ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಜಿಲ್ಲೆಯಲ್ಲಿ ಶೇ.83.92 ರಷ್ಟು ಶಾಂತಿಯುತ ಮತದಾನ
ಮಂಡ್ಯ

ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಜಿಲ್ಲೆಯಲ್ಲಿ ಶೇ.83.92 ರಷ್ಟು ಶಾಂತಿಯುತ ಮತದಾನ

June 9, 2018

ಮಂಡ್ಯ: ದಕ್ಷಿಣ ಶಿಕ್ಷಕರ ಕ್ಷೇತ್ರ ದಿಂದ ವಿಧಾನ ಪರಿಷತ್‍ಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಜಿಲ್ಲೆಯಾದ್ಯಂತ ಶೇ. 83.92ರಷ್ಟು ಮತದಾನವಾಗಿದೆ.ಮಂಡ್ಯ ನಗರದಲ್ಲಿ 3 ಮತಗಟ್ಟೆ ಕೇಂದ್ರ ಗಳನ್ನು ಸ್ಥಾಪಿಸಲಾಗಿತ್ತು. ಮಳವಳ್ಳಿ, ಮದ್ದೂರು, ನಾಗಮಂಗಲ, ಪಾಂಡವಪುರ, ಶ್ರೀರಂಗಪಟ್ಟಣ ಹಾಗೂ ಕೆ.ಆರ್.ಪೇಟೆ ತಾಲೂಕುಗಳಲ್ಲಿ ಒಂದೊಂದು ಮತಗಟ್ಟೆ ಕೇಂದ್ರ ತೆರೆಯಲಾಗಿತ್ತು. ಬೆಳಿಗ್ಗೆ 7 ರಿಂದ ಸಂಜೆ 5ರವರೆಗೆ ಮತದಾನ ಶಾಂತಿ ಯುತವಾಗಿ ನಡೆಯಿತು.

ಪಾಂಡವಪುರ ಅತೀ ಹೆಚ್ಚು ಶೇ.92. 19ರಷ್ಟು ಮತಚಲಾವಣೆ ಯಾದರೆ, ಶ್ರೀರಂಗ ಪಟ್ಟಣದಲ್ಲಿ ಅತೀ ಕಡಿಮೆ ಶೇ.71.60ರಷ್ಟು ಮತದಾನವಾಗಿದೆ. ಇನ್ನುಳಿದಂತೆ ಕೆ.ಆರ್. ಪೇಟೆಯಲ್ಲಿ ಶೇ.88.53, ನಾಗಮಂಗಲ ದಲ್ಲಿ ಶೇ.91.16, ಮಂಡ್ಯ ಮತಗಟ್ಟೆ 19ರಲ್ಲಿ ಶೇ.81.05, ಮತಗಟ್ಟೆ 19ರಲ್ಲಿ ಶೇ.82.47, ಮತಗಟ್ಟೆ 20ರಲ್ಲಿ ಶೇ.80.06, ಮದ್ದೂರಲ್ಲಿ ಶೇ. 82.79 ಹಾಗೂ ಮಳವಳ್ಳಿಯಲ್ಲಿ ಶೇ.86. 25ರಷ್ಟು ಮತಗಳು ಚಲಾವಣೆಗೊಂಡಿವೆ.

ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ 3,180 ಪುರು ಷರು, 1,676 ಮಹಿಳೆಯರು, 1 ಇತರರು ಸೇರಿದಂತೆ ಒಟ್ಟು 4,857 ಮತದಾರರಿ ದ್ದಾರೆ. ಈ ಪೈಕಿ 2,768 ಪುರುಷರು, 1,307 ಮಹಿಳೆಯರು, 1 ಇತರರು ಸೇರಿ ದಂತೆ ಒಟ್ಟು 4076 ಮಂದಿ ತಮ್ಮ ಹಕ್ಕು ಚಲಾಯಿಸಿದರು.
ಕೆ.ಆರ್.ಪೇಟೆ: ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಇಂದು ನಡೆದ ಚುನಾವಣೆಯಲ್ಲಿ ತಾಲೂಕಿ ನಲ್ಲಿ ಒಟ್ಟು 401 ಮತಗಳ ಪೈಕಿ 355ಮತ ಗಳು ಚಲಾವಣೆಯಾಗಿದ್ದು, ಶೇ.88.53 ರಷ್ಟು ಮತದಾನವಾಗಿದೆ.

ಪಟ್ಟಣದ ಮಿನಿ ವಿಧಾನಸೌಧದಲ್ಲಿ ಮತ ಗಟ್ಟೆಯನ್ನು ತೆರೆಯಲಾಗಿತ್ತು. ತಾಲೂಕಿ ನಲ್ಲಿ ಬೆಳಿಗ್ಗೆ ಮಳೆಯಾಗುತ್ತಿದ್ದ ಕಾರಣ ಮಂದಗತಿಯಲ್ಲಿ ನಡೆದ ಮತದಾನ ಮಧ್ಯಾಹ್ನದ ನಂತರ ಚುರುಕಾಗಿ ನಡೆಯಿತು. ಒಟ್ಟು 401ಮತದಾರರ ಪೈಕಿ 355ಮಂದಿ ತಮ್ಮ ಹಕ್ಕು ಚಲಾವಣೆ ಮಾಡಿದ್ದು ಶೇ. 88.52ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿ ತಹಸೀಲ್ದಾರ್ ಗುರು ಸಿದ್ದಯ್ಯ ಹಿರೇಮಠ್ ತಿಳಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಪರ ಕೆಯುಐಡಿಎಫ್‍ಸಿ ರಾಜ್ಯಾಧ್ಯಕ್ಷ ಎಂ.ಡಿ. ಕೃಷ್ಣಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್, ಜಿಪಂ ಸದಸ್ಯ ಎಲ್.ದೇವರಾಜು, ಜಿಪಂ ಮಾಜಿ ಉಪಾಧ್ಯಕ್ಷ ಎಸ್.ಅಂಬರೀಶ್, ಜಿಪಂ ಮಾಜಿ ಉಪಾಧ್ಯಕ್ಷ ಬಿ.ನಾಗೇಂದ್ರ ಕುಮಾರ್, ಜಿಲ್ಲಾ ಕಾಂಗ್ರೆಸ್ ಎಸ್.ಟಿ. ವಿಭಾಗದ ಅಧ್ಯಕ್ಷ ರಾಜಾನಾಯಕ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್, ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಬಿ. ರವಿಕುಮಾರ್, ಉಪಾಧ್ಯಕ್ಷ ಸಿ.ಬಿ.ಚೇತನ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚೇತನಾ ಮಹೇಶ್ ಮತ್ತಿತರರು ಮತಯಾಚಿಸಿದರು.
ಬಿಜೆಪಿ ಅಭ್ಯರ್ಥಿ ನಿರಂಜನಮೂರ್ತಿ ಪರ ರಾಜ್ಯ ಬಿಜೆಪಿ ಕಾರ್ಯಕಾರಿಣ ಸದಸ್ಯ ರಾದ ಕೆ.ಎನ್.ಕುಮಾರಸ್ವಾಮಿ, ಎಸ್.ಸಿ. ಅರವಿಂದ್, ಬಿಜೆಪಿ ಉಪಾಧ್ಯಕ್ಷ ಎಸ್.ಪಿ. ಸಿದ್ದೇಶ್, ಕಾರ್ ಚಂದ್ರಶೇಖರ್, ಯುವ ಮೋರ್ಚಾ ಅಧ್ಯಕ್ಷ ಮಂಜುನಾಥ್ ತಾಲೂಕು ಬಿಜೆಪಿ ಕಾನೂನು ವಿಭಾಗದ ಅಧ್ಯಕ್ಷ ಪುರ ಮಂಜುನಾಥ್ ಮತ್ತಿತರರು ಮತಯಾಚಿಸಿದರು.

ಜೆಡಿಎಸ್ ಅಭ್ಯರ್ಥಿ ಮರಿತಿಬ್ಬೇಗೌಡರ ಪರ ತಾಲೂಕು ಜೆಡಿಎಸ್ ಅಧ್ಯಕ್ಷ ಆರ್. ವೆಂಕಟಸುಬ್ಬೇಗೌಡ, ರಾಜ್ಯ ಮೈಸೂರು ಲ್ಯಾಂಪ್ಸ್ ಮಾಜಿ ಅಧ್ಯಕ್ಷ ಬಿ.ಎಲ್. ದೇವರಾಜು, ಶಾಸಕ ನಾರಾಯಣಗೌಡ, ತಾಪಂ ಉಪಾಧ್ಯಕ್ಷ ಜಾನಕೀರಾಂ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್.ವಿಜಯಕುಮಾರ್ ಮತ್ತಿತರರು ಪ್ರತ್ಯೇಕವಾಗಿ ಹಾಕಲಾಗಿದ್ದ ಶಾಮಿಯಾನ ಬಳಿ ಕುಳಿತು ಮತದಾನ ಮಾಡಲು ಬರುತ್ತಿದ್ದ ಶಿಕ್ಷಕರಲ್ಲಿ ಮತ ಯಾಚನೆ ಮಾಡಿದರು.

ಪಾಂಡವಪುರ: ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ತಾಲೂಕಿನಲ್ಲಿ ಬಹುತೇಕ ಶಾಂತಿಯುತವಾಗಿ ನಡೆದಿದ್ದು, ಶೇ. 92.19ರಷ್ಟು ಮತದಾನವಾಗಿದೆ.

ಪಟ್ಟಣದ ಮಿನಿ ವಿಧಾನಸೌಧದ ತಹಶೀ ಲ್ದಾರ್ ಸಭಾಂಗಣದಲ್ಲಿ ಮತಗಟ್ಟೆ ತೆರೆಯ ಲಾಗಿತ್ತು. ತಾಲೂಕಿನ ಶಿಕ್ಷಕ ಮತದಾರರು ಬೆಳಿಗ್ಗೆಯಿಂದಲೇ ಮತಗಟ್ಟೆಗೆ ಆಗಮಿಸಿ ಬಿರುಸಿನಿಂದ ಮತ ಚಲಾಯಿಸಿದರು. ಬೆಳಿಗ್ಗೆ 7ಗಂಟೆಗೆ ಪ್ರಾರಂಭಗೊಂಡ ಮತದಾನ ಸಂಜೆ 5ರವರೆಗೆ ನಡೆಯಿತು. ಮತ ಚಲಾಯಿ ಸಲು ಮತಗಟ್ಟೆಗೆ ಆಗಮಿಸಿದ ಮತದಾರರು ಮತಗಟ್ಟೆ ಕೇಂದ್ರದಲ್ಲಿ ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು.

ಬೆಂಬಲಿಗರಿಂದ ಪ್ರಚಾರ: ಮತದಾನ ಹಿನ್ನೆಲೆಯಲ್ಲಿ ತಾಲೂಕು ಕಚೇರಿ ಸಮೀಪ ಅಭ್ಯರ್ಥಿಗಳ ಪರ ಬೆಂಬಲಿಗರು ಟೆಂಟ್ ಹಾಕಿಕೊಂಡು ಮತ ಚಲಾಯಿಸಲು ಬರುವ ಮತದಾರರನ್ನು ತಮ್ಮ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯದ ಮತ ನೀಡುವಂತೆ ಕೈ ಮುಗಿದು ಬೇಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮತ ದಾನದ ಹಿನ್ನೆಲೆಯಲ್ಲಿ ಮತಗಟ್ಟೆ ಸುತ್ತಲು ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿ ಸಲಾಗಿದ್ದು, ಮತಗಟ್ಟೆ ಸುತ್ತ 200 ಮೀವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದ್ದರು.

Translate »