ವಕೀಲ ಅಜಿತ ನಾಯಕ ಹತ್ಯೆ ಖಂಡಿಸಿ ವಕೀಲರ ಪ್ರತಿಭಟನೆ
ಚಾಮರಾಜನಗರ

ವಕೀಲ ಅಜಿತ ನಾಯಕ ಹತ್ಯೆ ಖಂಡಿಸಿ ವಕೀಲರ ಪ್ರತಿಭಟನೆ

July 31, 2018
  • ಕಾರ್ಯ ಕಲಾಪ ಬಹಿಷ್ಕಾರ
  • ವಕೀಲರ ಸಂರಕ್ಷಣೆ ಕಾಯ್ದೆ ಜಾರಿಗೆ ಒತ್ತಾಯ

ಚಾಮರಾಜನಗರ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಹಿರಿಯ ವಕೀಲ ಹಾಗೂ ಉತ್ತರ ಕರ್ನಾಟಕ ತಾಲೂಕು ಹೋರಾಟ ಸಮಿತಿ ಅಧ್ಯಕ್ಷರಾದ ಅಜಿತ ನಾಯಕ(57) ಹತ್ಯೆ ಖಂಡಿಸಿ ನಗರದಲ್ಲಿ ಸೋಮವಾರ ವಕೀಲರು ನ್ಯಾಯಾಲಯದ ಕಾರ್ಯ-ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ನ್ಯಾಯಾಲಯದ ಆವರಣದಲ್ಲಿರುವ ಜಿಲ್ಲಾ ವಕೀಲರ ಸಂಘದ ಕಚೇರಿಯಲ್ಲಿ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ ವಕೀಲರು, ಪ್ರಕರಣವನ್ನು ಖಂಡಿಸಿ ನ್ಯಾಯಾಲಯದ ಕಲಾಪದಿಂದ ಹೊರಗುಳಿಯುವಂತೆ ಸರ್ವಾನುಮತದಿಂದ ತೀರ್ಮಾನ ಕೈಗೊಳ್ಳಲಾಯಿತು. ಸಭೆಯಲ್ಲಿ ವಕೀಲ ಅಜಿತ ನಾಯಕ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಮಾತನಾಡಿ, ರಾಜ್ಯದಲ್ಲಿ ನಿರಂತರವಾಗಿ ವಕೀಲರ ಮೇಲೆ ಹಲ್ಲೆ ಹಾಗೂ ಹತ್ಯೆ ನಡೆಯುತ್ತಿದೆ. ಈ ಬಗ್ಗೆ ವಕೀಲರ ಸಂರಕ್ಷಣೆ ಕಾಯ್ದೆ ಜಾರಿಗೆ ತರಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ವಕೀಲ ಅಜಿತ ನಾಯಕ ಅವರ ಹತ್ಯೆ ಮಾಡಿರುವ ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ರೀತಿಯ ಹೋರಾಟವನ್ನು ಜಿಲ್ಲಾ ವಕೀಲರ ಸಂಘವು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಜಿಲ್ಲಾ ವಕೀಲ ಸಂಘದ ಪ್ರಧಾನ ಕಾರ್ಯದರ್ಶಿ ಅರುಣ್‍ಕುಮಾರ್, ಉಪಾಧ್ಯಕ್ಷ ಶಿವಪ್ರಸನ್ನ, ಖಜಾಂಚಿ ಎಸ್.ಜೆ.ಮಹಾಲಿಂಗಸ್ವಾಮಿ, ಜಂಟಿ ಕಾರ್ಯದರ್ಶಿ ದಲಿತ್‍ರಾಜ್, ಕಾರ್ಯಕಾರಿ ಸಮಿತಿ ಸದಸ್ಯರಾದ ಎಚ್.ಎಸ್.ಮಹೇಂದ್ರ, ಎಂ.ಎಸ್.ಮೋಹನ್, ಜಗದೀಶ್, ಆರ್.ಗಿರೀಶ್, ಮಹೇಶ್‍ಕುಮಾರ್, ಬಿ.ವನಜಾಕ್ಷಿ, ಕೆ.ಎನ್.ಮಂಜುಳ, ಮಾಜಿ ಅಧ್ಯಕ್ಷರಾದ ಕೆ.ಬಿ.ಶಿವರುದ್ರಪ್ಪ, ಕೆ.ಬಾಲಸುಬ್ರಮಣ್ಯ, ಪುಟ್ಟರಾಜು, ರಾಮಸಮುದ್ರ ಪುಟ್ಟಸ್ವಾಮಿ, ವಕೀಲರಾದ ವಿ.ನಾಗರಾಜೇಂದ್ರ, ಶಿವರಾಮಯ್ಯ, ಎಂ.ಶಿವಲಿಂಗೇಗೌಡ, ಎಂ.ಶಿವರಾಮು, ಬಿ.ಜೆ.ಜಯಪ್ರಕಾಶ್, ಸಿ.ವಿ.ರಾಘವೇಂದ್ರಗುರು, ಪುಟ್ಟರಾಚಯ್ಯ, ಕೆ.ಎಸ್.ಚೇತನ್‍ಪ್ರಕಾಶ್, ಬಿ.ವಿದ್ಯಾಲತಾ, ನಾಗಮ್ಮ, ಪದ್ಮನಾಭ, ಕೆ.ಪಿ.ನಾಗರಾಜು, ಐಸಾನ್ ಜಾವಿದ್, ಪ್ರಸನ್‍ಕುಮಾರ್, ಮಾದೇಶ್, ಶ್ರೀನಿವಾಸ್, ಜಯಶಂಕರ್, ಕುಮಾರ್, ಶಿವಸ್ವಾಮಿ, ಮಹೇಶ್, ಸುಂದರ್, ಆರ್.ರಂಗಸ್ವಾಮಿ, ನಂದೀಶ್, ಚಂದ್ರು ಹಾಜರಿದ್ದರು.

Translate »