಧ್ಯಕ್ಷ ಶಿವಪ್ರಸಾದ್, ಸಿದ್ದಪ್ಪ, ಶಿಕ್ಷಕರಾದ ಡಿ.ಎಂ.ಪವಿತ್ರ, ಬಿ.ಎಂ. ಪ್ರಭುಪ್ರಸಾದ್, ಕೆ.ಸಿ.ಮಹೇಂದ್ರ, ವಿಶಾಲಾಕ್ಷಮ್ಮ ಸೇರಿದಂತೆ ಇತರರಿದ್ದರು.

Translate »