ಮಂಡ್ಯ: ನಿವೇಶನ ವಂಚಿತರಿಗೆ ನಿವೇಶನ ಕಲ್ಪಿಸಲು ಸರ್ಕಾರ ಬದ್ಧ ಎಂದು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ ತಿಳಿಸಿದರು. ಕೊತತ್ತಿ ಜಿಪಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿಂದು ಪ್ರವಾಸ ಕೈಗೊಂಡು ಇಂಡುವಾಳು ಗ್ರಾಮದಲ್ಲಿ ಸಾರ್ವಜನಿಕರ ಕುಂದುಕೊರತೆ ಆಲಿಸಿ ಅವರು ಮಾತ ನಾಡಿದರು. ಗ್ರಾಮದಲ್ಲಿರುವ ನಿವೇಶನ ವಂಚಿತರಿಗೆ ನಿವೇಶನ ಕಲ್ಪಿಸಲು ಸರ್ಕಾರ ಉದ್ದೇಶಿಸಿದೆ. ಗ್ರಾಪಂನಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ತಾಲೂಕು ಆಡಳಿತ ಸರ್ಕಾರಿ ಜಮೀನು ಗುರುತಿಸಿ, ಇಲ್ಲವಾದರೆ ಖಾಸಗಿಯವರಿಂದ ಖರೀ ದಿಸಿ ನಿವೇಶನ ಹಂಚಿಕೆಗೆ ಮುಂದಾಗು ವಂತೆ…
ದಲಿತರೊಂದಿಗೆ ಬಹಿರಂಗ ಸಂವಾದ ನಡೆಸಿದ ಶಾಸಕ ರವೀಂದ್ರ ಶ್ರೀಕಂಠಯ್ಯ
July 2, 2018ಮಂಡ್ಯ: ಇದೇ ಪ್ರಥಮ ಬಾರಿಗೆ ಪರಿಶಿಷ್ಠ ಜಾತಿ ಮತ್ತು ಪಂಗಡದವರೊಂದಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಇಂದು ನಡೆಸಿದ ಸಂವಾದದಲ್ಲಿ ಸಮಸ್ಯೆಗಳ ಮಹಾ ಪೂರವೇ ಹರಿದು ಬಂತು..! ನಗರದ ಗಾಂಧಿ ಭವನದಲ್ಲಿಂದು ಆಯೋ ಜಿಸಲಾಗಿದ್ದ ಶ್ರೀರಂಗಪಟ್ಟಣ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಪರಿಶಿಷ್ಟ ಜಾತಿ ಹಾಗೂ ಪಂಗಡದವರೊಂದಿಗೆ ಸಂವಾದ ಕಾರ್ಯ ಕ್ರಮದಲ್ಲಿ ಕಾವೇರಿ ನದಿ ದಡದಲ್ಲಿದ್ದರೂ ಮಹದೇವಪುರಕ್ಕೆ ಶುದ್ಧ ಕುಡಿಯುವ ನೀರೇ ಇಲ್ಲಾ…. ಸ್ಮಶಾನ ಒತ್ತುವರಿಯಾಗಿದ್ದು ಹೆಣ ಹೂಳಲು ಜಾಗವೇ ಇಲ್ಲ…ರಸ್ತೆ, ಚರಂಡಿ ಮಾಡಿಸಿ ಕೊಡಿ… ನಿರಂತರ ದೌರ್ಜನ್ಯ…
ರೈತರ ಅಲೆದಾಟ: ಅಧಿಕಾರಿಗಳ ವಿರುದ್ಧ ಶಾಸಕ ಆಕ್ರೋಶ
June 20, 2018ಮಂಡ್ಯ: ರೈತರು ಅತೀ ಹೆಚ್ಚು ತಾಲೂಕು ಕಚೇರಿಗೆ ಅಲೆದಾಡುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂಬ ದೂರು ಬಂದಿದೆ. ಸಾರ್ವಜನಿಕ ಕೆಲಸ ಮಾಡಿಕೊಡಲು ವಿಳಂಬ ಮಾಡು ತ್ತಿರುವುದೇಕೆ ಎಂದು ಅಧಿಕಾರಿಗಳ ವಿರುದ್ದ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ ಹರಿ ಹಾಯ್ದ ಪ್ರಸಂಗ ತಾಪಂನಲ್ಲಿ ನಡೆಯಿತು. ನಗರದ ತಾಪಂ ಸಭಾಂಗಣದಲ್ಲಿಂದು ಜರುಗಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರನ್ನು ವಿನಾಕಾರಣ ಅಲೆದಾಡಿಸದೇ ಸಕಾಲದಲ್ಲಿ ಅವರ ಕೆಲಸಗಳನ್ನು ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ರೈತರ…
ಜಿಲ್ಲಾ ಉಸ್ತುವಾರಿ ಪಟ್ಟಕ್ಕಾಗಿ ಮುಸುಕಿನ ಗುದ್ದಾಟ ನಾಗಯ್ಯ, ಲಾಳನಕೆರೆ
June 12, 2018ಮಂಡ್ಯ: ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲಿ ಆಂತರಿಕ ಭಿನ್ನಮತ ಸ್ಫೋಟ ಗೊಂಡಿದೆ. ಸಕ್ಕರೆ ನಾಡಿನ ಉಸ್ತುವಾರಿ ಪಟ್ಟಕ್ಕಾಗಿ ಸಚಿವರಿಬ್ಬರ ನಡುವಿನ ಮುಸುಕಿನ ಗುದ್ದಾಟ ತಾರಕಕ್ಕೇರಿದ್ದು, ಖಾತೆ ಹಂಚಿಕೆ ಕ್ಯಾತೆ ಮುಗಿದ ಬೆನ್ನಲ್ಲೇ ಜೆಡಿಎಸ್ ವರಿಷ್ಠರಿಗೆ ಹೊಸ ತಲೆನೋವು ಶುರುವಾಗಿದೆ. ಮಂಡ್ಯ ಜಿಲ್ಲಾ ಉಸ್ತುವಾರಿಗಾಗಿ ಸಚಿವ ಸಿ.ಎಸ್.ಪುಟ್ಟರಾಜು ಪಟ್ಟು ಹಿಡಿದಿದ್ದು, ಬೀಗರಾದ ಸಚಿವ ಡಿ.ಸಿ.ತಮ್ಮಣ್ಣ ಪರ ಜೆಡಿಎಸ್‍ನ ದೊಡ್ಡಗೌಡರು ಬ್ಯಾಟಿಂಗ್ ನಡೆಸುತ್ತಿರುವುದು ಜೆಡಿಎಸ್‍ನೊಳಗಿನ ಭಿನ್ನಮತಕ್ಕೆ ನಾಂದಿಯಾಗಿದೆ. ಮಂಡ್ಯ ದಳದೊಳಗಿನ ಈ ಆಂತರಿಕ ಕಚ್ಚಾಟ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಹಂಚಿಕೆ…
ಕಾಂಗ್ರೆಸ್‍ನಿಂದ ಮೈತ್ರಿ ಮುಜುಗರ: ಜೆಡಿಎಸ್ ಶಾಸಕ ಬೇಸರ
May 30, 2018ಮಂಡ್ಯ: ಅಧಿಕಾರಕ್ಕೆ ಬರುವಾಗ ಬೇಷರತ್ ಬೆಂಬಲ ಘೋಷಿಸಿದ್ದ ಕಾಂಗ್ರೆಸ್ ಇದೀಗ ಕ್ಷಣ ಕ್ಷಣಕ್ಕೂ ಷರತ್ತು ವಿಧಿಸುತ್ತಿದೆ. ಕಾಂಗ್ರೆಸ್ ನಾಯಕರ ಈ ನಡೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮಾತ್ರವಲ್ಲ ನಮಗೂ ಬೇಸರ ತಂದಿದೆ ಎಂದು ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತಂತ್ರ ಫಲಿತಾಂಶದಿಂದಾಗಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆರಂಭದಲ್ಲಿ ಬೇಷರತ್ ಬೆಂಬಲ ಎಂದಿದ್ದ ಕಾಂಗ್ರೆಸ್ ನಾಯಕರು ಅಧಿಕಾರಕ್ಕೆ ಬಂದ ನಂತರ ನಾನಾ ಷರತ್ತು ವಿಧಿಸುತ್ತಿದ್ದಾರೆ. ಸರ್ಕಾರ ರಚನೆಯಾಗಿ ವಾರವಾದರೂ…