ಬಡವರಿಗೆ ನಿವೇಶನ ಕಲ್ಪಿಸಲು ಸರ್ಕಾರ ಬದ್ಧ
ಮಂಡ್ಯ

ಬಡವರಿಗೆ ನಿವೇಶನ ಕಲ್ಪಿಸಲು ಸರ್ಕಾರ ಬದ್ಧ

July 25, 2018

ಮಂಡ್ಯ: ನಿವೇಶನ ವಂಚಿತರಿಗೆ ನಿವೇಶನ ಕಲ್ಪಿಸಲು ಸರ್ಕಾರ ಬದ್ಧ ಎಂದು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ ತಿಳಿಸಿದರು.

ಕೊತತ್ತಿ ಜಿಪಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿಂದು ಪ್ರವಾಸ ಕೈಗೊಂಡು ಇಂಡುವಾಳು ಗ್ರಾಮದಲ್ಲಿ ಸಾರ್ವಜನಿಕರ ಕುಂದುಕೊರತೆ ಆಲಿಸಿ ಅವರು ಮಾತ ನಾಡಿದರು. ಗ್ರಾಮದಲ್ಲಿರುವ ನಿವೇಶನ ವಂಚಿತರಿಗೆ ನಿವೇಶನ ಕಲ್ಪಿಸಲು ಸರ್ಕಾರ ಉದ್ದೇಶಿಸಿದೆ. ಗ್ರಾಪಂನಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ತಾಲೂಕು ಆಡಳಿತ ಸರ್ಕಾರಿ ಜಮೀನು ಗುರುತಿಸಿ, ಇಲ್ಲವಾದರೆ ಖಾಸಗಿಯವರಿಂದ ಖರೀ ದಿಸಿ ನಿವೇಶನ ಹಂಚಿಕೆಗೆ ಮುಂದಾಗು ವಂತೆ ಸಲಹೆ ನೀಡಿದರು.

ಗ್ರಾಮದ ಜನತೆ ಹಲವಾರು ಕುಂದು ಕೊರತೆಗಳ ಬಗ್ಗೆ ಮನವಿ ಸಲ್ಲಿಸಿದ್ದಾರೆ. ಹಂತ ಹಂತವಾಗಿ ಆದ್ಯತೆ ಮೇರೆಗೆ ಬಗೆಹರಿ ಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮತದಾರರ ಪ್ರೀತಿ ವಿಶ್ವಾಸಕ್ಕೆ ಋಣಿಯಾಗಿ ದ್ದೇನೆ. ಗ್ರಾಮದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ ಎಂದರು.

ತಾಲೂಕು ಅಧಿಕಾರಿಗಳ ಜೊತೆ ಪ್ರತಿದಿನ 10 ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸುತ್ತಿದ್ದೇನೆ. ಜನರಿಂದ ಉತ್ತಮ ಪ್ರತಿ ಕ್ರಿಯೆ ದೊರಕುತ್ತಿದ್ದು, ಕುಂದು ಕೊರತೆಗಳನ್ನು ಬಹಿರಂಗ ಚರ್ಚೆ ಮಾಡಲಾಗುತ್ತಿದೆ. ಸಣ್ಣಪುಟ್ಟ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸುತ್ತಿದ್ದೇವೆ. ಕಾರ್ಯಕ್ರಮ ಅರ್ಥಪೂರ್ಣವಾಗಿ, ಯಶಸ್ವಿಯಾಗಿ ನಡೆಯುತ್ತಿದೆ ಎಂದರು.

ಇಂಡುವಾಳು ಗ್ರಾಮದ ದೇವರಾಜು ಬಡಾವಣೆ ನಿವಾಸಿಗಳು ಮೈಸೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗಾಗಿ ಮನೆ, ನಿವೇಶನ ಕಳೆದುಕೊಳ್ಳುತ್ತಿದ್ದು, ಸರ್ವೆ ನಂಬರ್ ಗೊಂದಲದಿಂದ ಪರಿಹಾರ ವಂಚಿತರಾಗಿದ್ದೇವೆ. ಅಧಿಕಾರಿಗಳ ತಪ್ಪಿ ನಿಂದ ಬಡಾವಣೆಯ ನಿವಾಸಿಗಳಿಗೆ ತೊಂದರೆಯಾಗಿದ್ದು, ಕೂಡಲೇ ಸರಿಪಡಿಸಿ ಅನುಕೂಲ ಕಲ್ಪಿಸುವಂತೆ ಒತ್ತಾಯಿಸಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರಿಗೆ ಮನವಿ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಗ್ರಾಮೀಣ ನೀರು ನೈರ್ಮಲ್ಯ ಯೋಜನೆಯಡಿಯಲ್ಲಿ ಕೆಆರ್‍ಐ ಡಿಎಲ್ ವತಿಯಿಂದ ನಿರ್ಮಿಸುತ್ತಿರುವ ಶುದ್ಧ ಕುಡಿಯುವ ನೀರು ಘಟಕಕ್ಕೆ ಶಾಸಕ ರವೀಂದ್ರ ಶ್ರೀಕಂಠಯ್ಯ ಚಾಲನೆ ನೀಡಿದರು.

ಜಿಪಂ ಸದಸ್ಯ ತೂಬಿನಕೆರೆ ರಾಮ ಲಿಂಗಯ್ಯ, ಗ್ರಾಪಂ ಅಧ್ಯಕ್ಷೆ ಶೃತಿ, ಉಪಾಧ್ಯಕ್ಷ ಎಂ.ಯೋಗೇಶ್, ಪಿಡಿಓ ಶಿವಲಿಂಗೇ ಗೌಡ, ತಾಪಂ ಇಓ ನಾಗರಾಜು, ತಹಸೀಲ್ದಾರ್ ನಾಗೇಶ್, ಕೊತ್ತತ್ತಿ ರಾಜು, ಕರೀಗೌಡ, ಇಂಡುವಾಳು ಬಸವರಾಜು ಮತ್ತಿತರರು ಈ ವೇಳೆ ಹಾಜರಿದ್ದರು.

ಕೃತಜ್ಞತೆ ಸಲ್ಲಿಕೆ: ಇಂಡುವಾಳು ಸೇರಿ ದಂತೆ ಕಿರಗಂದೂರು, ಕ್ಯಾತುಂಗೆರೆ, ಮೊಳೆ ಕೊಪ್ಪಲು, ಬಿ.ಹುಲ್ಲುಕೆರೆ, ಹುಲ್ಲುಕೆರೆ ಕೊಪ್ಪಲು, ಎ.ಹುಲ್ಲುಕೆರೆ, ಬೇವಿನಹಳ್ಳಿ, ಲಾಳನ ಕೆರೆ, ಕೊತ್ತತ್ತಿ ಗ್ರಾಮಗಳಲ್ಲಿಂದು ರವೀಂದ್ರ ಶ್ರೀಕಂಠಯ್ಯ ಜನತೆಯ ಕುಂದುಕೊರತೆ ಆಲಿಸಿ, ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.

Translate »