51 ಅಡಿ ಎತ್ತರದ ಆಂಜನೇಯಸ್ವಾಮಿ ವಿಗ್ರಹ ಲೋಕಾರ್ಪಣೆಗೆ ಸಜ್ಜು
ಮಂಡ್ಯ

51 ಅಡಿ ಎತ್ತರದ ಆಂಜನೇಯಸ್ವಾಮಿ ವಿಗ್ರಹ ಲೋಕಾರ್ಪಣೆಗೆ ಸಜ್ಜು

June 14, 2018

ಕೆ.ಆರ್.ಪೇಟೆ: ಪಟ್ಟಣದ ಕೆರೆ ಬೀದಿಯ ಮುಕ್ಕಟ್ಟೆ ಚೌಕದ ಬಳಿ ಶ್ರೀಕಾರ್ಯಸಿದ್ಧಿ ಆಂಜನೇಯಸ್ವಾಮಿ ದೇವ ಸ್ಥಾನ ಟ್ರಸ್ಟ್ ವತಿಯಿಂದ ನೂತನವಾಗಿ 30ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ 51 ಅಡಿ ಎತ್ತರದ ಆಂಜನೇಯಸ್ವಾಮಿ ವಿಗ್ರಹ ಲೋಕಾರ್ಪಣೆಗೆ ಸಜ್ಜುಗೊಂಡಿದೆ.

ಜೂ. 15, 16, 17ರಂದು ಧಾರ್ಮಿಕ ವಿಶೇಷ ಪೂಜಾ ಕೈಂಕರ್ಯಗಳು ಜರುಗ ಲಿದೆ. ಕೊನೆಯ ದಿನದಂದು ಮಹಾ ಮಂಗಳಾ ರತಿ ಆದ ನಂತರ ದೇವಸ್ಥಾನಕ್ಕೆ ಭೇಟಿ ನೀಡುವ ಎಲ್ಲರಿಗೂ ಮಹಾ ಮಸ್ತಕಾಭಿಷೇಕದಲ್ಲಿ ಪಾಲ್ಗೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಅಭಿಷೇಕ ಮಾಡಲು ವಿಶೇಷ ಮೆಟ್ಟಿಲು ಗಳನ್ನು ನಿರ್ಮಾಣ ಮಾಡಲಾಗಿದ್ದು ಎಲ್ಲರೂ ಸ್ವಾಮಿಗೆ ಅಭಿಷೇಕ ಮಾಡಬಹು ದಾಗಿದೆ ಎಂದು ಟ್ರಸ್ಟ್‍ನ ಕಾರ್ಯಕ್ರಮ ಆಯೋಜಕರು ತಿಳಿಸಿದ್ದಾರೆ.

ನೂರಾರು ವರ್ಷಗಳ ಇತಿಹಾಸ ಇರುವ ಮೂಡಲ ಶ್ರೀಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಸ್ಥಳೀಯ ಯುವಕರು ಮತ್ತು ಭಕ್ತಾದಿಗಳು ಒಗ್ಗೂಡಿ ಕಾರ್ಯಸಿದ್ಧಿ ಆಂಜನೇಯಸ್ವಾಮಿ ದೇವಸ್ಥಾನ ಟ್ರಸ್ಟ್ ಮೂಲಕ ಎರಡು ವರ್ಷಗಳ ಕಾಲ ನಡೆಸಿದ ಪರಿಶ್ರಮದ ಫಲವಾಗಿ ಈಗ 51ಅಡಿ ಎತ್ತರದ ಬೃಹತ್ ಆಂಜನೇಯ ಮೂರ್ತಿಯು ಲೋಕಾರ್ಪಣೆಗೆ ಸಿದ್ಧವಾಗಿದೆ.
ಜೂ.15 ಮತ್ತು 16 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯ ಲಿವೆ. ಜೂ.17 ರಂದು ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಆಂಜನೇಯ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ, ಕಲಾ ದೇವತಾ ಹೋಮ, ಪ್ರಾಣ ಪ್ರತಿಷ್ಠಾಪನಾ ಪ್ರಧಾನ ಹೋಮ, ನಿರೀಕ್ಷಣೆ, ಕುಂಭಾಭಿಷೇಕದ ನಂತರ ಮಹಾ ಮಂಗಳಾರತಿ ನೇರವೇರಿಸಲಾಗುವುದು. ಮೂರೂ ದಿನವೂ ಅನ್ನದಾನ ಕಾರ್ಯ ಕ್ರಮ ಏರ್ಪಡಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರಬೇಕೆಂದು ಟ್ರಸ್ಟ್ ಮನವಿ ಮಾಡಿದೆ.

Translate »